ಕೊರೊನಾ ಮುಕ್ತ ಗ್ರಾಮವಾಗುವತ್ತ ಕೇರ್ಗಳ್ಳಿ
ಮೈಸೂರು

ಕೊರೊನಾ ಮುಕ್ತ ಗ್ರಾಮವಾಗುವತ್ತ ಕೇರ್ಗಳ್ಳಿ

May 27, 2021

ಮೈಸೂರು, ಮೇ 26(ಎಸ್‍ಪಿಎನ್)- ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ಪರಿಣಾಮ ಕೇರ್ಗಳ್ಳಿ ಕೊರೊನಾ ಮುಕ್ತ ಗ್ರಾಮವಾಗುವತ್ತ ಸಾಗಿದೆ.

ಮೈಸೂರು ತಾಲೂಕು ಬೀರಿಹುಂಡಿ ಗ್ರಾಪಂ ವ್ಯಾಪ್ತಿಯ ಕೇರ್ಗಳ್ಳಿ ಗ್ರಾಮದಲ್ಲಿ ಕಳೆದ ಏಪ್ರಿಲ್‍ನಲ್ಲಿ ಹಲವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಮೇ ತಿಂಗ ಳಲ್ಲಿ ಮೂವರಲ್ಲಿ ಸೋಂಕು ಕಾಣಿಸಿಕೊಂ ಡಿದೆ. ಸೋಂಕಿತರು ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳ ಸಲಹೆಯಂತೆಯೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಇನ್ನು ಕೆಲವರು ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ಆರೋಗ್ಯ ಸಿಬ್ಬಂದಿ ನೀಡಿದ ಮಾತ್ರೆಗಳನ್ನು ಸೇವಿಸಿ ಕೊರೊನಾದಿಂದ ಪಾರಾಗಿದ್ದಾರೆ. 3 ದಿನದ ಹಿಂದೆಯೂ ಒಬ್ಬ ಸೋಂಕಿತ ಇಲ್ಲಿನ ಆರೋಗ್ಯ ಸಿಬ್ಬಂದಿಯ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ ಎಂದು ಗ್ರಾಮದ ನಿವಾಸಿ ಮಹದೇವ್ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

ಹಲವರು ಗುಣಮುಖ: ನಮ್ಮ ಗ್ರಾಮದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ಕೇಂದ್ರದಲ್ಲಿ ಓರ್ವ ವೈದ್ಯರು ಹಾಗೂ ನರ್ಸ್ ಕೆಲಸ ಮಾಡುತ್ತಿದ್ದಾರೆ. ವೈದ್ಯರು ವಾರದಲ್ಲಿ 3 ದಿನ ಬಂದು ರೋಗಿ ಗಳ ತಪಾಸಣೆ ಮಾಡುತ್ತಾರೆ. ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡವರಿಗೆ ನರ್ಸ್ ಮಾತ್ರೆ ನೀಡುತ್ತಿದ್ದಾರೆ. ಇದರಿಂದ ಹಲವು ಜನ ಬೇಗನೇ ಗುಣಮುಖರಾಗಿದ್ದಾರೆ. ಹಾಗಾಗಿ ನಮ್ಮಲ್ಲಿ ಸೋಂಕು ಹೆಚ್ಚಾಗಿ ಬಾಧಿಸಿಲ್ಲ ಎಂದರು.

ಮಾಧ್ಯಮಗಳಲ್ಲಿ ಕೊರೊನಾನಿಂದಾದ ಸಾವು-ನೋವು ಹೆಚ್ಚಳ ಕುರಿತು ನಿರಂತರ ವರದಿ ಪ್ರಸಾರದಿಂದ ಇಲ್ಲಿನ ಜನರು ಗ್ರಾಮಬಿಟ್ಟು ಹೊರಹೋಗಲು ಹೆದರುತ್ತಿ ದ್ದಾರೆ. ಎಲ್ಲರೂ ಕೋವಿಡ್-19 ನಿಯಮ ಗಳನ್ನು ಪಾಲಿಸಿ ಸೋಂಕು ಬರದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ ಎಂದರು. ಈ ಉಪ ಕೇಂದ್ರದ ಕಿಟಕಿ ಗಾಜುಗಳು ಒಡೆದು ಹೋಗಿವೆ. ಕಾಂಪೌಂಡ್ ರಿಪೇರಿಯೂ ಆಗಬೇಕಿದೆ. ಅಲ್ಲದೆ, ಈ ಕಟ್ಟಡದ ಸುಣ್ಣ ಬಣ್ಣ ಕಾಣಲು ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

Translate »