ಮೈಸೂರು

ಜಿ.ಪಿ.ರಾಜರತ್ನಂರವರ ಕವಿತಾ ಭಾವ ಕನ್ನಡಿಗರ ಮನದಲ್ಲಿ ನೆಲೆಯೂರಿದರೆ ಸೂರ್ಯ ಚಂದ್ರರಿರುವವರೆಗೂ ಕನ್ನಡ ಶಾಶ್ವತ

December 1, 2020

ಮೈಸೂರು, ನ. 30- ಜಿ.ಪಿ ರಾಜ ರತ್ನಂರವರ ಕವಿತಾ ಭಾವ ಕನ್ನಡಿಗರ ಮನದಲ್ಲಿ ನೆಲೆಯೂರಿದರೆ ಸೂರ್ಯ ಚಂದ್ರರಿರುವವರೆಗೂ ಕನ್ನಡ ಶಾಶ್ವತವಾಗಿ ರುತ್ತದೆ ಎಂದು ಮೈಸೂರು ಉತ್ತರ ವಲಯದ ಕ್ಷೇತ್ರಸಂಪನ್ಮೂಲ ವ್ಯಕ್ತಿ ಡಾ. ವಚನ ಕುಮಾರಸ್ವಾಮಿ ಹೇಳಿದರು.

ಮೈಸೂರು ಉತ್ತರವಲಯದ ವಿನಾ ಯಕನಗರ ಕ್ಲಸ್ಟರ್ ವ್ಯಾಪ್ತಿಯ ಗ್ರೇಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕನ್ನಡ ಪ್ರಯೋಗಾಲಯವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ನರಕಕ್ಕೆ ಇಳಿಸಿ, ನಾಲಿಗೆ ಸೀಳಿಸಿ, ಬಾಯಿ ಹೊಲಿಸಿ ಹಾಕಿದರೂ ಮೂಗಿನಲ್ಲಿ ಕನ್ನಡ ಪದ ವಾಡುತ್ತೇನೆ ಎಂಬ ರಾಜರತ್ನಂರವರ ಕವಿತಾಭಾವ ಎಲ್ಲಾ ಕಾಲಕ್ಕೂ ಕನ್ನಡಿಗರ ಹೃದಯಾಂತರಾಳದಲ್ಲಿ ಶಾಶ್ವತವಾಗಿ ನೆಲೆಯೂರುವ ಶಕ್ತಿಯನ್ನು ಪಡೆದಿದೆ.

ಗ್ರೇಸ್ ಶಾಲೆಯ ಎಲ್ಲಾ ಶಿಕ್ಷಕರು ಕನ್ನ ಡದ ಎಲ್ಲಾ ಅಕ್ಷರಗಳನ್ನು ಬಳಕೆ ಮಾಡಿ ಕೊಂಡು ಕವಿಗಳು, ವಚನಕಾರರು, ತಿಂಗಳು ಗಳು ಹೀಗೆ ನೂರಕ್ಕೂ ಹೆಚ್ಚು ರೀತಿಯ ನಾವಿನ್ಯಯುತ ಕಲಿಕೋಪಕರಣಗಳನ್ನು ಮಾಡುವುದರ ಮೂಲಕ ಕನ್ನಡದಲ್ಲಿ ಹೊಸ ತನವನ್ನು ಕಂಡುಕೊಳ್ಳಲು ಕನ್ನಡ ಪ್ರಯೋ ಗಾಲಯ ಮಾಡಿರುವುದು ಸಂತಸದ ವಿಷಯ. ಇದು ಇತರೆ ಎಲ್ಲಾ ಶಿಕ್ಷಕರಿಗೆ ಪ್ರೇರಣೆಯಾಗಿ ಕನ್ನಡವನ್ನು ಹೆಚ್ಚು ಹೆಚ್ಚು ಬಳಕೆ ಮಾಡುವುದರ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಇಚ್ಛಾಶಕ್ತಿ ಎಲ್ಲರದಾಗಲಿ ಎಂದರು.

ಸಿಆರ್‍ಪಿ ಹೇಮಲತಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರೇಸ್ ಶಾಲೆ ಸಂಸ್ಥಾಪಕ ಪಾಸ್ಟರ್ ಶ್ಯಾಮುಲ್ ಜಾನ್, ಎಸ್ತೇರ್ ಶ್ಯಾಮುಲ್ ಜಾನ್, ಪಾಸ್ಟರ್ ತ್ರಿಮೂರ್ತಿ ಶ್ಯಾಮುಲ್ ಜಾನ್, ಗೌರವ ಕಾರ್ಯದರ್ಶಿ ಪ್ರೈಜ್, ಮುಖ್ಯ ಶಿಕ್ಷಕಿ ಸುಂದ್ರಮ್ಮ, ಶಿಕ್ಷಕಿ ಯರಾದ ಶಶಿಕಲಾ, ಗೌರಿ, ಪ್ರೇಮ, ಭಾಗ್ಯಲಕ್ಷ್ಮಿ, ಜ್ಯೋತಿ, ಸಮಂತ, ದೇವಮ್ಮ, ಲಕ್ಷ್ಮಿ, ವಿಜಯ ಲಕ್ಷ್ಮಿ, ಸೌಭಾಗ್ಯ, ಗೀತಾ, ಮಮತ, ಅಕ್ಷರ ದಾಸೋಹ ಸಿಬ್ಬಂದಿಗಳಾದ ಮಹದೇವಮ್ಮ, ಮೀನಾಕ್ಷಿ, ಶಿವರತ್ನ, ಧನಲಕ್ಷ್ಮಿ ಇದ್ದರು.

Translate »