ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರುಪೇರಿನಿಂದ ನಷ್ಟ ಮೈಸೂರಲ್ಲಿ ಪೆಟ್ರೋಲ್ ಬಂಕ್ ಮಾಲೀಕರ ಪ್ರತಿಭಟನೆ
ಮೈಸೂರು

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರುಪೇರಿನಿಂದ ನಷ್ಟ ಮೈಸೂರಲ್ಲಿ ಪೆಟ್ರೋಲ್ ಬಂಕ್ ಮಾಲೀಕರ ಪ್ರತಿಭಟನೆ

June 1, 2022

ಮೈಸೂರು, ಮೇ 31(ಆರ್‍ಕೆ)- ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರು ಪೇರಾದಾಗ ಸಂಭವಿಸುವ ನಷ್ಟವನ್ನು ತಮಗೆ ವರ್ಗಾಯಿಸಲಾಗುತ್ತಿದೆ ಎಂದು ಆರೋಪಿಸಿ ತೈಲ ಕಂಪನಿಗಳ ವಿರುದ್ಧ ಪೆಟ್ರೋಲ್ ಬಂಕ್ ಮಾಲೀಕರು ಇಂದು ಪ್ರತಿಭಟನಾ ಧರಣಿ ನಡೆಸಿದರು.

ಫೆಡರೇಷನ್ ಆಫ್ ಮೈಸೂರು ಪೆಟ್ರೋ ಲಿಯಂ ಟ್ರೇಡರ್ಸ್(ಈಒPಖಿ) ಹಾಗೂ ಅಖಿಲ ಕರ್ನಾಟಕ ಪೆಟ್ರೋಲಿಯಂ ಟ್ರೇಡರ್ಸ್(ಂಏಈPಖಿ) ಆಶ್ರಯದಲ್ಲಿ ಮೈಸೂ ರಿನ ಬಿಎಂಶ್ರೀ ನಗರದಲ್ಲಿರುವ ಇಂಡಿ ಯನ್ ಆಯಿಲ್ ಕಾರ್ಪೊರೇಷನ್ (Iಔಅ) ಎದುರು 150ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ ಮಾಲೀಕರು ಧರಣಿ ನಡೆಸಿದರು.

ತೈಲ ಬೆಲೆ ಕಡಿಮೆಯಾದಾಗ ಬಲ ವಂತವಾಗಿ ಸಾಲ ಸೌಲಭ್ಯದೊಂದಿಗೆ ಪೆಟ್ರೋಲ್, ಡೀಸೆಲ್ ಸರಬರಾಜು ಮಾಡುವ ಇಂಡಿಯನ್ ಆಯಿಲ್ ಕಾರ್ಪೊ ರೇಷನ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೊ ರೇಷನ್ ಲಿಮಿಟೆಡ್ ಕಂಪನಿಗಳು ಅದ ರಿಂದ ಉಂಟಾಗುವ ನಷ್ಟವನ್ನು ತಮಗೆ ವರ್ಗಾಯಿಸುತ್ತವೆ. ಆದರೆ ಬೆಲೆ ಏರಿಕೆ ಸಂದರ್ಭದಲ್ಲಿ ನಾವೇ ಒತ್ತಾಯಿಸಿದರೂ ಸ್ಟಾಕ್ ಕೊಡದೇ, ಅದರ ಲಾಭವನ್ನೂ ತಾವೇ ಪಡೆಯುತ್ತವೆ ಎಂದು ಪ್ರತಿಭಟ ನಾಕಾರರು ಆರೋಪಿಸುತ್ತಿದ್ದರು.

ಇದೀಗ ಲೀಟರ್‍ಗೆ 10 ರೂ. ಕಡಿಮೆ ಯಾಗಿರುವುದರಿಂದ ಬೇಡವೆಂದರೂ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಕಳುಹಿ ಸಿದ್ದಾರೆ. ಕಂಪನಿಗಳ ಈ ವರ್ತನೆಯಿಂದ ಒಂದೊಂದು ಪೆಟ್ರೋಲ್ ಬಂಕ್ ಮಾಲೀಕರು 10ರಿಂದ 15 ಲಕ್ಷ ರೂ. ನಷ್ಟ ಅನುಭವಿಸುವಂತಾಗಿರುವುದರಿಂದ ತಾವು ಇಂದು ಪೆಟ್ರೋಲ್, ಡೀಸೆಲ್ ಖರೀ ದಿಸದೇ (ಓಔ Puಡಿಛಿhಚಿse) ಒಂದು ದಿನ ದೇಶಾದ್ಯಂತ ಪ್ರತಿಭಟನಾ ಧರಣಿ ನಡೆಸುತ್ತಿರುವುದಾಗಿ ತಿಳಿಸಿದರು.

ಆದರೆ ಎಲ್ಲಾ ಬಂಕ್‍ಗಳಲ್ಲೂ ಪೆಟ್ರೋಲ್, ಡೀಸೆಲ್ 3 ದಿನಕ್ಕಾಗುವಷ್ಟು ದಾಸ್ತಾನಿರು ವುದರಿಂದ ಸಾರ್ವಜನಿಕರು ಆತಂಕ ಪಡ ಬೇಕಾಗಿಲ್ಲ ಎಂದು ಫೆಡರೇಷನ್ ಆಫ್ ಮೈಸೂರು ಪೆಟ್ರೋಲಿಯಂ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷೆ ಶಶಿಕಲಾ ತಿಳಿಸಿದ್ದಾರೆ.

ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿರುವ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಪ್ರಧಾನ ಕಾರ್ಯದರ್ಶಿ ರಂಜಿತ್ ಹೆಗ್ಡೆ, ಇತ್ತೀಚೆಗೆ ಇಂಧನ ಬೆಲೆ ಇಳಿಕೆಯಾದಾಗ ಪೆಟ್ರೋಲ್ ಬಂಕ್ ಮಾಲೀಕರು ತೀವ್ರ ನಷ್ಟ ಅನು ಭವಿಸಿದ್ದಾರೆ ಎಂದರು.

110 ರೂ.ಗೆ ಮಾರಾಟ ಮಾಡುತ್ತಿದ್ದ ಲೀಟರ್ ಪೆಟ್ರೋಲ್ ಬೆಲೆ ಇದ್ದಕ್ಕಿದ್ದಂ ತೆಯೇ 101 ರೂ.ಗಳಿಗಿಳಿದು 9 ರೂ. ನಷ್ಟವಾಯಿತು. 20,000 ಲೀಟರ್ ಖರೀ ದಿಸಿದ್ದ ಮಾಲೀಕರಿಗೆ 1,80,000 ರೂ. ನಷ್ಟವಾಯಿತು. ಅದೇ ರೀತಿ 94 ರೂ. ನಿಂದ ಡಿಸೆಲ್ ದರ 87 ರೂ.ಗೆ ಇಳಿದಾಗ 20,000 ಲೀಟರ್‍ಗೆ 1.40, 000 ರೂ. ನಷ್ಟ ಉಂಟಾಯಿತು ಎಂದು ನುಡಿದರು.

ಅಖಿಲ ಕರ್ನಾಟಕ ಫೇಡರೇಷನ್ ಆಫ್ ಪೆಟ್ರೋಲ್ ಡೀಲರ್ಸ್ ಅಧ್ಯಕ್ಷ ಬಸವೇ ಗೌಡ, ಎಸ್.ಆರ್.ಪಾಟೀಲ್, ಮಲ್ಲೇಶ, ಲೋಕೇಶ ಸೇರಿದಂತೆ ಹಲವರು ಪ್ರತಿ ಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದರು. ರಾಜ್ಯಾದ್ಯಂತ ಹಾಗೂ ದೇಶದ ವಿವಿಧ ರಾಜ್ಯಗಳಲ್ಲೂ ಆಯಿಲ್ ಕಾರ್ಪೋ ರೇಷನ್‍ಗಳೆದುರು ಇಂದು ಪೆಟ್ರೋಲ್ ಬಂಕ್ ಮಾಲೀಕರು ಇಂದು ತೈಲ ಖರೀ ದಿಸದೇ ಪ್ರತಿಭಟನಾ ಧರಣಿ ನಡೆಸಿದರು.

Translate »