ರಾಮಮಂದಿರದ ಬಗ್ಗೆ ಕುಮಾರಸ್ವಾಮಿ ಅಪಸ್ವರಕ್ಕೆ ಶಾಸಕ ರಾಮದಾಸ್ ಆಕ್ಷೇಪ
ಮೈಸೂರು

ರಾಮಮಂದಿರದ ಬಗ್ಗೆ ಕುಮಾರಸ್ವಾಮಿ ಅಪಸ್ವರಕ್ಕೆ ಶಾಸಕ ರಾಮದಾಸ್ ಆಕ್ಷೇಪ

February 18, 2021

ಬೆಂಗಳೂರು, ಫೆ.17(ಕೆಎಂಶಿ)- ದೇವೇಗೌಡರ ಕುಟುಂಬ ದೇವರಿಗೆ ಭಕ್ತಿ ಸಲ್ಲಿಸುವಲ್ಲಿ ಮುಂಚೂಣಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಅವರ ಕುಟುಂಬದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ರಾಮಮಂದಿರ ನಿಧಿ ಅಭಿಯಾನಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗೆ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್.ಎ.ರಾಮದಾಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಮಮಂದಿರ ನಿಧಿ ಸಂಗ್ರಹಣಾ ಅಭಿಯಾನದಲ್ಲಿ ಹಿಂದೂಗಳು ಮಾತ್ರವಲ್ಲದೇ, ಮುಸಲ್ಮಾನ, ಕ್ರೈಸ್ತರೂ ಸಹ ದೇಣಿಗೆ ಯನ್ನು ರಾಮನ ಚರಣಕ್ಕೆ ಅರ್ಪಿಸಿದ್ದಾರೆ, ಮಹಾತ್ಮಗಾಂಧೀಜಿ, ನೆಹರೂ, ಅಂಬೇಡ್ಕರ್ ಸಹ ಖSSನ ಕಾರ್ಯದ ಬಗ್ಗೆ ಶ್ಲಾಘಿಸಿದ್ದಾರೆ. ಖSS ಬಗ್ಗೆ ಜನತೆಗೆ ಧೈರ್ಯದ ಭಾವನೆ ಇದೆಯೇ ಹೊರತು ಹೆದರಿಕೆಯ ಭಾವನೆ ಇಲ್ಲ. ಇವನ್ನೆಲ್ಲಾ ತಿಳಿದು ಇನ್ನಾದರೂ ದೇಶವನ್ನು, ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ ಎಂದು ರಾಮದಾಸ್ ಕಿವಿಮಾತು ಹೇಳಿದ್ದಾರೆ.

 

 

Translate »