ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ
ಮೈಸೂರು

ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ

December 6, 2018

ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮಹತ್ವದ ನಿರ್ಧಾರವನ್ನು ಸಚಿವ ಸಂಪುಟ ಇಂದಿಲ್ಲಿ ತೆಗೆದುಕೊಂಡಿದೆ.

ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಕೃಷ್ಣಭೈರೇಗೌಡ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಪಡೆಯುವ ಎಲ್ಲಾ ಹೆಣ್ಣು ಮಕ್ಕಳಿಗೆ ಸರ್ಕಾರದ ಈ ಸವಲತ್ತು ದೊರೆಯಲಿದೆ ಎಂದರು.

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಉಚಿತ ಶಿಕ್ಷಣ ಅನ್ವಯವಾಗಲಿದ್ದು, ಇದರಿಂದ 3.17 ಲಕ್ಷ ವಿದ್ಯಾರ್ಥಿನಿಯರ ಬೋಧನಾ ಶುಲ್ಕವನ್ನು ಸರ್ಕಾರವೇ ಭರಿಸಲಿದೆ. ಇದರ ಲಾಭವನ್ನು 1.84 ಲಕ್ಷ ಪದವಿ ಹಾಗೂ 1.33 ಲಕ್ಷ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ಪಡೆಯಲಿದ್ದಾರೆ.

ಈ ಉದ್ದೇಶಕ್ಕಾಗಿ ಪ್ರತಿ ವರ್ಷ ರಾಜ್ಯ ಸರ್ಕಾರ 95 ಕೋಟಿ ರೂ. ಭರಿಸಲಿದೆ, ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿ ಮುಂದುವರೆಯುವಂತೆ ಪ್ರೋತ್ಸಾಹಿಸುವುದು ಈ ಸವಲತ್ತಿನ ಮುಖ್ಯ ಗುರಿಯಾಗಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸಭೆ ಅನು ಮತಿ ನೀಡಿರುವುದಲ್ಲದೆ, 450 ಕೋಟಿ ರೂ. ವೆಚ್ಚದಲ್ಲಿ 300 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ನಿರ್ಮಾಣಕ್ಕೂ ಒಪ್ಪಿದೆ. ಮೊದಲ ಹಂತದ ಕಟ್ಟಡ ಗಳ ನಿರ್ಮಾಣಕ್ಕೆ 90 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾ ಗಿದೆ ಎಂದರು. ರಾಜ್ಯ ಸರ್ಕಾರಿ ನೌಕರರ 6ನೇ ವೇತನ ಆಯೋಗದ ಪ್ರಮುಖ ಶಿಫಾರಸುಗಳಿಗೆ ಈಗಾಗಲೇ ಸರ್ಕಾರ ಅನುಮೋದನೆ ನೀಡಿದ್ದು, ಇದರ ಪ್ರತಿಯಾಗಿ ವಾರ್ಷಿಕ ಬೊಕ್ಕಸಕ್ಕೆ 10,500 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುತ್ತಿದೆ. ಉಳಿದ ಹಲವು ಭತ್ಯೆ ಹಾಗೂ ಇತರ ಸೇವಾ ನಿಯಮಗಳ ವ್ಯತ್ಯಾಸದ ಹಣವನ್ನು ಪಾವತಿ ಮಾಡಲು 400 ಕೋಟಿ ರೂ. ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ ಎಂದರು. ಸರ್ಕಾರಿ ಶಾಲೆ ಇಲ್ಲದ ಕಡೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸಿದ್ದಲ್ಲಿ ಆ ಶುಲ್ಕವನ್ನು ಮಾತ್ರ ಪಾವತಿಸಲು ಅನುವಾಗುವಂತೆ ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಅನುಮೋದನೆ ನೀಡಿತು.

ರಾಜ್ಯದಲ್ಲಿ ನ್ಯಾಯಬೆಲೆ ಅಂಗಡಿ ನಡೆಸುವವರಿಗೆ ಪ್ರತಿ ಕ್ವಿಂಟಾಲ್ ಕಮಿಷನ್ ಅನ್ನು 80 ರೂ.ನಿಂದ 100 ರೂ.ಗೆ ಹೆಚ್ಚಿಸಲು ಸಮ್ಮತಿಸಿದೆ. ಮೈಸೂರಿನ ಕೆ.ಆರ್. ನಗರ ತಾಲೂಕು ಹಾಡ್ಯ ಗ್ರಾಮದ ಬಳಿ ಕಾವೇರಿ ನದಿಯಿಂದ ನೀರನ್ನು ಎತ್ತಿ, ತಾಲೂಕಿನ 12 ಕೆರೆಗಳಿಗೆ ತುಂಬಿಸುವ 15 ಕೋಟಿ ರೂ. ಯೋಜನೆಯ ಪ್ರಸ್ತಾಪಕ್ಕೆ ಸಂಪುಟ ಅನುಮೋದನೆ ನೀಡಿತು. ರಾಜ್ಯದ ಪ್ರವಾಸಿ ತಾಣಗಳನ್ನು ಚಲನಚಿತ್ರಗಳಲ್ಲಿ ಅಳವಡಿಸುವ ಮೂಲಕ ಪ್ರಚಾರ ಕೊಡುವ ಚಿತ್ರಗಳಿಗೆ ಒಂದು ಕೋಟಿ ರೂ.ನಿಂದ 2.5 ಕೋಟಿ ರೂ.ವರೆಗೆ ಪೆÇ್ರೀತ್ಸಾಹ ಧನ ನೀಡುವ ಪ್ರವಾಸೋದ್ಯಮ ನೀತಿಗೆ ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯದಲ್ಲಿನ ಪ್ರವಾಸಿತಾಣಗಳಲ್ಲಿ ಚಿತ್ರೀಕರಿಸಿ ಇತರ ಭಾಷೆಗಳಲ್ಲೂ ಚಿತ್ರ ಪ್ರದರ್ಶಿಸಿದಲ್ಲಿ ಅಂತಹ ಚಿತ್ರಗಳಿಗೂ ಪೆÇ್ರೀತ್ಸಾಹ ಧನ ನೀಡಲಾಗುವುದು, ಇದಕ್ಕಾಗಿ ಉನ್ನತಮಟ್ಟದ ಸಮಿತಿ ಪರಾಮರ್ಶೆ ಮಾಡಲಿದೆ ಎಂದರು.

Translate »