ರೈತರಿಂದ ನಾಳೆ ದೇಶಾದ್ಯಂತ ರೈಲು ರೋಕೋ ಚಳವಳಿ: ಮಧ್ಯಾಹ್ನ 12ರಿಂದ 4 ಗಂಟೆವರೆಗೆ ರೈಲು ಸ್ತಬ್ಧ
ಮೈಸೂರು

ರೈತರಿಂದ ನಾಳೆ ದೇಶಾದ್ಯಂತ ರೈಲು ರೋಕೋ ಚಳವಳಿ: ಮಧ್ಯಾಹ್ನ 12ರಿಂದ 4 ಗಂಟೆವರೆಗೆ ರೈಲು ಸ್ತಬ್ಧ

February 18, 2021

ದಿಶಾ ರವಿ ಬಂಧನಕ್ಕೆ ರೈತರು, ಎಚ್‍ಡಿಕೆ ಖಂಡನೆ
ನವದೆಹಲಿ,ಫೆ.17-ಕೃಷಿ ಕಾಯಿದೆ ರದ್ದತಿಗೆ ಆಗ್ರಹಿಸಿ ರೈತರು ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದ್ದಾರೆ. ಟ್ರ್ಯಾಕ್ಟರ್ ರ್ಯಾಲಿ, ಹೆದ್ದಾರಿ ತಡೆ ಬಳಿಕ ಇದೀಗ ನಾಳೆ ದೇಶಾದ್ಯಂತ `ರೈಲ್ ರೋಕೋ’ ಚಳವಳಿ ಹಮ್ಮಿಕೊಂಡಿದ್ದಾರೆ. ಗುರುವಾರ ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ 4 ಗಂಟೆಗಳ ಕಾಲ ಎಲ್ಲಾ ರೈಲುಗಳನ್ನು ತಡೆ ಯಲಿ ದ್ದಾರೆ. ರಾಜ್ಯದಲ್ಲೂ ರೈಲ್ ರೋಕೋ ಚಳವಳಿ ಮಾಡ್ತೇವೆ ಅಂತ ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ರೈಲು ತಡೆ ಆಗಲಿದೆ. `ಟೂಲ್‍ಕಿಟ್’ ಕೇಸಲ್ಲಿ ಬಂಧನವಾಗಿರೋ ಬೆಂಗಳೂರಿನ ದಿಶಾ ರವಿ ಬಂಧನವನ್ನು ಮಾಜಿ ಸಿಎಂ ಕುಮಾರಸ್ವಾಮಿ ಖಂಡಿಸಿ ದ್ದಾರೆ. ಇದು ಅಘೋಷಿತ ತುರ್ತು ಪರಿ ಸ್ಥಿತಿ ಅನ್ನಿಸ್ತಿದೆ ಅಂದಿದ್ದಾರೆ. ದಿಶಾ ರವಿ ವಾಟ್ಸಪ್ ಗ್ರೂಪ್‍ನಲ್ಲಿ ಖಲಿಸ್ತಾನಿ ಬೆಂಬ ಲಿತ ಪಿಜೆಎಫ್ (ಪೆÇಯೇಟಿಕ್ ಜಸ್ಟೀಸ್ ಫೌಂಡೇಷನ್) ಸದಸ್ಯರು ಇರೋದು ಕಂಡು ಬಂದಿದೆ. ದಿಶಾ ಬಂಧನ ಖಂಡಿಸಿ ಬೆಂಗಳೂರಿನಲ್ಲಿ ಯೂತ್ ಕಾಂಗ್ರೆಸ್ ಮೊಂಬತ್ತಿ ಹಿಡಿದು ಪ್ರತಿಭಟನೆ ನಡೆಸಿದೆ. ಟೂಲ್‍ಕಿಟ್ ಸಂಬಂಧ `ಝೂಮ್’ ಲೈವ್‍ನಲ್ಲಿ ಪ್ಲಾನ್ ಆಗಿದೆ ಅಂತ ದೆಹಲಿ ಪೆÇಲೀಸರು ಹೇಳಿದ್ದಾರೆ.

 

 

Translate »