ನೂತನ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಎಂ.ಎಂ.ಯೋಗೇಶ್ ಅಧಿಕಾರ ಸ್ವೀಕಾರ
ಮೈಸೂರು

ನೂತನ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಎಂ.ಎಂ.ಯೋಗೇಶ್ ಅಧಿಕಾರ ಸ್ವೀಕಾರ

February 18, 2021

ಮೈಸೂರು,ಫೆ.17(ಪಿಎಂ)-ಮೈಸೂರು ಜಿಲ್ಲಾ ಪಂಚಾಯಿತಿಯ ನೂತನ ಸಿಇಓ ಆಗಿ ಎಂ.ಎಂ.ಯೋಗೇಶ್ ಬುಧವಾರ ಅಧಿಕಾರ ವಹಿಸಿಕೊಂಡರು. ಜಿಪಂ ಕಾರ್ಯಾಲಯದ ಸಿಇಓ ಕಚೇರಿಯಲ್ಲಿ ನಿರ್ಗಮಿತ ಸಿಇಓ ಬಿ.ಎ.ಪರಮೇಶ್ ಅವರಿಂದ ಎಂ.ಎಂ. ಯೋಗೇಶ್ ಅಧಿಕಾರ ವಹಿಸಿಕೊಂಡರು. ಎಂ.ಎಂ.ಯೋಗೇಶ್ ಅವರು 2004 ಬ್ಯಾಚ್‍ನ ಕೆಎಎಸ್ ಅಧಿಕಾರಿ ಹಾಗೂ 2016ರ ಬ್ಯಾಚ್‍ನ ಐಎಎಸ್ (ಆಯ್ಕೆ ಪಟ್ಟಿ) ಅಧಿಕಾರಿ ಆಗಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆ ಕೆಆರ್ ಪೇಟೆ ಪಟ್ಟಣದ ಮರಿತಿಬ್ಬೇ ಗೌಡ ಮತ್ತು ನಂಜಮ್ಮ ದಂಪತಿ ಪುತ್ರರಾದ ಎಂ.ಎಂ. ಯೋಗೇಶ್, ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿಎಸ್‍ಸಿ ಮತ್ತು ಕಾನೂನು ಪದವಿ ಪಡೆದಿದ್ದಾರೆ. ಈ ಹಿಂದೆ ಮುಡಾ ಮತ್ತು ಕಾಡಾ ಕಚೇರಿಗಳಲ್ಲಿ ವಿವಿಧ ಹುದ್ದೆಯಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹೆಚ್ಚುವರಿ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರನ್ನು ಇದೀಗ ಮೈಸೂರು ಜಿಪಂ ಸಿಇಓ ಆಗಿ ಸರ್ಕಾರ ನಿಯೋಜಿಸಿದೆ.

ವಿವಿಧ ಹುದ್ದೆಗಳಲ್ಲಿ ಈಗಾಗಲೇ ಮೈಸೂರಿನಲ್ಲಿ 6 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುವ ಅನುಭವ ಹೊಂದಿರುವ ಎಂ.ಎಂ. ಯೋಗೇಶ್, ಜಿಪಂ ಸಿಇಓ ಆಗಿ ಮೈಸೂರು ಜಿಲ್ಲೆಯನ್ನು ಮಾದರಿಯಾಗಿಸುವ ತಮ್ಮ ಉದ್ದೇಶ ವ್ಯಕ್ತಪಡಿಸಿದ್ದಾರೆ.

ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಜಿಪಂನಲ್ಲಿ ಮುಖ್ಯವಾಗಿ ನರೇಗಾ, ಗ್ರಾಮೀಣ ಕುಡಿಯುವ ನೀರು ಹಾಗೂ ಘನತ್ಯಾಜ್ಯ ನಿರ್ವಹಣೆ ಕಾರ್ಯ ಗಳನ್ನು ನಿಭಾಯಿಸಬೇಕಾಗುತ್ತದೆ. ಎಲ್ಲಾ ಕಾರ್ಯಗಳನ್ನು ಜನ ಪ್ರತಿನಿಧಿಗಳ ಸಹಕಾರದೊಂದಿಗೆ ಅತ್ಯುತ್ತಮವಾಗಿ ನಿರ್ವಹಿಸುವ ವಿಶ್ವಾಸ ಹೊಂದಿದ್ದೇನೆ. ಆ ಮೂಲಕ ಮೈಸೂರು ಜಿಲ್ಲೆಯನ್ನು ಮಾದರಿ ಮಾಡುವ ಉದ್ದೇಶ ಹೊಂದಿದ್ದೇನೆ ಎಂದು ತಿಳಿಸಿದರು.

ಮೈಸೂರಿನಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಹಿನ್ನೆಲೆ ಇಲ್ಲಿನ ಜನಸಾಮಾನ್ಯರು ಹಾಗೂ ಜನಪ್ರತಿನಿಧಿಗಳು ಈಗಾ ಗಲೇ ನನ್ನನ್ನು ಗುರುತಿಸಿದ್ದಾರೆ. ಇದು ನನ್ನ ಈ ಉದ್ದೇಶ ಈಡೇ ರಿಸಲು ಸಹಕಾರ ಆಗುತ್ತದೆ ಎಂಬ ಭಾವನೆ ಇದೆ. ಮೈಸೂರು ಒಂದು ಪ್ರತಿಷ್ಠಿತ ಜಿಲ್ಲೆ. ಇಲ್ಲಿ ಸಿಇಓ ಆಗಿ ಕೆಲಸ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.

 

 

 

Translate »