ಪತ್ರಕರ್ತರೂ ಕೋವಿಡ್ ಫ್ರಂಟ್‍ಲೈನ್ ವಾರಿಯರ್ಸ್
ಮೈಸೂರು

ಪತ್ರಕರ್ತರೂ ಕೋವಿಡ್ ಫ್ರಂಟ್‍ಲೈನ್ ವಾರಿಯರ್ಸ್

May 6, 2021

ಕೆ.ಆರ್.ನಗರ, ಮೇ 5(ಕೆಟಿಆರ್)-ಪತ್ರ ಕರ್ತರು ಕೋವಿಡ್ ಫ್ರಂಟ್‍ಲೈನ್ ವಾರಿಯರ್ಸ್ ಎಂದು ಘೋಷಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಇದಕ್ಕೆ ಕಾರಣಕರ್ತರಾದ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ತಾಲೂಕು ಪತ್ರಕರ್ತರ ಸಂಘದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಸಂಘÀದ ಉಪಾಧ್ಯಕ್ಷ ವಿನಯ್ ದೊಡ್ಡಕೊಪ್ಪಲು ತಿಳಿಸಿದರು.

ಪಟ್ಟಣದ ಪತ್ರಕರ್ತರ ಸಂಘದಿಂದ ಸಂಘದ ಸದಸ್ಯರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಪತ್ರಕರ್ತರು ಕೂಡ ಕೋವಿಡ್ ಫ್ರಂಟ್‍ಲೈನ್ ವಾರಿಯರ್ಸ್ ಎಂದು ಘೋಷಣೆ ಮಾಡಿರುವುದು ಪತ್ರಕರ್ತರಿಗೆ ಕೋವಿಡ್ ಸಮಯದಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚುವಂತೆ ಮಾಡಿದೆ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯಂತೆ ಮಾಧ್ಯಮ ಮಿತ್ರರು ಕೂಡ ಕೋವಿಡ್ ಸಂಕಷ್ಟದ ಸಮಯದಲ್ಲಿ ಜೀವದ ಆಸೆ ಬಿಟ್ಟು ಕೆಲಸ ಮಾಡುತ್ತಿದ್ದು, ಅದರಂತೆ ಕೊರೊನಾ ವಾರಿ ಯರ್ಸ್ ಎಂದು ಘೋಷಣೆ ಮಾಡಿರು ವುದು ಪತ್ರಕರ್ತರಿಗೆ ಸಲ್ಲಬೇಕಾದ ಗೌರ ವವನ್ನು ದೊರಕಿಸಿಕೊಟ್ಟಿದ್ದಾರೆ ಎಂದರು.

ಕೊರೊನಾ ಕಫ್ರ್ಯೂನಿಂದ ಸಂಘದ ಸದಸ್ಯರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಅದ್ದರಿಂದ ಸಂಘದ ವತಿಯಿಂದ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಗಿದೆ ಎಂದರು. ಈ ಸಮಯದಲ್ಲಿ ಹಿರಿಯ ಪತ್ರಕರ್ತರಾದ ಚೈತನ್ಯ, ಪಂಡಿತ್ ನಾಟೀಕರ್, ಶಿಲ್ಪಾ ಶ್ರೀನಿವಾಸ್, ರಾಮಕೃಷ್ಟಗೌಡ, ಸಿ.ಸಿ.ಮಹದೇವ, ರವಿಕುಮಾರ್, ಯೋಗಾನಂದ, ಸ್ಪಿನ್‍ಕೃಷ್ಣ, ಜಿಟೆಕ್ ಶಂಕರ್, ಮೊಹಮ್ಮದ್ ಸಬೀರ್ ಸೇರಿದಂತೆ ಹಲವರಿದ್ದರು.

Translate »