ಸರ್ಕಾರದ ಪರಿಹಾರ ಹಣದ ಆಮಿಷ ತೋರಿ  ವೃದ್ಧೆಯರ ಆಭರಣ, ನಗದು ದೋಚಿದ ಖದೀಮರು
ಮೈಸೂರು

ಸರ್ಕಾರದ ಪರಿಹಾರ ಹಣದ ಆಮಿಷ ತೋರಿ  ವೃದ್ಧೆಯರ ಆಭರಣ, ನಗದು ದೋಚಿದ ಖದೀಮರು

December 7, 2018

ಮೈಸೂರು: ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10 ಸಾವಿರ ರೂ ಸಾಲ ಕೊಡಿಸುತ್ತೇನೆಂದು ಆಮಿಷ ತೋರಿಸಿದ ಅಪರಿಚಿತ ವ್ಯಕ್ತಿಯೋರ್ವ ಹಾಡಹಗಲೇ ವೃದ್ಧೆಯೊಬ್ಬರಿಂದ 4 ಸಾವಿರ ರೂ ನಗದು ಹಾಗೂ 17 ಗ್ರಾಂ ಚಿನ್ನದ ಆಭರಣ ದೋಚಿ ಪರಾರಿಯಾಗಿರುವ ಘಟನೆ ಮೈಸೂರಿನ ಸಿಟಿ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ.

ಮೈಸೂರಿನ ಕೆ.ಆರ್.ಮೊಹಲ್ಲಾ ನಿವಾಸಿ ಕಮಲಾ ಬಾಯಿ (70) ಆಭರಣ ಮತ್ತು ನಗದು ಕಳೆದುಕೊಂಡವರು. ಬುಧವಾರ ಮಧ್ಯಾಹ್ನ 2.30 ಗಂಟೆ ವೇಳೆಗೆ ಸಿಟಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ಕುಳಿತಿದ್ದ ಕಮಲಾಬಾಯಿ ಬಳಿ ಬಂದ ಅಪರಿಚಿತನೋರ್ವ ಅವರ ಪರಿಚಯ ಮಾಡಿಕೊಂಡಿದ್ದಾನೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನಾಗರಿಕರಿಗೆ ಸಾಲ ಸೌಲಭ್ಯ ಸಿಗುತ್ತದೆ. ನಿಮಗೆ 10 ಸಾವಿರ ರೂ. ಕೊಡಿಸುತ್ತೇನೆ ಎಂದ ಆತ, ಇದರ ಬಗ್ಗೆ ಮತ್ತಷ್ಟು ವಿವರ ನೀಡುವುದಾಗಿ ಕಮಲಾಬಾಯಿ ಅವರನ್ನು ಪುರಭವನ ಬಳಿ ಕರೆದೊಯ್ದು ನೀವು ಹೀಗೆ ಚಿನ್ನದ ಒಡವೆಗಳನ್ನು ಹಾಕಿಕೊಂಡಿದ್ದರೆ ಹಣ ಕೊಡುವುದಿಲ್ಲ ಎಂದು ಹೇಳಿ ಚಿನ್ನದ ಓಲೆಗಳನ್ನು ಬಿಚ್ಚಿಸಿ ಅವರ ಪರ್ಸ್‍ನಲ್ಲಿ ಇರಿಸಿದ್ದಾನೆ.

ನಾನು ಪರ್ಸ್ ಅನ್ನು ಹಿಡಿದುಕೊಂಡಿರುತ್ತೇನೆ ಎಂದು ಹೇಳಿ ದ್ದಾನೆ. ಆದರೆ ಕೊಡಲು ಕಮಲಾಬಾಯಿ ಅವರು ನಿರಾಕರಿಸಿ ದರಾದರೂ ಆತ ಚಿನ್ನದ ಓಲೆ ಹಾಗೂ 4 ಸಾವಿರ ರೂ ನಗದಿದ್ದ ಪರ್ಸ್ ಅನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿ ದ್ದಾನೆ. ಈ ಬಗ್ಗೆ ಮೊಮ್ಮಗ ಮೋಹನ್‍ಕುಮಾರ್‍ರೊಂದಿಗೆ ದೇವರಾಜ ಠಾಣೆಗೆ ತೆರಳಿ ವೃದ್ಧೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ದೇವರಾಜ ಠಾಣೆ ಇನ್‍ಸ್ಪೆಕ್ಟರ್ ಪ್ರಸನ್ನಕುಮಾರ್, ಸ್ಥಳ ಮಹಜರು ನಡೆಸಿ ಸಿಸಿ ಕ್ಯಾಮರಾ ಫುಟೇಜಸ್ ಗಳನ್ನು ಪಡೆದು ಆರೋಪಿ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

ಮತ್ತೊಂದು ಪ್ರಕರಣ: ಡಿಸೆಂಬರ್ 4ರಂದು ಮಗಳ ಮನೆಗೆ ಹೋಗಲು ಸಿಟಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಜವರಮ್ಮ ಎಂಬು ವರನ್ನು ನಿಮಗೆ ಸರ್ಕಾರದ ಆರ್ಥಿಕ ನೆರವು ಕೊಡಿಸುವುದಾಗಿ ನಂಬಿ ಸಿದ ಅಪರಿಚಿತ ವ್ಯಕ್ತಿ, ಇದರ ಬಗ್ಗೆ ಹೆಚ್ಚಿನ ವಿಷಯ ತಿಳಿಸಿಕೊಡು ವುದಾಗಿ ಹೇಳಿ ಚೆಲುವಾಂಬ ಆಸ್ಪತ್ರೆ ಬಳಿ ಕರೆದೊಯ್ದು 50 ಗ್ರಾಂನ 2 ಚಿನ್ನದ ಬಳೆಗಳು ಮತ್ತು 5 ಸಾವಿರ ರೂ ನಗದನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಒಡವೆಗಳನ್ನು ಹಾಕಿಕೊಂಡು ಓಡಾಡಿದರೆ ನಿಮಗೆ ಹಣ ಕೊಡುವುದಿಲ್ಲ ಎಂದು ಹೇಳಿ ಬಳೆಗಳನ್ನು ಕಸಿದು ಬ್ಯಾಗಿನಲ್ಲಿರಿಸಿ ಬ್ಯಾಗನ್ನು ಹತ್ತಿರದ ಎಳನೀರು ಅಂಗಡಿಯಲ್ಲಿರಿಸಿದ ಆತ, ಜವರಮ್ಮರನ್ನು ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಕೂರಿಸಿ, ಅಧಿಕಾರಿ ಬಳಿ ಮಾತನಾಡಿ ಬರುತ್ತೇನೆಂದು ಹೋದವನು 2 ತಾಸು ಕಳೆದರೂ ಬರಲಿಲ್ಲ. ಆತಂಕಗೊಂಡ ಜವರಮ್ಮ ಅವರು ಎಳನೀರು ಅಂಗಡಿ ಬಳಿ ಬಂದು ವಿಚಾರಿಸಿದಾಗ ನಿಮ್ಮ ಜೊತೆ ಬಂದಾತ ಆಗಲೇ ಬಂದು ಬ್ಯಾಗ್ ಅನ್ನು ತೆಗೆದುಕೊಂಡು ಹೋದ. ಆತ ಯಾರೆಂದು ನನಗೆ ಗೊತ್ತಿಲ್ಲ ಎಂದು ಅಂಗಡಿ ಮಾಲೀಕ ತಿಳಿಸಿದ. ಪ್ರಕರಣ ದಾಖಲಿಸಿಕೊಂಡಿರುವ ದೇವರಾಜ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎರಡೂ ಪ್ರಕರಣಗಳನ್ನೂ ಒಬ್ಬನೇ ಮಾಡಿದ್ದಾ ನೆಂಬ ಶಂಕೆಯಿಂದ ತಂಡಗಳನ್ನು ರಚಿಸಿ ಶೋಧ ನಡೆಸುತ್ತಿದ್ದಾರೆ.

Translate »