ಮಾಧ್ಯಮಗಳ ಸಹಕಾರದಿಂದ ಕನ್ನಡ ಪುಸ್ತಕ ಲೋಕ ಬೆಳೆಯುವ ಅಗತ್ಯವಿದೆ ಕನ್ನಡ ಮತ್ತು ಸಂಸ್ಕøತಿ ಸಚಿವ ಅರವಿಂದ ಲಿಂಬಾವಳಿ
ಮೈಸೂರು

ಮಾಧ್ಯಮಗಳ ಸಹಕಾರದಿಂದ ಕನ್ನಡ ಪುಸ್ತಕ ಲೋಕ ಬೆಳೆಯುವ ಅಗತ್ಯವಿದೆ ಕನ್ನಡ ಮತ್ತು ಸಂಸ್ಕøತಿ ಸಚಿವ ಅರವಿಂದ ಲಿಂಬಾವಳಿ

February 18, 2021

ಬೆಂಗಳೂರು,ಫೆ.17(ಕೆಎಂಶಿ)-ಕನ್ನಡದಲ್ಲಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಕನ್ನಡ ಪುಸ್ತಕ ಲೋಕ ಆಧುನಿಕ ಮಾಧ್ಯಮಗಳನ್ನು ಬಳಸಿಕೊಂಡು ಬೆಳೆಯಬೇಕಾದ ಅಗತ್ಯವಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕøತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ನಗರದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋ ಜನೆ ಮಾಡಿದ್ದ ಪರಿಶಿಷ್ಟ್ಟ ಜಾತಿ ಮತ್ತು ಪರಿಶಿಷ್ಟ್ಟ ಪಂಗಡದ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಲೋಕಾ ರ್ಪಣೆ ಮಾಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡು ತ್ತಿದ್ದರು. ಇಂದಿನ ಸಾಹಿತ್ಯ ಪರಿಸ್ಥಿತಿ ಸೋಷಿಯಲ್ ಮೀಡಿಯಾ ಗಳ ಭರಾಟೆಯಲ್ಲಿ ಕಳೆದು ಹೋಗಿದೆ, ಇ-ಬುಕ್, ಆಡಿಯೋ ಬುಕ್‍ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಕನ್ನಡ ಪುಸ್ತಕ ಪ್ರಾಧಿಕಾರವು ಸಹ ಪುಸ್ತಕ ಪ್ರಕಟಣೆಯ ಜೊತೆಗೆ ಈ ಮಾಧ್ಯಮಗಳನ್ನು ಕೂಡ ಸಮರ್ಥವಾಗಿ ಬಳಸಿಕೊಂಡು ಬೆಳೆಯಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ಅದಕ್ಕೆ ಅಗತ್ಯವಾದ ಅನುದಾನವನ್ನು ಒದಗಿಸ ಲಾಗುವುದು ಎಂದು ಭರವಸೆ ನೀಡಿದರು. ಯುವ ಬರಹಗಾರರು ತಮ್ಮ ಸುತ್ತಲಿನ ಪರಿಸರವನ್ನು ಗ್ರಹಿಸಿ ಬರೆಯಬೇಕು, ಸಾಹಿತ್ಯ ಪರಂಪರೆಯನ್ನು ಅರಿತು ಬರೆಯಬೇಕು, ಓದುವ ಅಭ್ಯಾಸ ಮಾಡಿ ಕೊಳ್ಳಬೇಕು ಎಂದು ಅವರು ಯುವ ಲೇಖಕರಿಗೆ ಕಿವಿಮಾತು ಹೇಳಿದರು.

ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ ಅವರು, ಜಾತಿ, ವರ್ಗಗಳನ್ನು ಮೀರಿದ ಸಾಹಿತ್ಯ ಸೃಷ್ಟಿ ನಮ್ಮ ಧ್ಯೇಯ ಆಗಬೇಕು, ಶೋಷಿತರು ಎಲ್ಲಾ ಜಾತಿಯ ಎಲ್ಲಾ ವರ್ಗಗಳಲ್ಲಿಯೂ ಇರುತ್ತಾರೆ, ಬರಹಗಾರರು ಜಾತಿ ವರ್ಗಗಳನ್ನು ಮೀರಿ ಶೋಷಣೆಯ ವಿರುದ್ಧ ದನಿ ಎತ್ತಬೇಕು ಎಂದರು. ಇಂದಿನ ಯುವ ಬರಹಗಾರರು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಕನ್ನಡ ಸಾಹಿತ್ಯ ಪರಂಪರೆ ಪ್ರವಾಹ ಇದ್ದ ಹಾಗೆ. ಅದನ್ನು ಅರಿತು, ಗ್ರಹಿಸಿ, ಅಧ್ಯಯನ ಮಾಡಿ ಬರೆದರೆ ಶಕ್ತಿಯುತ ಸಾಹಿತ್ಯ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು. ತಮ್ಮ ಸುತ್ತಲ ಪರಿಸರ ಪರಿಸರದ ಸಂವೇದನೆಗಳು ಸಾಹಿತ್ಯದ ಶಕ್ತಿಯಾ ಗಿದೆ ಎಂದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್. ನಂದೀಶ್ ಹಂಚೆ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಸಾಹಿತ್ಯದ ಡಿಜಿಟಲೀಕರಣ ಕಾರ್ಯ ಕೈಗೆತ್ತಿಕೊಂಡಿದೆ. ಅದನ್ನು ಒಂದು ವಷರ್Àದೊಳಗೆ ಮುಗಿಸುವ ಯೋಜನೆ ಹಮ್ಮಿಕೊಳ್ಳ ಲಾಗಿದೆ ಎಂದರು. ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹ ಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸುವ ಜೊತೆಗೆ ಅವುಗಳನ್ನು ಇ-ಬುಕ್ ಆಗಿ ಕೂಡ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

 

 

Translate »