ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ: ಪ್ರಧಾನಿ ಮೋದಿಗೆ ಮನವರಿಕೆ ಮಾಡಿ
ಮೈಸೂರು

ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ: ಪ್ರಧಾನಿ ಮೋದಿಗೆ ಮನವರಿಕೆ ಮಾಡಿ

March 1, 2021

ಬೆಂಗಳೂರು,ಫೆ.28-ಅಂತರ ರಾಜ್ಯ ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಮಾಡಿ ರುವ ಅನ್ಯಾಯವನ್ನು ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವರಿಕೆ ಮಾಡ ಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಒತ್ತಾಯಿಸಿದ್ದಾರೆ. ಹೆಚ್ಚು ವರಿ 45 ಟಿಎಂಸಿ ಕಾವೇರಿ ನದಿ ನೀರನ್ನು ಬಳಸಿ ತನ್ನ ಉದ್ದೇಶಿತ ಯೋಜನೆ ಗಳನ್ನು ಮುಂದುವರಿಸುವುದಕ್ಕೆ ತಮಿಳು ನಾಡನ್ನು ನಿಲ್ಲಿಸಿ ಕರ್ನಾಟಕ ಈ ವಿವಾದ ವನ್ನು ಕಾನೂನಾತ್ಮಕವಾಗಿ ಮತ್ತು ರಾಜ ಕೀಯವಾಗಿ ಹೋರಾಟ ನಡೆಸಲು ಮುಂದಾಗಿದೆ. ನಾವು ಸುಪ್ರೀಂ ಕೋರ್ಟ್‍ಗೆ ಹೋಗಿ ಕಾನೂನಾತ್ಮಕವಾಗಿ ಹೋರಾಟ ಮಾಡಬೇಕು ಮತ್ತು ಕರ್ನಾಟಕಕ್ಕೆ ಆಗಿ ರುವ ಅನ್ಯಾಯ ಕುರಿತು ಪ್ರಧಾನಿಗೆ ಸರ್ಕಾರ ಮನವರಿಕೆ ಮಾಡಬೇಕು ಎಂದು ಮಾಧ್ಯಮದ ಜೊತೆ ಮಾತ ನಾಡುತ್ತಾ ಹೇಳಿದ್ದಾರೆ. ತಮಿಳುನಾಡಿನ ಉದ್ದೇಶಿತ ಯೋಜನೆ ಬಗ್ಗೆ ಮಾತ ನಾಡಲು ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋದರೆ ಹೆಚ್ಚು ಪ್ರಯೋಜನವಾಗದು ಎಂದು ಹೇಳಿದ ಅವರು, ಕೇಂದ್ರ ಮತ್ತು ರಾಜ್ಯ ದಲ್ಲಿ ಬಿಜೆಪಿ ಸರ್ಕಾರವಿದೆ, ಹೀಗಾಗಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಮೋದಿಯವರಿಗೆ ಮನದಟ್ಟು ಮಾಡಬೇಕು ಎಂದು ಒತ್ತಾಯಿಸಿದರು.

 

 

Translate »