ಅ.17ಕ್ಕೆ ಕಾವೇರಿ ತೀರ್ಥೋದ್ಭವ
ಮೈಸೂರು

ಅ.17ಕ್ಕೆ ಕಾವೇರಿ ತೀರ್ಥೋದ್ಭವ

September 23, 2020

ಮಡಿಕೇರಿ,ಸೆ.22-ಕಾವೇರಿ ತವರು ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿಯಾಗಿದ್ದು, ಅ.17ರಂದು ಬೆಳಗ್ಗೆ 7.03 ಗಂಟೆಗೆ ಕಾವೇರಿ ತೀರ್ಥೋದ್ಭವ ವಾಗಲಿದೆ. ಇದರ ಅಂಗವಾಗಿ ಸೆ.26 ರಂದು ಬೆಳಗ್ಗೆ 8.31ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು, ಅ.4ರಂದು ಬೆಳಗ್ಗೆ 10.33 ಗಂಟೆಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅ.14ರಂದು ಬೆಳಗ್ಗೆ 11.45 ಗಂಟೆಗೆ ಸಲ್ಲುವ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು, ಅ.14ರಂದು ಸಾಯಂ ಕಾಲ 5.15 ನಿಮಿಷಕ್ಕೆ ಸಲ್ಲುವ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿಗಳನ್ನು ಇರಿಸುವುದು ಹಾಗೂ ಅ.17ರಂದು ಶನಿವಾರ ಬೆಳಗ್ಗೆ 7.03 ನಿಮಿಷಕ್ಕೆ ಸಲ್ಲುವ ಕನ್ಯಾ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವ ಜರುಗಲಿದೆ.