ಸಿಎಂ ಯಡಿಯೂರಪ್ಪ ಬದಲಾವಣೆ ವರದಿ ತಳ್ಳಿಹಾಕಿದ ಬಿಜೆಪಿ
ಮೈಸೂರು

ಸಿಎಂ ಯಡಿಯೂರಪ್ಪ ಬದಲಾವಣೆ ವರದಿ ತಳ್ಳಿಹಾಕಿದ ಬಿಜೆಪಿ

September 23, 2020

ಬೆಂಗಳೂರು: ಮುಖ್ಯಮಂತ್ರಿ ಯಡಿ ಯೂರಪ್ಪ ನಾಯಕತ್ವ ಬದಲಾವಣೆ ಯನ್ನು ರಾಜ್ಯ ಬಿಜೆಪಿ ಸ್ಪಷ್ಟವಾಗಿ ತಳ್ಳಿ ಹಾಕಿದೆ. ಮುಖ್ಯಮಂತ್ರಿ ದೆಹಲಿಗೆ ತೆರ ಳಿದ ಸಂದರ್ಭದಲ್ಲಿ ಕೆಲ ಮಾಧ್ಯಮಗಳಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಬಂದ ವರದಿಗಳನ್ನು ಸ್ಪಷ್ಟವಾಗಿ ನಿರಾ ಕರಿಸುವ ಬಿಜೆಪಿ ಮೂಲಗಳು, ಇದೆಲ್ಲವೂ ಬರೀ ಊಹಾಪೋಹ ಎಂದು ಸ್ಪಷ್ಟಪಡಿ ಸಿವೆ. ಈ ವರದಿಗಳು ಆಧಾರರಹಿತ ಮತ್ತು ದಾರಿತಪ್ಪಿಸುವಂತಹವು ಎಂದು ರಾಜ್ಯ ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಹೇಳಿದ್ದಾರೆ.