ಜಾತೀಯತೆಗೆ ನೀಡುವ ಆದÀ್ಯತೆ ಕನ್ನಡ ಭಾಷೆಗೆ ನೀಡದಿರುವುದೇ ಹಲವು ಸಮಸ್ಯೆಗೆ ಕಾರಣ
ಮೈಸೂರು

ಜಾತೀಯತೆಗೆ ನೀಡುವ ಆದÀ್ಯತೆ ಕನ್ನಡ ಭಾಷೆಗೆ ನೀಡದಿರುವುದೇ ಹಲವು ಸಮಸ್ಯೆಗೆ ಕಾರಣ

December 1, 2020

ಮೈಸೂರು,ನ.30(ಎಂಟಿವೈ)- ಕನ್ನಡಿಗರಲ್ಲಿ ಜಾತಿ ಮತ್ತು ಧರ್ಮದ ಮೇಲೆ ಇರುವ ಪ್ರೀತಿ, ಕಾಳಜಿ ಕನ್ನಡ ನಾಡು ಹಾಗೂ ಭಾಷೆಯ ಮೇಲೆ ಇಲ್ಲದಿರು ವುದೇ ಹಲವು ಸಮಸ್ಯೆಗೆ ಕಾರಣ ಎಂದು ಡಿ.ದೇವ ರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ವಿಷಾದಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ, ಕನ್ನಡಸಾಹಿತ್ಯ ಪರಿಷತ್ ನಗರ ಘಟಕದ ವತಿಯಿಂದ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಏಕೀಕರಣವಾಗಿ ಹಲವು ದಶಕಗಳೇ ಕಳೆ ದರೂ ಕರ್ನಾಟಕದಲ್ಲಿ ಹಲವು ಸಮಸ್ಯೆಗಳು ಇನ್ನೂ ಇತ್ಯರ್ಥವಾಗಿಲ್ಲ. ಇದಕ್ಕೆ ಕನ್ನಡಿಗರಲ್ಲಿರುವ ನಿರುತ್ಸಾ ಹವೇ ಕಾರಣ. ಜಾತಿಗೆ ತೋರುವ ಪ್ರೀತಿ, ಕಾಳಜಿ ಯನ್ನು ಭಾಷೆ ಮೇಲೆ ತೋರುತ್ತಿಲ್ಲ. ಅಲ್ಲದೆ ಕನ್ನಡಿಗ ರಲ್ಲಿ ಆಕ್ರಮಣಕಾರಿ ಮನೋಭಾವವೂ ಇಲ್ಲ. ಎಲ್ಲವನ್ನು ಸಹಿಸಿಕೊಂಡು ಹೋಗುವ ಗುಣ ಇರುವುದರಿಂದಲೇ ಕನ್ನಡ ಭಾಷೆಗೆ ದುಸ್ಥಿತಿ ಒದಗಿದೆ. ಇಂತಹ ಪರಿಸ್ಥಿತಿ ಯಿಂದ ಕನ್ನಡ ಭಾಷೆಯನ್ನು ಕಾಪಾಡÀಲು ಹೋರಾಟ ಮಾಡಲೇಬೇಕಾದÀ ಅನಿವಾರ್ಯತೆ ಎದುರಾಗಿದೆ ಎಂದರು.

ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಭಾರತೀ ಯರಿಗೆ ಕನ್ನಡ ಮತ್ತು ಕರ್ನಾಟಕ ಎಂದರೆ ಏನು ಎನ್ನುವುದೇ ತಿಳಿದಿಲ್ಲ. ಅವರಿಗೆ ಬೆಂಗಳೂರು ಮಾತ್ರ ಗೊತ್ತಿದೆ. ಇದು ನಮ್ಮ ಕನ್ನಡದ ದುಸ್ಥಿತಿ. ಕನ್ನಡ ಭಾಷಾ ಉಳಿವಿಗಾಗಿ ಹೋರಾಟಗಳು ನಡೆಯುತ್ತಲೇ ಇವೆ. ಆದರೆ ಅವುಗಳು ನಿರೀಕ್ಷಿತ ಫಲ ಕೊಡುತ್ತಿಲ್ಲ. ಇದಕ್ಕೆ ಕಾರಣ ಅನ್ಯ ಭಾಷಿಗರಿಗೆ ಇರುವ ಆಕ್ರಮಣಕಾರಿ ಮನೋ ಭಾವ, ಭಾಷೆ ಮೇಲಿನ ಪ್ರೀತಿ, ಕಾಳಜಿ ಕನ್ನಡಿಗರಿಗೆ ಇಲ್ಲ. ನಮ್ಮ ಜನ ಜಾತಿಗೆ ನೀಡುವ ಗೌರವ, ಪ್ರೀತಿ ಮತ್ತು ಕಾಳಜಿ ಭಾಷೆಗೆ ನೀಡುತ್ತಿಲ್ಲ. ಇದರಿಂದ ನಮ್ಮ ಹೋರಾಟ ಫಲಿಸುತ್ತಿಲ್ಲ ಎಂದು ವಿಷಾದಿಸಿದರು.

80ರ ದಶಕದಲ್ಲಿ ನಡೆದ ಚಳವಳಿ ಈಗ ನಡೆಯು ತ್ತಿಲ್ಲ. ಕನ್ನಡ ಪರ ಹೋರಾಟಗಾರರು ಕನ್ನಡದ ಅಸ್ತಿತ್ವ ಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಕನ್ನಡ ಚಳವಳಿ ಮೂಲಕ ಅವರು ತಮ್ಮ ಅಸ್ತಿತ್ವ ಕಂಡುಕೊಳ್ಳುತ್ತಿ ದ್ದಾರೆ. ಕನ್ನಡದ ಅಂಕಿ ಬಳಸುವುದು ಕಡಿಮೆಯಾ ಗಿದೆ. ಇದೇ ರೀತಿ ಕನ್ನಡವು ಮರೆಯಾಗುವ ಆತಂಕ ಎದುರಾಗಿದೆ. ಸೂರ್ಯ ಚಂದ್ರರು ಇರುವವರೆಗೂ ಕನ್ನಡವನ್ನು ಉಳಿಸುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಓರಿಯಂಟಲ್ ಸಂಶೋಧನಾ ಸಂಸ್ಥೆ ನಿರ್ದೇಶಕ ಪೆÇ್ರ.ಎಸ್.ಶಿವರಾಜಪ್ಪ ಮಾತನಾಡಿ, ಕನ್ನಡಿಗರ ತಾತ್ಸಾರ, ನಿರ್ಲಕ್ಷ್ಯದಿಂದಾಗಿ ಕನ್ನಡ ನಾಡು, ನುಡಿಗೆ ಧಕ್ಕೆಯಾಗು ತ್ತಿದೆ. ಐಹೊಳೆ, ಪಟ್ಟದ ಕಲ್ಲಿನಲ್ಲಿ ಶಾಸನಗಳು ಇಲ್ಲದಿದ್ದರೆ ಕನ್ನಡ ಭಾಷೆ ಮೇಲೆ ಮತ್ತಷ್ಟು ದೌರ್ಜನ್ಯ ವಾಗುತ್ತಿತ್ತು. ಸಂತರು ಹಾಗೂ ಅನೇಕ ಮಹನೀ ಯರು ಕನ್ನಡವನ್ನು ಕಟ್ಟಿ ಬೆಳೆಸಿದ್ದಾರೆ. 12ನೇ ಶತಮಾನ ದಲ್ಲಿ ಬಸವಾದಿ ಶರಣರು ಕನ್ನಡವನ್ನು ದೈವ ಭಾಷೆ ಯಾಗಿ ಮಾಡಿದರು. ಆದರೆ ಇಂದು ಭಾಷಾ ಬೆಳ ವಣಿಗೆಗೆ ದುಸ್ಥಿತಿ ಒದಗಿ ಬಂದಿದೆ. ಕರ್ನಾಟಕದಲ್ಲಿ ಭಾಷಾಭಿಮಾನ ಕಡಿಮೆ ಇದೆ. ಕನ್ನಡವನ್ನು ಉಳಿಸಿ, ಬೆಳೆÀಸಿ ಎಂದು ಹೋರಾಟ ನಡೆಸುತ್ತಿದ್ದರೂ ಅದಕ್ಕೆ ಮನ್ನಣೆ ಇಲ್ಲ. ನಮ್ಮದೇ ನಾಡಿನಲ್ಲಿ ನಮ್ಮ ಭಾಷೆ ಉಳಿ ವಿಗೆ ಹೋರಾಟ ನಡೆಸುತ್ತಿರುವುದು ವಿಪರ್ಯಾಸ. ಆದರೆ ಹೋರಾಟ ನಡೆಸಬೇಕಿರುವುದು ಅನಿ ವಾರ್ಯ. ಸಮಸ್ಯೆ ರಹಿತವಾಗಿ ಬದುಕಲು ಸಾಧ್ಯ ವಾಗುತ್ತಿಲ್ಲ. ಅನ್ಯಭಾಷಿಕರು, ಹೊರಗಿನ ಕೈಗಾರಿಕೋ ದ್ಯಮಿಗಳು ರಾಜ್ಯವನ್ನು ಆಳುತ್ತಿದ್ದಾರೆ. ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ವಿಷಾದಿಸಿದರು.

ಸನ್ಮಾನ: ಕಾರ್ಯಕ್ರಮದ ಅಂಗವಾಗಿ ಡಿ.ದೇವ ರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿ ಕುಮಾರ್, ಕಾಡಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಲಿಂಗಯ್ಯ, ಭಾರತೀಯ ದಲಿತ ಸಾಹಿತ್ಯ ಅಕಾ ಡೆಮಿ ರಾಜ್ಯಾಧ್ಯಕ್ಷ ಡಾ.ಸಿ.ವೆಂಕಟೇಶ್, ಭಾರತೀಯ ಇತಿಹಾಸ ಸಂಕಲನ ಸಮಿತಿಯ ಉಪಾಧ್ಯಕ್ಷ ಎಸ್.ಬಿ.ಎಂ ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕಸಾಪ ನಗರ ಘಟಕ ಅಧ್ಯಕ್ಷ ಕೆ.ಎಸ್. ಶಿವರಾಮು, ಹೋರಾಟಗಾರ ಕೋದಂಡರಾಮು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »