ಮೂರು ದಶಕದ ನಂತರ ವೆನಿಸ್ ಚಲನಚಿತ್ರೋತ್ಸವದಲ್ಲಿ ಭಾರತೀಯ ಚಿತ್ರ ‘ದಿ ಡಿಸೆಪಲ್’ಗೆ ಪ್ರತಿಷ್ಠಿತ  FIPRESCI  ಪ್ರಶಸ್ತಿ
ಮೈಸೂರು

ಮೂರು ದಶಕದ ನಂತರ ವೆನಿಸ್ ಚಲನಚಿತ್ರೋತ್ಸವದಲ್ಲಿ ಭಾರತೀಯ ಚಿತ್ರ ‘ದಿ ಡಿಸೆಪಲ್’ಗೆ ಪ್ರತಿಷ್ಠಿತ FIPRESCI ಪ್ರಶಸ್ತಿ

September 13, 2020

ನವದೆಹಲಿ, ಸೆ. 12- ಚೈತನ್ಯ ತಮ್ಹಾನೆ ಅವರ “ದಿ ಡಿಸೆಪಲ್” 2020ರ ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಫಿಪ್ರೆಸ್ಕಿ ಪ್ರಶಸ್ತಿ (ಈIPಖಇSಅI ಚಿತಿಚಿಡಿಜ) ಗಳಿಸಿ ಕೊಂಡಿದೆ. ಶಾಸ್ತ್ರೀಯ ಸಂಗೀತ ಗಾರರ ಜಗತ್ತನ್ನು ಯಶಸ್ಸಿನ ಅಂಚಿನಲ್ಲಿ ನೋಡುವ ಈ ಚಿತ್ರವು ಕಳೆದ ವಾರ ಬಿಯೆನೆಲ್‍ನಲ್ಲಿ ತನ್ನ ಪ್ರಥಮ ಪ್ರದರ್ಶನವನ್ನು ಕಂಡಿತ್ತು. ಮತ್ತು ವಿಮರ್ಶಕರಿಂದ ಅದ್ಭುತ ವಿಮರ್ಶೆಗಳನ್ನು ಪಡೆದಿತ್ತು.

ದಿ ಇಂಟನ್ರ್ಯಾಷನಲ್ ಫೆಡರೇಶನ್ ಆಫ್ ಫಿಲ್ಮ್ ಕ್ರಿಟಿಕ್ಸ್ ಫೆಡರೇಶನ್ ಇಂಟ ನ್ರ್ಯಾಷನಲ್ ಡೆ ಲಾ ಪ್ರೆಸ್ ಸಿನೆಮಾ ಟೋಗ್ರಾಫಿಕ್ಗ ನ ಈ ಪ್ರಶಸ್ತಿ, ಚಲನಚಿತ್ರ ಸಂಸ್ಕೃತಿಯನ್ನು ಉತ್ತೇಜಿಸುವ ಮತ್ತು ಅಭಿವೃದ್ಧಿಪಡಿಸುವ ಜೊತೆಗೆ ವೃತ್ತಿಪರ ಹಿತಾಸಕ್ತಿಗಳನ್ನು ಕಾಪಾಡುವ ಗುರಿಯನ್ನು ಹೊಂದಿದೆ. 1930ರಲ್ಲಿ ಬೆಲ್ಜಿಯಂನ ಬ್ರಸೆಲ್ಸ್‍ನಲ್ಲಿ ರೂಪುಗೊಂಡ ಈ ಸಂಸ್ಥೆಯು ವೃತ್ತಿಪರ ಚಲನಚಿತ್ರ ವಿಮರ್ಶಕರು ಮತ್ತು ವಿಶ್ವದಾದ್ಯಂತದ ಚಲನಚಿತ್ರ ಪತ್ರಕರ್ತರನ್ನು ತನ್ನ ಸದಸ್ಯರನ್ನಾಗಿ ಹೊಂದಿದೆ

ಇದಕ್ಕೆ ಮುನ್ನ 1990ರಲ್ಲಿ ಅಡೂರ್ ಗೋಪಾಲಕೃಷ್ಣನ್ ನಿರ್ದೇಶಿಸಿದ “ಮಥಿಲುಕಲ್” ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದ ಭಾರತೀಯ ಚಿತ್ರವಾಗಿತ್ತು. ಇದೀಗ ಬರೋಬ್ಬರಿ 3 ದಶಕಗಳ ನಂತರ ಮತ್ತೊಮ್ಮೆ ಭಾರತೀಯ ಚಿತ್ರಕ್ಕೆ ಈ ಪ್ರಶಸ್ತಿ ಒಲಿದಿದೆ.

 

 

 

Translate »