ಛಂದಸ್ಸು ಬರವಣಿಗೆ ಸುಲಭದ ಕೆಲಸವಲ್ಲ: ಡಾ.ರಾಗೌ
ಮೈಸೂರು

ಛಂದಸ್ಸು ಬರವಣಿಗೆ ಸುಲಭದ ಕೆಲಸವಲ್ಲ: ಡಾ.ರಾಗೌ

December 1, 2020

ಮೈಸೂರು, ನ.30(ಆರ್‍ಕೆಬಿ)- ಛಂದಸ್ಸು ಬರವಣಿಗೆ ಅಷ್ಟು ಸುಲಭವಲ್ಲ. ಅದು ಸವಾಲಿನ ಕೆಲಸ ಎಂದು ಹಿರಿಯ ವಿದ್ವಾಂಸ ಡಾ.ರಾಗೌ ತಿಳಿಸಿದರು.

ಮೈಸೂರಿನ ಗೋಕುಲಂನಲ್ಲಿರುವ ಇಂಟರ್‍ನ್ಯಾಷನಲ್ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್‍ನ ಡಿ.ಮಾದೇಗೌಡ ಸಭಾಂಗಣದಲ್ಲಿ ಸೋಮವಾರ ದರ್ಶನ ಕೀರ್ತಿ ಪ್ರಕಾಶನ ಆಯೋಜಿಸಿದ್ದ ಪ್ರೊ.ಎ. ರಂಗಸ್ವಾಮಿ ಅವರ `ಕನ್ನಡ ಛಂದೋ ರಂಗ’ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಛÀಂದೋ ಗ್ರಂಥ ಗಳು ವಿರಳ. ಆ ಕೊರತೆಯನ್ನು ಪ್ರೊ.ಎ. ರಂಗಸ್ವಾಮಿ ಅವರ `ಕನ್ನಡ ಛಂದೋರಂಗ’ ಕೃತಿ ನೀಗಿಸಿದೆ. ಪ್ರಬುದ್ಧ ಹಾಗೂ ಆಕರ್ಷಕ ಕೃತಿ ಓದಿಸಿಕೊಂಡು ಹೋಗುತ್ತದೆ. ಇತ್ತೀ ಚೆಗೆ ಇಂತಹ ಕೃತಿ ಬಂದಿರಲಿಲ್ಲ. ವಿದ್ಯಾರ್ಥಿ ಗಳಿಗೆ ಉಪಯುಕ್ತವಾಗುತ್ತದೆ ಎಂದರು. ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸ ಬಹುದು ಎಂಬುದನ್ನು ರಂಗಸ್ವಾಮಿ ಸಾಧ್ಯ ವಾಗಿಸಿದ್ದಾರೆ. ಅವರೊಬ್ಬ ಸಮರ್ಥ ಲೇಖಕ, ತಮ್ಮ ಶಕ್ತಿ ಮತ್ತು ಸಾಮಥ್ರ್ಯವನ್ನು ಗುರು ತಿಸಿಕೊಂಡು ಬರೆದಿದ್ದಾರೆ. ಸಾಹಿತ್ಯವನ್ನು ಇನ್ನೊಬ್ಬರಿಗೆ ನೇರವಾಗಿ ತಲುಪುವಂತೆ ಬರೆಯಬೇಕು. ಅದನ್ನು ಲೇಖಕರು ಮಾಡಿ ದ್ದಾರೆ. ಪದ್ಯ ಗ್ರಂಥವನ್ನು ಮತ್ತೇಮತ್ತೆ ಓದಬೇಕು ಎನಿಸಿದರೆ ಅದು ಕಾವ್ಯ. ಆದರೆ ಗದ್ಯ ಗ್ರಂಥಗಳು ಆ ರೀತಿ ಅಲ್ಲ ಎಂದು ಅಭಿಪ್ರಾಯಪಟ್ಟರು. 

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಂ.ಜಿ.ಮಂಜುನಾಥ್, ಪುಸ್ತಕ ಬರೆಯುವುದು ದೈಹಿಕ ಶ್ರಮವಷ್ಟೇ ಅಲ್ಲ, ಬೌದ್ಧಿಕ ಶ್ರಮವೂ ಹೌದು. ಬೇರೆ ಬೇರೆ ಕಾವ್ಯಗಳಿಂದ ಹುಡುಕಿ ತಪ್ಪಿಲ್ಲದಂತೆ ಅದನ್ನು ತರುವುದು ಕಷ್ಟದ ಕೆಲಸ ಎಂದರು.

ಸಾಕಷ್ಟು ಜನ ಛಂದಸ್ಸುಗಳನ್ನು ಬರೆದಿ ದ್ದಾರೆ. ಆದರೆ ಒಬ್ಬನೇ ವ್ಯಕ್ತಿ ಛಂದಸ್ಸುಗಳ ಬಗ್ಗೆ ಬರೆಯುವುದು ವಿಶೇಷ. ಅಪರೂಪದ ಗ್ರಂಥಗಳ ಸಾಲಿನ ಕನ್ನಡ ಛಂದೋರಂಗ ವಿಶೇಷ ಕೊಡುಗೆಯಾಗಿದೆ ಎಂದರು.

ಕೃತಿ ಕುರಿತು ಜಾನಪದ ವಿದ್ವಾಂಸ ಪಿ.ಕೆ. ರಾಜಶೇಖರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಟಿ.ಪ್ರಭಾ ರಂಗ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಬಿ.ಆರ್.ಜಯಕುಮಾರ್, ಪುಟ್ಟೇಗೌಡ, ನೀ.ಗೂ.ರಮೇಶ್, ಚಂದ್ರಿಕಾ ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »