ಮಾನಸಗಂಗೋತ್ರಿಯಲ್ಲಿ 5 ಕಡೆ ಎಲ್‍ಇಡಿ ಸ್ಕ್ರೀನ್ ಅಳವಡಿಕೆ
ಮೈಸೂರು

ಮಾನಸಗಂಗೋತ್ರಿಯಲ್ಲಿ 5 ಕಡೆ ಎಲ್‍ಇಡಿ ಸ್ಕ್ರೀನ್ ಅಳವಡಿಕೆ

September 23, 2020

ಮೈಸೂರು, ಸೆ.22 (ಆರ್‍ಕೆ)- ಜನಸಾಮಾನ್ಯರಿಗೆ ಹತ್ತಿರವಾಗಲು ಮುಂದಾಗಿರುವ ಮೈಸೂರು ವಿಶ್ವ ವಿದ್ಯಾನಿಲಯವು ಮಾನಸಗಂಗೋತ್ರಿ ಆವರಣದ 5 ಕಡೆ ಎಲ್‍ಇಡಿ ಸ್ಕ್ರೀನ್‍ಗಳನ್ನು ಅಳವಡಿಸಿದೆ.

ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಸೌಧ ವಿರುವ ಕ್ರಾಫರ್ಡ್ ಭವನದ ಮುಂಭಾಗ, ಮಾನಸ ಗಂಗೋತ್ರಿಯ ದಕ್ಷಿಣ ದ್ವಾರದ ರಾಷ್ಟ್ರಕವಿ ಕುವೆಂಪು ಪ್ರತಿಮೆ ಇರುವ ಬೋಗಾದಿ ರಸ್ತೆಗೆ ಹೊಂದಿಕೊಂಡಂತಿ ರುವ ಪ್ರವೇಶ ದ್ವಾರ, ಸೆನೆಟ್ ಭವನದ ಬಳಿಯ ಗೇಟ್, ವಿಶ್ವವಿದ್ಯಾನಿಲಯದ ಕ್ಯಾಂಟೀನ್ ಸಮೀಪ, ಎಸ್‍ಜೆಸಿಇ ಗೇಟ್ ಎದುರಿನ ಗಂಗೋತ್ರಿ ಪಶ್ಚಿಮ ದ್ವಾರದ ಬಳಿ ದೊಡ್ಡ ಎಲ್‍ಇಡಿ ಸ್ಕ್ರೀನ್‍ಗಳನ್ನು ಅಳವಡಿಸಲಾಗಿದೆ.

ಒಟ್ಟು 55 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಿರುವ ಸ್ಕ್ರೀನ್‍ಗಳ ಮೇಲೆ ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯ ನಡೆದು ಬಂದ ದಾರಿ, ಇತಿ ಹಾಸ, ಹಿನ್ನೆಲೆ, ಸಂಸ್ಥಾಪಕರ ಶ್ರಮ, ನಂತರದ ಕುಲಪತಿಗಳು ಮುನ್ನಡೆಸಿಕೊಂಡು ಬಂದ ಬಗ್ಗೆ ಮಾಹಿತಿ, ವಿಶ್ವವಿದ್ಯಾನಿಲಯದಲ್ಲಿರುವ ಶೈಕ್ಷಣಿಕ ವ್ಯವಸ್ಥೆ, ಸಾಧನೆ, ಸಂಶೋಧನೆ ಸೌಲಭ್ಯ ಕುರಿತಂತೆ ದೃಶ್ಯರೂಪದ ಮಾಹಿತಿ ಪ್ರದರ್ಶಿಸಲಾಗುವುದು.

ಕ್ರಾಫರ್ಡ್ ಭವನ, ವಿಜ್ಞಾನ ಭವನ, ಸೆನೆಟ್ ಭವನ, ಮಾನವಿಕ ಸಭಾಂಗಣ, ರಾಣಿ ಬಹದ್ದೂರು ಸಭಾಂ ಗಣ, ಕನ್ನಡ ಅಧ್ಯಯನ ಕೇಂದ್ರ, ಡಾ.ಬಿ.ಆರ್. ಅಂಬೇ ಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸೇರಿ ದಂತೆ ವಿವಿಧೆಡೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆಯಲಿರುವ ಕಾರ್ಯಕ್ರಮ, ಕಾರ್ಯಾಗಾರ, ವಿಚಾರ ಸಂಕಿರಣ, ಸಂವಾದ ಸೇರಿದಂತೆ ಇನ್ನಿತರ ಸಮಾರಂಭಗಳ ಬಗ್ಗೆ ಮಾಹಿತಿಯನ್ನು ಈ ಎಲ್‍ಇಡಿ ಸ್ಕ್ರೀನ್‍ಗಳಲ್ಲಿ ಪ್ರಸಾರ ಮಾಡಲಾಗುವುದು.

ಶೈಕ್ಷಣಿಕ ಕಾರ್ಯಕ್ರಮ, ಪರೀಕ್ಷಾ ವೇಳಾಪಟ್ಟಿ, ಪರೀಕ್ಷಾ ಶುಲ್ಕ ಇನ್ನಿತರ ಅಧಿಸೂಚನೆ, ತಿಳುವಳಿಕೆ, ಮಾರ್ಗಸೂಚಿಗಳನ್ನೂ ವಿದ್ಯಾರ್ಥಿಗಳ ಗಮನಕ್ಕೆ ತರಲು ಈ ಸ್ಕ್ರೀನ್‍ಗಳನ್ನು ಬಳಸಿಕೊಳ್ಳುವ ಜೊತೆಗೆ ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಇರುವುದ ರಿಂದ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಕೇಂದ್ರ, ಕಾಲೇಜು ಗಳಿಗೆ ಖುದ್ದು ಭೇಟಿ ನೀಡಿ ಮಾಹಿತಿ ಪಡೆಯುವು ದನ್ನು ತಪ್ಪಿಸಲು ಈ ಮಾಧ್ಯಮದಲ್ಲಿ ಬಿತ್ತರಿಸಲಾಗು ತ್ತದೆ. ಯಾವುದೇ ವೈರ್ ಅಳವಡಿಸದೆ, ಕೇವಲ ವೈ-ಫೈ ಸಹಾಯದಿಂದ ಎಲ್‍ಇಡಿ ಸ್ಕ್ರೀನ್‍ಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದು, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಬೆಂಗಳೂರು ಮೂಲದ ಎಲೆಕ್ಟ್ರಾನಿಕ್ ಕಂಪನಿಯೊಂದು ಈ ಡಿಜಿಟಲ್ ಸ್ಕ್ರೀನ್‍ಗಳನ್ನು ಅಳವಡಿಸಿ, ನಿರ್ವಹಣೆ ಮಾಡಲಿದೆ. ಮಾಹಿತಿಗಾಗಿ ಕ್ಯಾಂಪಸ್‍ನಲ್ಲಿ ಎಲ್‍ಇಡಿ ಡಿಜಿಟಲ್ ಸೈನೇಜ್‍ಗಳನ್ನು ಅಳವಡಿಸಿರುವುದು ಹಾಗೂ ವೈರ್ ಲೆಸ್ ಸಂಪರ್ಕದಿಂದ ದೃಶ್ಯಗಳನ್ನು ಪ್ರಸಾರ ಮಾಡುವ ವ್ಯವಸ್ಥೆ ಕಲ್ಪಿಸಿರುವುದು ಮೈಸೂರು ವಿಶ್ವವಿದ್ಯಾ ನಿಲಯವು ರಾಜ್ಯದಲ್ಲೇ ಮೊದಲನೆಯದಾಗಿದೆ. ಈಗ ಕೇವಲ ವೀಡಿಯೋ ಮಾತ್ರ ಇದ್ದು, ಮುಂದಿನ ದಿನಗಳಲ್ಲಿ ಆಡಿಯೋ ಮೂಲಕ ಪ್ರಸಾರ ಮಾಡುವ ವ್ಯವಸ್ಥೆ ಮಾಡಲು ವಿಶ್ವವಿದ್ಯಾನಿಲಯವು ಚಿಂತನೆ ನಡೆಸಿದೆ. ಕಳೆದ 1 ತಿಂಗಳ ಹಿಂದಷ್ಟೇ ಮಾನಸ ಗಂಗೋತ್ರಿ ಆವರಣದಲ್ಲಿ 5 ಕೋಟಿ ರೂ. ವೆಚ್ಚ ಮಾಡಿ 760 ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ಸುರಕ್ಷತೆ ಹಾಗೂ ಭದ್ರತಾ ಕ್ರಮಗಳನ್ನು ಕೈಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

Translate »