ಉಪ ಚುನಾವಣೆ ನಂತರ ಬಂಡೆ ಛಿದ್ರ ! ಹುಲಿಯಾ ಕಾಡಿಗೆ !!
ಮೈಸೂರು

ಉಪ ಚುನಾವಣೆ ನಂತರ ಬಂಡೆ ಛಿದ್ರ ! ಹುಲಿಯಾ ಕಾಡಿಗೆ !!

October 22, 2020

ಬೆಂಗಳೂರು,ಅ.21(ಕೆಎಂಶಿ)- ರಾಜ್ಯ ದಲ್ಲಿ ನಡೆಯುತ್ತಿರುವ ವಿಧಾನಸಭಾ ಉಪ ಚುನಾವಣೆಯ ಬಳಿಕ ಬಂಡೆ (ಶಿವಕುಮಾರ್) ಛಿದ್ರವಾಗುತ್ತದೆ. ಹುಲಿಯಾ (ಸಿದ್ದ ರಾಮಯ್ಯ) ಕಾಡಿಗೆ ಹೋಗಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಲೇವಡಿ ಮಾಡಿ ದ್ದಾರೆ. ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನ ಈ ನಾಯಕರ ಮಧ್ಯೆ ಸಮನ್ವಯತೆ ಇಲ್ಲದೆ, ಆ ಪಕ್ಷ ದಿಕ್ಕೆಟ್ಟು ಹೋಗಿದೆ ಎಂದರು. ಎರಡೂ ಕ್ಷೇತ್ರ ದಲ್ಲೂ ಬಿಜೆಪಿಯ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದ ಅವರು, ಸಿದ್ದರಾಮಯ್ಯ ಅವರಿಗೆ ಬಹು ಮತ ಇದ್ದಾಗ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ಟಿಪ್ಪು ಜಯಂತಿ ಹಾಗೂ ಜಾತಿ ರಾಜಕಾರಣ ಮಾಡುತ್ತಾ, ಸಮಾಜ ಒಡೆಯುವ ಕೆಲಸ ಮಾಡಿ ದರು. ದೇವೇಗೌಡರ ಕುಟುಂಬಕ್ಕೆ ಇನ್ನಿ ಲ್ಲದ ತೊಂದರೆ ನೀಡಿದರು. ಜೆಡಿಎಸ್ ಅಧಿಕಾರದಲ್ಲಿದ್ದರೆ, ಒಂದು ರೀತಿ ವರ್ತಿ ಸುತ್ತದೆ. ಇಲ್ಲದಾಗ ಮತ್ತೊಂದು ರೀತಿ ವರ್ತಿ ಸುತ್ತದೆ. ಅಪ್ಪ ಒಂದು ಪಕ್ಷದ ಪರ ಮಾತ ನಾಡಿದರೆ, ಮಗ ಇನ್ನೊಂದು ಪಕ್ಷದ ಪರ ಮಾತನಾಡುತ್ತಾರೆ ಎಂದರು.

Translate »