ಸನ್ಸಾರ್ ಅಂಗಳದಲ್ಲಿ ಕಾಲಚಕ್ರ
ಸಿನಿಮಾ

ಸನ್ಸಾರ್ ಅಂಗಳದಲ್ಲಿ ಕಾಲಚಕ್ರ

May 8, 2020

ಪ್ರವರ್ಧಮಾನಕ್ಕೆ ಬರುತ್ತಿರುವ ನಟ ವಸಿಷ್ಟಸಿಂಹ ನಾಯಕನಾಗಿ ನಟಿಸಿರುವ ‘ಕಾಲಚಕ್ರ’ ಚಿತ್ರದ ಟೀಸರ್ ಅವರ ಹುಟ್ಟುಹಬ್ಬದಂದು ಸುದೀಪ್ ಲೋಕಾರ್ಪಣೆ ಮಾಡಿ ಶುಭ ಹಾರೈಸಿದ್ದರು. ನೈಜ ಘಟನೆ ಆಧಾರಿತ ಕತೆಯಾಗಿದ್ದು, ನೋಡುಗನಿಗೆ ಪ್ರತಿಯೊಂದು ಪಾತ್ರವು ತನಗೆ ಸಂಬಂಧಿಸಿದೆ ಅನಿಸುತ್ತದೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಘಟನೆಗಳು ನಡೆಯುತ್ತವೆ. ಅದೆಲ್ಲಾವನ್ನು ಎದುರಿಸಿ ಬರುವಷ್ಟರಲ್ಲಿ ಅವನ ಪ್ರಾಣಪಕ್ಷಿ ಹಾರಿಹೋಗಿರುತ್ತೆ. ಅಂತಹ ಘಟನೆ ನಡೆದಾಗ ಮನುಷ್ಯನಾದವನು ಹೇಗೆ ಸ್ಪಂದಿಸುತ್ತಾನೆ. ಆ ಸಂದರ್ಭದಲ್ಲಿ ಯಾವ ರೀತಿ ಎದುರಿಸುತ್ತಾನೆ. ಇದೆಲ್ಲಾವನ್ನು ಪ್ರಸಕ್ತ ಕಾಲಘಟ್ಟದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ರಚನೆ, ನಿರ್ದೇಶನ ಮಾಡಿರುವ ‘ನಾನಿ’ ಖ್ಯಾತಿಯ ಸುಮಂತ್‍ಕ್ರಾಂತಿ ಪತ್ನಿ ರಶ್ಮಿ.ಕೆ. ಹೆಸರಿನಲ್ಲಿ ನಿರ್ಮಾಣ ಮಾಡಿದ್ದಾರೆ.

35 ಹಾಗೂ 60+ ವಯಸ್ಸಿನ ಬೇರೆ ಆಯಾಮಗಳಲ್ಲಿ ವಸಿಷ್ಟಸಿಂಹ ನಾಯಕನಾಗಿ ಕಾಣಿಸಿಕೊಂಡಿರುವುದು ವಿಶೇಷ. ನಾಯಕಿ ರಕ್ಷ, ಬೇಬಿ ಆವಿಕಾ ಮುಂತಾದವರು ನಟಿಸಿದ್ದಾರೆ.

ಬೆಂಗಳೂರು ಮತ್ತು ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಕವಿರಾಜ್, ಸಂತೋಷ್ ನಾಯಕ್ ಸಾಹಿತ್ಯದ ಹಾಡುಗಳಿಗೆ ಗುರುಕಿರಣ್ ರಾಗ ಒದಗಿಸಿದ್ದಾರೆ. ಎಲ್.ಎಂ. ಸೂರಿ ಛಾಯಾಗ್ರಹಣ, ಸೌಂದರರಾಜನ್ ಸಂಕಲನವಿದೆ. ಲಾಕ್‍ಡೌನ್ ಮುಗಿದ ತರುವಾಯ ಚಿತ್ರವು ಸೆನ್ಸಾರ್‍ಗೆ ಹೋಗಲಿದೆ.

Translate »