ಇನ್ಸ್‍ಪೆಕ್ಟರ್ ಶ್ರೀದುರ್ಗಿ ಆಗಿ ಪ್ರಿಯಾಂಕ ಉಪೇಂದ್ರ!
ಸಿನಿಮಾ

ಇನ್ಸ್‍ಪೆಕ್ಟರ್ ಶ್ರೀದುರ್ಗಿ ಆಗಿ ಪ್ರಿಯಾಂಕ ಉಪೇಂದ್ರ!

May 8, 2020

ಈ ಹಿಂದೆ ಸೆಕೆಂಡ್ ಹಾಫ್ ಎಂಬ ಚಿತ್ರದಲ್ಲಿ ಸಾಮಾನ್ಯ ಪೆÇಲೀಸ್ ಪೇದೆಯ ಪಾತ್ರದ ಮೂಲಕ ಗಮನ ಸೆಳೆದಿದ್ದ ನಟಿ ಪ್ರಿಯಾಂಕ ಉಪೇಂದ್ರ ಈಗ ಮತ್ತೊಮ್ಮೆ ಖಾಕಿ ಹಾಕಿ ಅಬ್ಬರಿಸಲು ಅಣಿಯಾಗಿದ್ದಾರೆ. ಆ ಚಿತ್ರದ ಹೆಸರು ಉಗ್ರಾವತಾರ. ಈ ಚಿತ್ರದಲ್ಲಿ ಒಬ್ಬ ಖಡಕ್ ಪೆÇಲೀಸ್ ಇನ್ಸ್‍ಪೆಕ್ಟರ್ ಆಗಿ ಪ್ರಿಯಾಂಕ ಉಪೇಂದ್ರ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಇನ್‍ಸ್ಪೆಕ್ಟರ್ ದುರ್ಗಿಯಾಗಿ ಉಗ್ರಾವತಾರ ತಾಳಿ ದುಷ್ಟರನ್ನು ಸೆದೆಬಡಿಯಲಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ನೆಲಮಂಗಲ ಸುತ್ತ ಮುತ್ತ ನಡೆಸಲಾಗಿದ್ದು, ಶೇ.30ರಷ್ಟು ಶೂಟಿಂಗ್ ಮುಗಿದಿದೆ.

ಈ ಹಂತದಲ್ಲಿ ಪ್ರಿಯಾಂಕ ಉಪೇಂದ್ರ ಅವರ ಸಾಹಸ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಸಾಹಸ ದೃಶ್ಯಗಳು ರಿಯಲ್ ಆಗಿ ಬರಲೆಂದು ನಾಯಕಿ ಪ್ರಿಯಾಂಕ ಅವರು, ಸ್ಟಂಟ್ ರವಿ ಅವರಿಂದ ಆಕ್ಷನ್‍ಗಂತಲೇ ವಿಶೇಷ ತರಬೇತಿ ಪಡೆದುಕೊಂಡು, ಕ್ಯಾಮೆರಾ ಮುಂದೆ ಡ್ಯೂಪ್ ಬಳಸದೆ ನೈಜವಾಗಿ ಭಾಗವಹಿಸಿದ್ದಾರೆ. ಇದೊಂದು ಮರ್ಡರ್ ಮಿಸ್ಟರಿ ಕತೆ ಹೊಂದಿದ ಚಿತ್ರವಾಗಿದ್ದು, ಅತ್ಯಾಚಾರ ಪ್ರಕರಣ ನಡೆದಾಗ, ಅದನ್ನು ಯಾರು, ಏಕೆ ಮಾಡುತ್ತಾರೆ ಎಂಬುದರ ತನಿಖೆಯ ಸುತ್ತ ಚಿತ್ರಕಥೆ ಸಾಗುತ್ತದೆ. ಆ ಘಟನೆಯ ಹಿಂದಿರುವ ಒಂದೊಂದೇ ಸತ್ಯಗಳು ತೆರೆದುಕೊಳ್ಳುತ್ತದೆ. ಮಹಿಳೆಯೊಬ್ಬಳು ರಸ್ತೆಯಲ್ಲಿ ಹೋಗುವಾಗ ಆಕೆಯನ್ನು ಗೌರವ ಭಾವನೆಯಿಂದ ಕಾಣಿರಿ ಎಂಬ ಸಂದೇಶ ಈ ಚಿತ್ರದಲ್ಲಿದೆ. ಹಾಸನ ಮೂಲದ ನಿಸರ್ಗ, ನಾಜರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿರಿಯನಟ ಆಶಿಷ್ ವಿದ್ಯಾರ್ಥಿ ಕೂಡ ಈ ಚಿತ್ರದಲ್ಲಿ ನಟಿಸುವ ಸಾಧ್ಯೆತೆ ಇದೆ. ಯುವ ನಿರ್ದೇಶಕ ಗುರುಮೂರ್ತಿ ಅವರ ಪ್ರಥಮ ಚಿತ್ರವಿದು. ಕಿನ್ನಾಳ್‍ರಾಜ್ ಅವರ ಸಾಹಿತ್ಯದ ನಾಲ್ಕು ಹಾಡುಗಳಿಗೆ ರವಿ ಬಸ್ರೂರು ಸೋದರ ರಾಧಾಕೃಷ್ಣ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ನಂದಕುಮಾರ್ ಅವರದಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ಚಿಕ್ಕಾಬಳ್ಳಾಪುರದ ಮುನಿಕೃಷ್ಣ, ಎಂಕೆ.ಪಿಕ್ಚರ್ಸ್ ಮೂಲಕ ಉಗ್ರಾವತರಂ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರಿಯಾಂಕ ಉಪೇಂದ್ರ ಹುಟ್ಟುಹಬ್ಬದಂದು ಈ ಚಿತ್ರದ ಪೆÇೀಸ್ಟರ್‍ನ್ನು ಬಿಡುಗಡೆ ಮಾಡಲಾಗಿತ್ತು. ಲಾಕ್‍ಡೌನ್ ನಂತರ ಈ ಚಿತ್ರದ ಉಳಿದ ಭಾಗದ ಚಿತ್ರೀಕರಣ ಪುನರಾರಂಭವಾಗಲಿದೆ.

Translate »