ಕನ್ನಡ ಚಿತ್ರ ಸಾಹಿತಿ ತಂಗಾಳಿ ನಾಗರಾಜ್ ನಿಧನ
ಮೈಸೂರು

ಕನ್ನಡ ಚಿತ್ರ ಸಾಹಿತಿ ತಂಗಾಳಿ ನಾಗರಾಜ್ ನಿಧನ

September 13, 2020

ಬೆಂಗಳೂರು, ಸೆ. 12- ಕನ್ನಡ ಸಿನಿಮಾದ ಖ್ಯಾತ ಚಿತ್ರಸಾಹಿತಿ, ಗೀತ ರಚನೆಕಾರ ತಂಗಾಳಿ ನಾಗರಾಜ್ ಅವರು ವಿಧಿವಶರಾಗಿದ್ದಾರೆ. ಶನಿವಾರ ಬೆಳಗ್ಗೆ ಹೃದಯಾಘಾತದಿಂದ ಕೊನೆ ಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. “ತಂಗಾಳಿ ಎಲ್ಲಿಂದ ಬೀಸುವೆ” ಎಂಬ ಹಾಡು ಬರೆದು ಖ್ಯಾತವಾಗಿದ್ದ ನಾಗರಾಜ್ ನಂತರದಲ್ಲಿ ತಂಗಾಳಿ ನಾಗರಾಜ್ ಎಂದೇ ಹೆಸರಾಗಿದ್ದರು. 15 ವರ್ಷಗಳಿಂದ ಕನ್ನಡ ಚಿತ್ರೋದ್ಯಮದಲ್ಲಿ ಗೀತ ರಚನೆಗಾರರಾಗಿದ್ದ ನಾಗರಾಜ್ ನೂರಾರು ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ. ತಂಗಾಳಿ ನಾಗರಾಜ್ ಅವರ ನಿಧನಕ್ಕೆ ಗೀತರಚನೆಗಾರ ಕವಿರಾಜ್, ಖ್ಯಾತ ಹಿನ್ನೆಲೆ ಸಂಗೀತ ನಿರ್ದೇಶಕರು ಸಂತಾಪ ವ್ಯಕ್ತಪಡಿಸಿದ್ದಾರೆ.

Translate »