ಪಾಕ್ ಕ್ರಿಕೆಟಿಗನೊಂದಿಗೆ ವಿವಾಹ : ಮಿಲ್ಕಿಬ್ಯೂಟಿ ಸ್ಪಷ್ಟನೆ
ಸಿನಿಮಾ

ಪಾಕ್ ಕ್ರಿಕೆಟಿಗನೊಂದಿಗೆ ವಿವಾಹ : ಮಿಲ್ಕಿಬ್ಯೂಟಿ ಸ್ಪಷ್ಟನೆ

May 8, 2020

ಇತ್ತೀಚೆಗೆ ದಕ್ಷಿಣಭಾರತ ಚಿತ್ರರಂಗದ ಮಿಲ್ಕಿಬ್ಯೂಟಿ ಎಂದೇ ಹೆಸರಾಗಿರುವ ತಮನ್ನಾ ಭಾಟಿಯಾ ಪಾಕಿಸ್ತಾನದ ಕ್ರಿಕೆಟಿಗರೊಬ್ಬರನ್ನು ಮದುವೆಯಾಗುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈಗ ಈ ವಿಷಯಕ್ಕೆ ಸಂಬಂಧಿಸಿ ದಂತೆ ಸ್ವತಃ ತಮನ್ನಾ ಅವರೇ ಸ್ಪಷ್ಟನೆ ನೀಡಿz್ದÁರೆ.

ಸದ್ಯ ಸೌಥ್‍ನ ಟಾಪ್ ನಟಿಯಾಗಿರುವ ತಮನ್ನಾ ಈಗ ಹಿಂದಿ ಚಿತ್ರದಲ್ಲೂ ನಟಿಸುತ್ತಿz್ದÁರೆ. ಹಾಗಾಗಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ನಂತರ ತಮನ್ನಾ ಪಾಕ್ ಕ್ರಿಕೆಟಿಗನನ್ನು ಮದುವೆಯಾಗುತ್ತಾರೆ ಎನ್ನಲಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ತಮನ್ನಾ ಇದು ಶುದ್ಧ ಸುಳ್ಳು ಎಂದು ಹೇಳಿz್ದÁರೆ.

ಇನ್ನು ತಮನ್ನಾ ಜೊತೆ ಥಳಕು ಹಾಕಿಕೊಂಡ ಪಾಕ್ ಕ್ರಿಕೆಟಿಗ ಯಾರು ಗೊತ್ತೇ ? ಅದು ಮಾಜಿ ಆಟಗಾರ ಅಬ್ದುಲ್ ರಜಾಕ್. ಈಗಾಗಲೇ ವಿವಾಹಿತ ನಾಗಿರುವ ಅಬ್ದುಲ್ ರಜಾಕ್‍ರನ್ನು ತಮನ್ನಾ ಯಾಕೆ ಮದುವೆಯಾಗ್ತಾರೆ ಎಂದು ಕೆಲ ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಕೆಲ ಕಿಡಿಗೇಡಿಗಳು ತಮ್ಮನ್ನಾ ಮತ್ತು ರಜಾಕ್ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಈ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ.

ತಮನ್ನಾ ಮತ್ತು ರಜಾಕ್ ಅಕ್ಕ ಪಕ್ಕದಲ್ಲಿ ನಿಂತಿರುವ ಈ ಫೋಟೋದಲ್ಲಿ ರಜಾಕ್ ಕೆಲ ಆಭರಣಗಳನ್ನು ಹಿಡಿದುಕೊಂಡಿz್ದÁರೆ. ಪಕ್ಕದ¯್ಲÉೀ ಬಿಳಿ ಬಣ್ಣದ ಚೂಡಿದಾರ್ ತೊಟ್ಟು ನಿಂತಿರುವ ತಮನ್ನಾ  ಆಭರಣಗಳನ್ನು ನೋಡುತ್ತಿ z್ದÁರೆ. ಈ ಹಳೇ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಿಡಿಗೇಡಿಗಳು. ಸಾನಿಯಾ ಮಿರ್ಜಾ ನಂತರ ತಮನ್ನಾ ಪಾಕ್ ಕ್ರಿಕೆಟಿಗರನ್ನು ಮದುವೆಯಾಗುತ್ತಿz್ದÁರೆ ಎಂದು ಸುದ್ದಿ ಹಬ್ಬಿಸಿz್ದÁರೆ.

ಇದನ್ನು ಕೇಳಿ ಕೋಪಗೊಂಡ ತಮನ್ನಾ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದು, ನಾನು ಯಾವ ಪಾಕ್ ಆಟಗಾರರನ್ನು ಮದುವೆಯಾಗು ತ್ತಿಲ್ಲ. ಆಭರಣ ಮಳಿಗೆಯೊಂದರ ಉದ್ಘಾಟನೆ ಸಮಾರಂಭದಲ್ಲಿ ನಾನು ರಜಾಕ್ ಅವರನ್ನು ಭೇಟಿ ಮಾಡಿz್ದÉ. ಇದು ಹಳೆಯ ಫೋಟೋ. ಇದನ್ನು ಈಗ ಯಾರೋ ವೈರಲ್ ಮಾಡಿz್ದÁರೆ. ನನ್ನ ಮದುವೆಯ ಬಗ್ಗೆ ನಾನೇ ಹೇಳಿಕೊಳ್ಳುತ್ತೇನೆ ವದಂತಿಗಳನ್ನು ನಂಬಬೇಡಿ ಎಂದು ಗಾಳಿ ಸುದ್ದಿಗೆ ತೆರೆ ಎಳೆದಿz್ದÁರೆ.

ಇತ್ತೀಚೆಗೆ ರಾಕಿಂಗ್‍ಸ್ಟಾರ್ ಯಶ್ ಜೊತೆ ತಮನ್ನಾ ಸಿನಿಮಾ ಮಾಡುತ್ತಾರೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಮಫ್ತಿ ಸಿನಿಮಾ ನಿರ್ದೇಶಿಸಿದ್ದ ನರ್ತನ್ ಈ ಚಿತ್ರಕ್ಕೆ ಆಕ್ಷನ್‍ಕಟ್ ಹೇಳಲಿದ್ದು, ಈ ಚಿತ್ರದಲ್ಲಿ ಯಶ್ ಜೋಡಿಯಾಗಿ ತಮನ್ನಾ ನಟಿಸುತ್ತಾರೆ ಎನ್ನಲಾಗುತ್ತಿದೆ. ಆದರೆ ಇದಿನ್ನೂ ಅಧಿಕೃತವಾಗಿಲ್ಲ.

 

 

 

Translate »