ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದಿಂದ ಹೋಂ ಐಸೋಲೇಷನ್‍ನಲ್ಲಿರುವ ವಕೀಲರಿಗೆ ಔಷಧ ವಿತರಣೆ
ಮೈಸೂರು

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದಿಂದ ಹೋಂ ಐಸೋಲೇಷನ್‍ನಲ್ಲಿರುವ ವಕೀಲರಿಗೆ ಔಷಧ ವಿತರಣೆ

May 27, 2021

ಕೋವಿಡ್ ನಡುವೆ ವಕೀಲರ ಸೇವೆ ಮಹತ್ವದ್ದು; ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್‍ಗೌಡ

ವಕೀಲರನ್ನೂ ಮುಂಚೂಣಿ ಕಾರ್ಯಕರ್ತರೆಂದು ಘೋಷಿಸಬೇಕು

ಮೈಸೂರು,ಮೇ 26(ಪಿಎಂ)- ಕೋವಿಡ್ ಸೋಂಕಿನಿಂದ ಹೋಂ ಐಸೋಲೇಷನ್ ಆಗಿರುವ ವಕೀಲರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಮಾಸ್ಕ್ ಒಳಗೊಂಡಂತೆ 100 ಮಂದಿಗೆ ಆಗುವಷ್ಟು ಔಷಧಗಳನ್ನು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ಮೈಸೂರು ವಕೀಲರ ಸಂಘಕ್ಕೆ ಬುಧವಾರ ನೀಡಲಾಯಿತು.

ಮೈಸೂರಿನ ನ್ಯಾಯಾಲಯದ ಸಂಕೀ ರ್ಣದ ಆವರಣದಲ್ಲಿರುವ ಮೈಸೂರು ವಕೀ ಲರ ಸಂಘದ ಎದುರು ಸಂಘದ ಅಧ್ಯಕ್ಷ ಆನಂದ್‍ಕುಮಾರ್ ಅವರಿಗೆ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್‍ಗೌಡ ಔಷಧ ಗಳನ್ನು ಹಸ್ತಾಂತರ ಮಾಡಿದರು.

ಬಳಿಕ ಮಾತನಾಡಿದ ಹೇಮಂತ್‍ಕುಮಾರ್ ಗೌಡ, ಕೋವಿಡ್ ಸಂದರ್ಭದಲ್ಲೂ ಮುನ್ನೆ ಚ್ಚರಿಕೆ ಹಾಗೂ ಹೈಕೋರ್ಟ್ ಮಾರ್ಗ ಸೂಚಿ ಅನ್ವಯ ಇತಿಮಿತಿಯಲ್ಲಿ ಕೋರ್ಟ್ ಕಾರ್ಯ ಕಲಾಪ ನಡೆಯುತ್ತಿದೆ. ಕೋವಿಡ್ ಸಂದಿಗ್ಧ ಸಂದರ್ಭದಲ್ಲಿ ವಕೀಲ ಸಮು ದಾಯ ಸಾರ್ವಜನಿಕರಿಗೆ ಸೇವೆ ನೀಡುವ ಮೂಲಕ ಸ್ಪಂದಿಸುತ್ತಿದೆ. ವಕೀಲರ ಸಂಘ ದಿಂದ ಯಾವುದೇ ಅಪೇಕ್ಷೆ ಇಲ್ಲವಾ ದರೂ ವಕೀಲರ ಸೇವೆಯ ಮಹತ್ವ ಅರಿತು ಪ್ರಾಧಿಕಾರ ಸ್ವಯಂಪ್ರೇರಿತವಾಗಿ ಔಷಧ ಗಳನ್ನು ನೀಡಿದೆ ಎಂದು ತಿಳಿಸಿದರು.

100 ಮಂದಿಗೆ ಆಗುವಷ್ಟು ಒಂದೊಂದು ಸೆಟ್ ಔಷಧಗಳನ್ನು ಮಾಸ್ಕ್ ಸೇರಿದಂತೆ ನೀಡಲಾಗಿದೆ. ಕೋವಿಡ್ ಸೋಂಕಿನಿಂದ ಹೋಂ ಐಸೋಲೇಷನ್‍ನಲ್ಲಿರುವ ವಕೀಲ ಬಂಧುಗಳಿಗೆ ಅನುಕೂಲವಾಗಲೆಂಬ ಉದ್ದೇಶ ದಿಂದ ಇದನ್ನು ನೀಡಲಾಗಿದೆ. ಜಿಂಕ್ ಮಾತ್ರೆ ಸೇರಿದಂತೆ ಎಲ್ಲಾ ರೀತಿ ಕೋವಿಡ್ ನಿವಾರಣೆಗೆ ಸಂಬಂಧಿಸಿದ ಔಷಧಗಳನ್ನು ನೀಡಲಾಗಿದೆ ಎಂದು ಹೇಳಿದರು.

ಮೈಸೂರು ವಕೀಲರ ಸಂಘದ ಅಧ್ಯಕ್ಷ ಆನಂದ್‍ಕುಮಾರ್ ಮಾತನಾಡಿ, ಮೈಸೂರು ವಕೀಲರ ಸಂಘಕ್ಕೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್‍ಗೌಡ ಅವರು ಸ್ವಯಂ ಪ್ರೇರಿತ ವಾಗಿ ಸೋಂಕಿನಿಂದ ಮನೆಯಲ್ಲಿ ಐಸೋ ಲೇಷನ್ ಆಗಿರುವ ವಕೀಲರಿಗೆ ಅನು ಕೂಲವಾಗಲೆಂಬ ಉದ್ದೇಶದಿಂದ ಔಷಧ ಮತ್ತು ಮಾಸ್ಕ್‍ಗಳನ್ನು ಕೊಟ್ಟಿದ್ದು, ಇದ ಕ್ಕಾಗಿ ಅವರಿಗೆ ಸಂಘದ ವತಿಯಿಂದ ಧನ್ಯ ವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಕೋವಿಡ್ ಸೋಂಕಿನ ನಡುವೆ ವಕೀ ಲರು ಸಹ ಸಾರ್ವಜನಿಕರು, ಕಕ್ಷಿದಾರರ ಜೊತೆಯಲ್ಲಿ ನೇರ ಸಂಪರ್ಕದಲ್ಲಿ ಇದ್ದಾರೆ. ಈ ಹಿನ್ನೆಲೆಯಲ್ಲಿ ವಕೀಲರನ್ನೂ ಕೋವಿಡ್ ಮುಂಚೂಣಿ ಕಾರ್ಯಕರ್ತ ರೆಂದು ಸರ್ಕಾರ ಗುರುತಿಸಬೇಕು. ಆ ಮೂಲಕ ಅವರಿಗೂ ಪ್ರಥಮ ಆದ್ಯತೆ ಮೇರೆಗೆ ಲಸಿಕೆ ನೀಡುವುದೂ ಸೇರಿದಂತೆ ಸಕಲ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದರು.

ವಕೀಲರ ಸಂಘದ ಕಾರ್ಯದರ್ಶಿ ಬಿ.ಶಿವಣ್ಣ ಮಾತನಾಡಿ, ವಕೀಲರನ್ನು ಕೋವಿಡ್ ಮುಂಚೂಣಿ ಕಾರ್ಯ ಕರ್ತರು ಎಂದು ಗುರುತಿಸುವ ಜೊತೆಗೆ ಸೋಂಕಿನಿಂದ ಮೃತಪಟ್ಟ ವಕೀಲರ ಕುಟುಂಬಗಳಿಗೆ ತಲಾ 30 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ದರು. ಮೈಸೂರು ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಸಿ.ಕೆ.ರುದ್ರಮೂರ್ತಿ, ಹಿರಿಯ ವಕೀಲ ಶೇಷಗಿರಿರಾವ್, ವಕೀಲ ರಾದ ಉಮೇಶ್, ಗೋಕುಲ್ ಗೋವರ್ಧನ್, ಫಣಿಚೇತನ್ ಮತ್ತಿತರರು ಹಾಜರಿದ್ದರು.

 

Translate »