ಲಾಕ್‍ಡೌನ್ ವೇಳೆ ವಲಸಿಗರಿಗೆ ಸಹಾಯಹಸ್ತ
ಮೈಸೂರು

ಲಾಕ್‍ಡೌನ್ ವೇಳೆ ವಲಸಿಗರಿಗೆ ಸಹಾಯಹಸ್ತ

July 6, 2020

ಬೆಂಗಳೂರು, ಜು. 5- ಕೊರೊನಾ ವೈರಸ್ ಲಾಕ್‍ಡೌನ್ ಸಂದರ್ಭದಲ್ಲಿ ಕರ್ನಾ ಟಕದಲ್ಲಿ ಬಿಜೆಪಿ ಪಕ್ಷ ಹಾಗೂ ಸರ್ಕಾರ ಒಟ್ಟಾಗಿ ಉತ್ತಮ ಕಾರ್ಯ ನಿರ್ವಹಣೆ ಮಾಡಿವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.

ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸೇವೆಯೇ ಸಂಘಟನೆ ಅಭಿಯಾನದ ಅವಲೋಕನಾ ಸಭೆಯಲ್ಲಿ ವಿಡಿಯೋ ಮೂಲಕ ಕರ್ನಾಟಕ ಸೇರಿದಂತೆ 7 ವಿವಿಧ ರಾಜ್ಯ ಗಳ ಬಿಜೆಪಿ ನಾಯಕರ ಜೊತೆ ಶನಿವಾರ ಸಂವಾದ ನಡೆಸಿದರು. ಈ ವೇಳೆ, ಸೋಂಕಿನ ಭಯವಿಲ್ಲದೇ ಸಂಕಷ್ಟಕ್ಕೊಳಗಾದ ಲಕ್ಷಾಂತರ ಜನರಿಗೆ ರಾಜ್ಯ ಬಿಜೆಪಿ ಕಾರ್ಯಕರ್ತರು ಸಹಾಯ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಪರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾಹಿತಿ ನೀಡಿದರು. ಈ ಕುರಿತಂತೆ ಸಂವಾದದ ಬಳಿಕ ಸುದ್ದಿಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು, ಯಡಿಯೂರಪ್ಪ ನೇತೃತ್ವದ ಸರ್ಕಾರ ಲಾಕ್‍ಡೌನ್ ವೇಳೆ ಕಷ್ಟದಲ್ಲಿದ್ದವರಿಗೆ ಆಹಾರ ಪೆÇಟ್ಟಣ, ದಿನಸಿ ಹಾಗೂ ಔಷಧಿ ಪೂರೈಸುವಲ್ಲಿ ಉತ್ತಮ ನಿರ್ವಹಣೆ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ನನಗೆ ಈಗಾಗಲೇ ಮಾಹಿತಿ ಬಂದಿದೆ ಎಂದು ಪ್ರಧಾನಮಂತ್ರಿಗಳು ಅಭಿನಂದನೆ ಸಲ್ಲಿಸಿದರು ಎಂದು ತಿಳಿಸಿದರು.

Translate »