ವಿವಿಧ ಯೋಜನೆ ಕುರಿತು ಕರ್ನಾಟಕ-ಕೇರಳ ದ್ವಿಪಕ್ಷೀಯ ಮಾತುಕತೆ ಕೇರಳÀ ಬೇಡಿಕೆಗಳಿಗೆ  ಬೊಮ್ಮಾಯಿ ತಿರಸ್ಕಾರ
News

ವಿವಿಧ ಯೋಜನೆ ಕುರಿತು ಕರ್ನಾಟಕ-ಕೇರಳ ದ್ವಿಪಕ್ಷೀಯ ಮಾತುಕತೆ ಕೇರಳÀ ಬೇಡಿಕೆಗಳಿಗೆ ಬೊಮ್ಮಾಯಿ ತಿರಸ್ಕಾರ

September 19, 2022

ಬೆಂಗಳೂರು, ಸೆ.18-ಕರ್ನಾಟಕ ಮತ್ತು ಕೇರಳ ನಡು ವಿನ ಮಹತ್ವದ ರೈಲ್ವೆ ಯೋಜನೆಗಳ ಸಂಬಂಧ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಭಾನು ವಾರ ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವ ರನ್ನು ಭೇಟಿ ಮಾಡಿ, ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಈ ಮಾತುಕತೆ ವೇಳೆ ಕೇರಳ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ ಎಲ್ಲಾ ಯೋಜನೆಗಳಿಗೂ ಸಹಮತ ವ್ಯಕ್ತಪಡಿ ಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರಾ ಕರಿಸಿದ್ದಾರೆ. ರಾಜ್ಯದ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಹಾಗೂ ವನ್ಯಜೀವಿ ಧಾಮದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಳು ತಿಳಿಸಿದ್ದಾರೆ. ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದಕ್ಷಿಣ ವಲಯ ಪರಿಷತ್ತಿನ ಸಭೆಯ ತೀರ್ಮಾನದಂತೆ ದ್ವಿಪಕ್ಷೀಯ ಮಾತುಕತೆ ನಡೆಸಲು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಆಗಮಿಸಿದ್ದರು. ರಾಜ್ಯದ ಸೂಕ್ಷ್ಮ ಪರಿಸರ ಪ್ರದೇಶ ಹಾಗೂ ವನ್ಯಜೀವಿ ಧಾಮಗಳಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಅವರಿಗೆ ಸ್ಪಷ್ಟಪಡಿಸಿದ್ದೇನೆ ಎಂದರು.

ಕಾಞಂಗಾಡ್-ಕಾಣಿಯೂರು ರೈಲ್ವೆ ಮಾರ್ಗ ಸೇರಿ ದಂತೆ ವಿವಿಧ ರೈಲ್ವೆ ಮತ್ತು ಹೆದ್ದಾರಿ ಯೋಜನೆಗಳಿಗೆ ಸಹ ಮತಿ ನೀಡುವಂತೆ ಕೇರಳ ಸರ್ಕಾರ ಕೋರಿತು. ಪ್ರಸ್ತಾಪಿತ ಕಾಞಂಗಾಡ್-ಕಾಣಿಯೂರು ರೈಲ್ವೆ ಮಾರ್ಗವು ಸುಳ್ಯಾ ಭಾಗದಲ್ಲಿ ಬರುತ್ತದೆ. ಈ ಮಾರ್ಗವು ಕೇರಳದಲ್ಲಿ 40 ಕಿ.ಮೀ. ಮತ್ತು ಕರ್ನಾಟಕದಲ್ಲಿ 31 ಕಿ.ಮೀ. ಹಾದು ಹೋಗು ತ್ತದೆ. ಇದರಿಂದ ರಾಜ್ಯಕ್ಕೆ ಹೆಚ್ಚಿನ ಅನುಕೂಲವೇನೂ ಇಲ್ಲ. ಅಲ್ಲದೇ ಪಶ್ಚಿಮಘಟ್ಟದ ಜೀವ ವೈವಿಧ್ಯ ಸೂಕ್ಷ್ಮ ಪ್ರದೇಶದಲ್ಲಿ ಈ ರೈಲ್ವೆ ಮಾರ್ಗ ಹಾದು ಹೋಗುವ ಕಾರಣ ಈ ಯೋಜನೆಗೆ ಸಹಮತ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಹಳೆಯ ಯೋಜನೆಯಾದ ತಲಚೇರಿ-ಮೈಸೂರು ರೈಲ್ವೆ ಯೋಜನೆಯನ್ನೂ ಕೂಡ ಪ್ರಸ್ತಾಪಿಸಿದರು. ಈ ರೈಲ್ವೆ ಮಾರ್ಗವು ಬಂಡೀಪುರ-ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮಧ್ಯ ಭಾಗದಲ್ಲಿ ಹಾದು ಹೋಗುವು ದರಿಂದ ವನ್ಯಜೀವಿ ಸಂಪತ್ತು ಮತ್ತು ಅರಣ್ಯ ಸಂಪತ್ತಿಗೆ ಹಾನಿಯಾಗುತ್ತದೆ. ಹೀಗಾಗಿ ಈ ಯೋಜನೆಗೂ ಕೂಡ ಸಮ್ಮತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಲಾಯಿತು. ಸುರಂಗ ರೈಲ್ವೆ ಮಾರ್ಗ ನಿರ್ಮಿಸುವ ಕುರಿತೂ ಕೂಡ ಕೇರಳ ಸರ್ಕಾರ ಪ್ರಸ್ತಾಪಿಸಿದೆ. ಆದರೆ ಈ ರೈಲ್ವೆ ಸುರಂಗ ಮಾರ್ಗ ನಿರ್ಮಾಣ ಚಟು ವಟಿಕೆ ಸಂದರ್ಭದಲ್ಲಿ ಪರಿಸರ ಹಾನಿಯಾಗುತ್ತದೆ. ಆದ್ದರಿಂದ ಅದನ್ನು ಸಮ್ಮತಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಯಿತು. ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲಕ ರಾತ್ರಿ ವೇಳೆ ಕೇರಳಾಗೆ ಎರಡು ಬಸ್‍ಗಳು ಸಂಚರಿಸುತ್ತಿವೆ. ಅದನ್ನು ನಾಲ್ಕಕ್ಕೆ ಏರಿಸುವಂತೆ ಕೇರಳಾ ಮುಖ್ಯಮಂತ್ರಿಗಳು ಕೋರಿದರು. ಅದಕ್ಕೂ ಕೂಡ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Translate »