ಸಿನಿಮಾ

ಕರಾವಳಿ ಹುಡುಗರ ಕನಸು ಮಾರಕಟಕ್ಕಿದೆ

May 8, 2020

ಬಣ್ಣದ ಲೋಕಕ್ಕೆ ಕನಸುಗಳನ್ನು ಹೊತ್ತುಕೊಂಡು ಹೊಸ ಪ್ರತಿಭೆಗಳು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಅದೇ ರೀತಿಯಲ್ಲಿ ಕರಾವಳಿ ಹುಡುಗರ ತಂಡ ವೊಂದು ‘ಕನಸು ಮಾರಾಟಕ್ಕಿದೆ’ ಚಿತ್ರವನ್ನು ಸದ್ದಿಲ್ಲದೆ ದಕ್ಷಿಣಕನ್ನಡ, ಹಾಸನ, ಬೆಂಗಳೂರು ಮತ್ತು ಉಡುಪಿ ಕಡೆಗಳಲ್ಲಿ ಚಿತ್ರೀಕರಣ ನಡೆಸಿ ಬಿಡುಗಡೆ ಹಂತಕ್ಕೆ ತಂದಿದ್ದಾರೆ. ಯುವಕರನ್ನು ಟಾರ್ಗೆಟ್ ಮಾಡಿಕೊಂಡು ಕತೆಯನ್ನು ಹಣೆಯ ಲಾಗಿದೆ. ಕನಸುಗಳನ್ನು ಬೆನ್ನೇರಿ ಹೋಗುವ ಹುಡುಗನ ಪರಿಸ್ಥಿತಿ. ಪ್ರಸಕ್ತ ಒಂದಷ್ಟು ಯುವಕರು ಕನಸು ಕಾಣ್ತಾರೆ. ಅದನ್ನು ನನಸು ಮಾಡಲು ತುಂಬ ಕಷ್ಟಪಡ್ತಾರೆ. ಅನೇಕ ಹುಡುಗರು ಕನಸನ್ನು ನನಸು ಮಾಡಿಕೊಳ್ಳಲು ಶ್ರಮ ಪಡುವುದಿಲ್ಲ. ಕೊನೆಯಲ್ಲಿ ಆತನ ಡ್ರೀಮ್ ನಿಜವಾಗದಿದ್ದರೂ, ಇನ್ನೊಬ್ಬರ ಕನಸನ್ನು ನನಸಾಗಿಸಲು ಪ್ರಯತ್ನ ಮಾಡುತ್ತಾನೆ. ಹೀಗೆ ಎರಡರ ತದ್ವಿರುದ್ದ ಪಯಣವೇ ಒಂದು ಎಳೆಯ ಸಾರಾಂಶವಾಗಿದೆ.

ಮುಗ್ದ ಹುಡುಗ, ಕಾಲೇಜು ವಿದ್ಯಾರ್ಥಿಯಾಗಿ ಪ್ರಜೇಶ್‍ಶೆಟ್ಟಿ ನಾಯಕ. ಸ್ವಸ್ತಿಕಾ ಪೂಜಾರಿ ಮತ್ತು ನವ್ಯಾ ಪೂಜಾರಿ ನಾಯಕಿಯರು, ಇವರೆಲ್ಲರಿಗೂ  ಸದರಿ ಚಿತ್ರ ಮೊದಲ ಅನುಭವ. ಕಾಮಿಡಿ ಕಿಲಾಡಿಗಳು ಸೀಜನ್1ರ ಕಲಾವಿದರುಗಳಾದ ಗೋವಿಂದೇಗೌಡ, ಸೂರ್ಯ ಕುಂದಾಪುರ, ಧೀರಜ್‍ಮಂಗಳೂರು, ಚಿದಂಬರ ಹಾಗೂ ಅನೀಶ್‍ಪೂಜಾರಿ ನಟನೆ ಜೊತೆಗೆ ಚಿತ್ರಕತೆ,ಸಂಭಾಷಣೆ, ಸಹ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇವರೊಂದಿಗೆ ಹಿರಿಯ ನಟ ಸಿದ್ಲಿಂಗು    ಶ್ರೀಧರ್ ನಟನೆ ಇದೆ. ಉಪನ್ಯಾಸಕ ಸ್ಮಿತೇಶ್.ಎಸ್.ಬಾರ್ಯ ನಿರ್ದೇಶಕರಾಗಿ ಪ್ರಥಮ ಪ್ರಯತ್ನ. ಗಾಯಕಿ ಮಾನಸಹೊಳ್ಳ ಐದು ಹಾಡುಗಳಿಗೆ ಸಂಗೀತ ಸಂಯೋಜಿಸಿರುವುದು ಎರಡನೇ ಅವಕಾಶ. ಛಾಯಾ ಗ್ರಹಣ ಸಂತೋಷ್ ಆಚಾರ್ಯಗುಂಪಲಾಜೆ, ರಚನೆ ನವೀನ್.ಜಿ. ಪೂಜಾರಿ, ಸಂಕಲನ ಗಣೇಶ್‍ನೀರ್ಚಾಲ್, ಸಾಹಿತ್ಯಕ್ಕೆ ಡಾ.ವಿ. ನಾಗೇಂದ್ರಪ್ರಸಾದ್, ಕವಿರಾಜ್, ಭರ್ಜರಿ ಚೇತನ್ ಕುಮಾರ್, ಹೊಸ ಪ್ರತಿಭೆ ಸುಖೇಶ್‍ಶೆಟ್ಟಿ ಪೆನ್ನು ಕೆಲಸ ಮಾಡಿದೆ.

ಮಡಕೇರಿಯ ಶಿವಕುಮಾರ್ ನಿರ್ಮಾಪಕರು. ಕೇರಳದ ಶರತ್‍ಕುಮಾರ್, ಬೆಳ್ತಂಗಡಿಯ ಪ್ರಶಾಂತ್ ಕೋಟ್ಯಾನ್ ಸಹ ನಿರ್ಮಾಪಕರಾಗಿ ಗುರುತಿಸಿ ಕೊಂಡಿದ್ದಾರೆ.

ಲಾಕ್‍ಡೌನ್ ನಂತರ ಚಿತ್ರವು ಸೆನ್ಸಾರ್‍ಗೆ ಹೋಗಲಿದೆ.

 

 

 

Translate »