ಮೈಸೂರಲ್ಲಿ ಸರ ಅಪಹರಣ
ಮೈಸೂರು

ಮೈಸೂರಲ್ಲಿ ಸರ ಅಪಹರಣ

June 1, 2022

ಮೈಸೂರು, ಮೇ 31(ಎಸ್‍ಬಿಡಿ)- ವಾಯುವಿಹಾರದಲ್ಲಿದ್ದ ವೃದ್ಧೆಯೊಬ್ಬರ ಚಿನ್ನದ ಸರ ಕಸಿಯಲು ದುಷ್ಕರ್ಮಿಗಳು ಯತ್ನಿಸಿ, ಸರದ ಒಂದು ತುಂಡಿನೊಂದಿಗೆ ಪರಾರಿಯಾಗಿರುವ ಘಟನೆ ಮೈಸೂ ರಿನ ವಿಜಯನಗರದಲ್ಲಿ ಮಂಗಳ ವಾರ ಸಂಜೆ ನಡೆದಿದೆ.

ವಿಜಯನಗರ 4ನೇ ಹಂತ, 2ನೇ ಫೇಸ್ ನಿವಾಸಿ ಶಶಿಕಲಾ(56) ಅವರು ಸಮಯ ಪ್ರಜ್ಞೆಯಿಂದ ಚಿನ್ನದ ಸರದ ಬಹುತೇಕ ಭಾಗವನ್ನು ಉಳಿಸಿಕೊಂಡಿದ್ದು, ಸುಮಾರು 10 ಗ್ರಾಂ. ತುಂಡು ಕಳ್ಳರ ಪಾಲಾಗಿದೆ.

ಶಶಿಕಲಾ ಅವರು ಇಂದು ಸಂಜೆ 5.15ರ ಸಮಯದಲ್ಲಿ ರಸ್ತೆ ಬದಿ ಯಲ್ಲಿ ವಾಯುವಿಹಾರದಲ್ಲಿದ್ದಾಗ ಹಿಂದಿನಿಂದ ಪಲ್ಸರ್ ಬೈಕ್‍ನಲ್ಲಿ ಬಂದ ಇಬ್ಬರು ಖದೀಮರು, ಏಕಾ ಏಕಿ ಸರ ಕಿತ್ತುಕೊಳ್ಳಲು ಯತ್ನಿಸಿ ದ್ದಾರೆ. ಆ ವೇಳೆ ಸಮಯಪ್ರಜ್ಞೆಯಿಂದ ಶಶಿಕಲಾ ಅವರು, ಸರವನ್ನು ಬಿಗಿಯಾಗಿ ಹಿಡಿದುಕೊಂಡು ಕೂಗಿಕೊಂಡಿದ್ದಾರೆ. ಇದರಿಂದ ಗಾಬರಿಯಾದ ಖದೀಮರು ಕೈಗೆ ಸಿಕ್ಕ ಸರದ ತುಂಡಿನೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾರೆ.
ಮಾಸ್ಕ್ ಧರಿಸಿದ್ದರು: ದುಷ್ಕರ್ಮಿಗಳ ಚಲನವಲನದ ದೃಶ್ಯ ಆ ರಸ್ತೆಯ ಮನೆಯೊಂ ದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೈಕ್ ಓಡಿಸುತ್ತಿದ್ದವನು ಕಪ್ಪು ಬಣ್ಣದ ಶರ್ಟ್ ಹಾಗೂ ಹಿಂಭಾಗದಲ್ಲಿ ಕುಳಿತಿದ್ದ ಖದೀಮ ಕೆಂಪು ಬಣ್ಣದ ಟಿ-ಶರ್ಟ್ ಧರಿಸಿದ್ದಾರೆ. ಇಬ್ಬರೂ ಕಣ್ಣಿನವರೆಗೂ ಮುಚ್ಚುವಂತಹ ದೊಡ್ಡದಾದ ಮಾಸ್ಕ್ ಹಾಕಿದ್ದಾರೆ.

ತೀವ್ರ ಶೋಧ: ವಿಜಯನಗರ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ರವಿಶಂಕರ್, ಸಬ್‍ಇನ್‍ಸ್ಪೆಕ್ಟರ್‍ಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಖದೀಮರಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಸರ ಕಳ್ಳತನಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರೂ ರೌಂಡ್ಸ್ ಮಾಡಿದರು. ಡಿಸಿಪಿ, ಎಸಿಪಿ ಸೇರಿದಂತೆ ಅನೇಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಸ್ತು ನಡೆಸಿದರು. ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯ ಹಾಗೂ ಸ್ಥಳೀಯರ ಮಾಹಿತಿ ಆಧರಿಸಿ ಖದೀಮರ ಸೆರೆಗೆ ತೀವ್ರ ಶೋಧ ಮುಂದು ವರೆಸಲಾಗಿದೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »