ಮುಕ್ತ ವಿವಿಯಲ್ಲಿ ಪದವಿ ಪಡೆದ 18 ಮಂದಿ ಈಗ ಕೆಎಎಸ್ ಅಧಿಕಾರಿಗಳು
ಮೈಸೂರು

ಮುಕ್ತ ವಿವಿಯಲ್ಲಿ ಪದವಿ ಪಡೆದ 18 ಮಂದಿ ಈಗ ಕೆಎಎಸ್ ಅಧಿಕಾರಿಗಳು

September 23, 2020

ಮೈಸೂರು, ಸೆ.22(ಆರ್‍ಕೆ)-ಕರ್ನಾಟಕದ ಏಕಮಾತ್ರ ದೂರ ಶಿಕ್ಷಣ ಕಲಿಕಾ ಸಂಸ್ಥೆ ಎಂದು ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಘೋಷಿ ಸಿದ ಬೆನ್ನಲ್ಲೇ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಹಿರಿಮೆಗೆ ಇದೀಗ ಮತ್ತೊಂದು ಗರಿಮೆ ಸೇರಿದೆ.

ಕಳೆದ ವರ್ಷ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿ ಎಸ್‍ಸಿ) ನಡೆಸಿದ ಪರೀಕ್ಷೆಯಲ್ಲಿ ಮುಕ್ತ ವಿಶ್ವವಿದ್ಯಾನಿಲಯ ದಲ್ಲಿ ಪದವಿ ಪಡೆದ 18 ಮಂದಿ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ ಕೆಎಎಸ್ ಅಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ವಿದ್ಯಾಶಂಕರ ತಿಳಿಸಿದ್ದಾರೆ.

ಪಿ.ಎಸ್.ಭಾನುಪ್ರಿಯ (ಸಿಟಿಓ), ಎಂ.ಬಿ.ಚೆನ್ನಕೇಶವ (ಅಸಿಸ್ಟೆಂಟ್ ಕಮೀಷನರ್, ಕಮರ್ಷಿಯಲ್ ಟ್ಯಾಕ್ಸ್), ಕೆ.ಕೆ.ಕಿರಣ್ ಕುಮಾರ್ (ಅಸಿಸ್ಟೆಂಟ್ ರಿಜಿಸ್ಟ್ರಾರ್, ಕೋ-ಆಪರೇಟಿವ್), ಕೆ.ಆರ್. ಲಾವಣ್ಯ (ಅಸಿಸ್ಟೆಂಟ್ ರಿಜಿಸ್ಟ್ರಾರ್, ಕೋ-ಆಪರೇಟಿವ್), ಎಂ.ಎಸ್. ಮಹದೇವ (ಚೀಫ್ ಆಫೀಸರ್ ಗ್ರೇಡ್-1, ಮುನಿಸಿಪಲ್ ಅಡ್ಮಿನಿ ಸ್ಟ್ರೇಷನ್), ಮಂಜುನಾಥ್ ಮಲ್ಲಪ್ಪ (ಸಿಟಿಓ), ಎಂ.ಮಾನಸ (ಚೀಫ್ ಆಫೀಸರ್ ಗ್ರೇಡ್-1), ಎಸ್.ಮಂಜುಳಾ (ಅಸಿಸ್ಟೆಂಟ್ ರಿಜಿಸ್ಟ್ರಾರ್, ಕೋ-ಆಪರೇಟಿವ್), ಪಿ.ಕೆ.ಮಂಜುನಾಥ್ (ಚೀಫ್ ಆಫೀಸರ್ ಗ್ರೇಡ್-1), ಪಿ.ಎಲ್.ನಾಗರಾಜು (ಡಿಸ್ಟ್ರಿಕ್ಟ್ ಟ್ರಜರಿ ಆಫೀಸರ್), ಪ್ರಭಾವತಿ ಪಾಂಡುರಂಗ (ಡಿವೈಎಸ್ಪಿ), ರಾಜು ನಾಯಕ (ಅಸಿಸ್ಟೆಂಟ್ ಕಮೀಷನರ್, ಕಮರ್ಷಿಯಲ್ ಟ್ಯಾಕ್ಸ್), ಎಂ.ರಂಗನಾಥ (ಎಸಿ, ಸಿಟಿ), ಬಿ.ಆರ್.ರುದ್ರೇಶ್ (ಎಸಿ,ಸಿಟಿ), ಸವಿತಾ (ಎಸಿ, ರೆವೆನ್ಯೂ), ಶಿವಾನಂದ (ಸಿಟಿಓ), ಉಮೇಶ್ ಹೆಚ್.ಶಿಂಕೇರಿ (ಕಮರ್ಷಿ ಯಲ್ ಟ್ಯಾಕ್ಸ್ ಆಫೀಸರ್) ಹಾಗೂ ಹೆಚ್.ಎನ್.ರವಿ ಕುಮಾರ್ (ಡಿಸ್ಟ್ರಿಕ್ಟ್ ಟ್ರಜರಿ ಆಫೀಸರ್) ಅವರು ಕೆಎಎಸ್ ಅಧಿಕಾರಿಗಳಾಗಿ ಹೊರಹೊಮ್ಮಿರುವವರು.

ಮುಕ್ತ ವಿಶ್ವವಿದ್ಯಾನಿಲಯದಿಂದ ಪಡೆದ ಪದವಿಯು ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯಗಳ ಪದವಿಗಳಿ ಗಿಂತ ಕಡಿಮೆಯಲ್ಲ ಎನ್ನುವುದನ್ನು ಈ 18 ಮಂದಿ ವಿದ್ಯಾರ್ಥಿ ಗಳು ಸಾಬೀತುಪಡಿಸಿದ್ದಾರೆ. ಈ ಸಾಧನೆಯು ಕೆಎಸ್‍ಒಯುಗೆ ಮತ್ತಷ್ಟು ಚೈತನ್ಯ ತಂದಿದೆ ಎಂದು ಕುಲಪತಿಗಳು ತಿಳಿಸಿದ್ದಾರೆ. ಈ 18 ವಿದ್ಯಾರ್ಥಿ ಗಳ ಸಾಧನೆಯು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಲು ಆಸಕ್ತಿ ತೋರುವ ವಿದ್ಯಾರ್ಥಿಗಳಿಗೆ ಪ್ರೇರಣೆ ಯಾಗಿದೆಯಲ್ಲದೆ, ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳ ಪದವಿಗೂ ಮುಕ್ತ ವಿವಿ ಪದವಿಗೂ ವ್ಯತ್ಯಾಸವಿಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದು ಪ್ರೊ. ವಿದ್ಯಾಶಂಕರ ಹೇಳಿದ್ದಾರೆ.

Translate »