ಭಾರತದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಕೆಜಿಎಫ್-2, ಕಬ್ಜ
ಸಿನಿಮಾ

ಭಾರತದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಕೆಜಿಎಫ್-2, ಕಬ್ಜ

June 19, 2020

ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಒಂದು ಹೊಸ ದಾಖಲೆಯನ್ನೇ ಮಾಡಿತ್ತು. ಆ ಚಿತ್ರದ ನಂತರ ಅದೇ ರೀತಿ ಸದ್ದು ಮಾಡುತ್ತಿರುವ ಮತ್ತೊಂದು ಚಿತ್ರ ಎಂದರೆ ಸೂಪರ್‍ಸ್ಟಾರ್ ಉಪೇಂದ್ರ ಅಭಿನಯದ `ಕಬ್ಜ’. ಆರ್.ಚಂದ್ರು ನಿರ್ದೇಶನದ ಈ ಚಿತ್ರ ಭಾರತದ ಅತಿನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಗಿಟ್ಟಿಸಿದೆ. ಒಂದಷ್ಟು ಮಾಧ್ಯಮಗಳು ಸೇರಿ ನಡೆಸಿದ ಟಾಪ್ 10 ಭಾರತದ ಮೋಸ್ಟ್ ಎಕ್ಸ್‍ಪೆಕ್ಟೆಡ್ ಸಿನಿಮಾಗಳು ಎಂಬ ಸಮೀಕ್ಷೆಯಲ್ಲಿ ಕೆಜಿಎಫ್-2 ಚಿತ್ರ ಎರಡನೇ ಸ್ಥಾನದಲ್ಲಿದ್ದರೆ, ಉಪೇಂದ್ರ ಅಭಿನಯದ ಕಬ್ಜ ಚಿತ್ರ ಮೂರನೇ ಸ್ಥಾನದಲ್ಲಿದೆ. ನಂತರದ ಸಾಲಿನಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂನ ಬಿಗ್ ಸ್ಟಾರ್ ಸಿನಿಮಾಗಳಿವೆ. ರಾಷ್ಟ್ರ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ ಎರಡು ಚಿತ್ರಗಳು ಸ್ಥಾನ ಪಡೆದಿರುವುದು ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಒಂದು ಹೆಮ್ಮೆಯ ವಿಷಯವೇ ಸರಿ. ನಟ ಉಪೇಂದ್ರ 20 ವರ್ಷಗಳ ಹಿಂದೆಯೇ ಭಾರತೀಯ ಚಿತ್ರರಂಗವೇ ನಮ್ಮತ್ತ ತಿರುಗಿ ನೋಡುವಂತೆ `ಒಂ’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇತ್ತೀಚೆಗಷ್ಟೇ ಸಿಲ್ವರ್ ಜೂಬಿಲಿ ಆಚರಿಸಿಕೊಂಡ ಆ ಚಿತ್ರವನ್ನು ಜನ ಈಗಲೂ ನೋಡುತ್ತಲೇ ಇದ್ದಾರೆ. ಅದೇರೀತಿ ಇನ್ನು ಮುಂದಿನ 25 ವರ್ಷಗಳ ಕಾಲ ಕನ್ನಡಿಗರು ನೆನಪಿನಲ್ಲಿಟ್ಟುಕೊಳ್ಳುವಂಥ ಸಿನಿಮಾವಾಗಿ `ಕಬ್ಜ’ ಹೊರಹೊಮ್ಮಲಿದೆ ಎಂದು ನಟ ಉಪೇಂದ್ರ ಅವರೇ ಆತ್ಮವಿಶ್ವಾಸದಿಂದ ಹೇಳಿಕೊಂಡಿz್ದÁರೆ. ಸರ್ಕಾರ ಈಗಾಗಲೇ ಬಾಕಿ ಉಳಿದಿರುವ ಚಿತ್ರೀಕರಣ ಮುಗಿಸಿಕೊಳ್ಳಲು ಅನುಮತಿ ನೀಡಿದೆ. ನಿರ್ದೇಶಕ ಚಂದ್ರು ಅವರು ಬೆಂಗಳೂರು ಹಾಗೂ ಹೈದರಾಬಾದಿನಲ್ಲಿ ವೈಭವಪೂರಿತ ಸೆಟ್‍ಗಳಲ್ಲಿ ಚಿತ್ರದ ಚಿತ್ರೀಕರಣವನ್ನು ಮುಂದುವರೆಸಲು ಸಜ್ಜಾಗಿದ್ದಾರೆ. ಆದರೆ ಸರ್ಕಾರದ ಕಂಡೀಷನ್‍ಗಳ ಪ್ರಕಾರ ಶೂಟಿಂಗ್ ನಡೆಸಲು ಸಾಧ್ಯವೇ ಇಲ್ಲ ಎನ್ನುವುದು ಸ್ಟಾರ್ ಚಿತ್ರಗಳ ನಿರ್ದೇಶಕರ ಅಭಿಪ್ರಾಯ. ಆರ್.ಚಂದ್ರು ಅವರು ಕೆಜಿಎಫ್ ರೀತಿಯಲ್ಲೇ ಕಬ್ಜ ಚಿತ್ರದ ಮೇಲೆ ಪ್ರೇP್ಷÀಕರಿಗೆ ಭರವಸೆಯನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿz್ದÁರೆ. `ಕಬ್ಜ’ ಚಿತ್ರದ ಟ್ರೈಲರ್ ಹಾಗೂ ಶೋ ರೀಲ್ ಅನ್ನು ನೋಡಿದ ತೆಲುಗು ಹಾಗೂ ಹಿಂದಿ ಚಿತ್ರರಂಗದ ದೊಡ್ಡ ನಿರ್ಮಾಪಕರುಗಳು ಸಹ ಉಪೇಂದ್ರ ಹಾಗೂ ಆರ್.ಚಂದ್ರು ಅವರ ಮೇಕಿಂಗ್ ಸ್ಟೈಲನ್ನು ಮೆಚ್ಚಿಕೊಂಡಿz್ದÁರೆ. ಕೊರೊನಾ ದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕನ್ನಡ ಚಿತ್ರೋದ್ಯಮ ಉಳಿಯಬೇಕಾದರೆ ಮತ್ತು ಕಬ್ಜ, ಕೆಜಿಎಫ್ ಮತ್ತು ರಾಬರ್ಟ್‍ನಂತಹ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗು ತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಗಳ ಅವಶ್ಯಕತೆ ಇದೆ ಎಂದು ಸ್ವತಃ ಉಪೇಂದ್ರ ಅವರೇ ಹೇಳಿz್ದÁರೆ.

Translate »