ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ಹಿನ್ನೆಲೆ ಸಂಸದ, ಮುಡಾ ಅಧ್ಯಕ್ಷರಿಂದ ಪರಿಶೀಲನೆ
ಮೈಸೂರು

ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ಹಿನ್ನೆಲೆ ಸಂಸದ, ಮುಡಾ ಅಧ್ಯಕ್ಷರಿಂದ ಪರಿಶೀಲನೆ

June 1, 2022

ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂ ರಿಗೆ ಆಗಮಿಸುತ್ತಿರುವುದು ಸಂತಸದ ವಿಷಯ. ಅದರಲ್ಲೂ ಅರಮನೆಯಲ್ಲೇ ಯೋಗ ಪ್ರದರ್ಶನ ಆಯೋಜಿಸಿರು ವುದು ಒಳ್ಳೆಯ ಸುಸಂದರ್ಭ. ಯುವ ಕರು ಯೋಗಾಭ್ಯಾಸ ಮಾಡಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು.
-ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಮೈಸೂರು, ಮೇ 31(ಆರ್‍ಕೆ)- ಜೂನ್ 21ರಂದು ಮೈಸೂರಲ್ಲಿ ನಡೆಯುವ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿ ರುವ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್‍ಸಿಂಹ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಅರಮನೆ ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಮೈಸೂರು ಮಹಾನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಸೂಪರಿಂಟೆಂಡೆಂಟ್ ಇಂಜಿನಿಯರ್ ಮಹೇಶ್, ಆಯುಷ್ ಇಲಾಖೆ ಅಧಿಕಾರಿಗಳೊಂದಿಗೆ ಮೈಸೂರು ಅರಮನೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸುವ ಕುರಿತು ಸಂಸದ ಪ್ರತಾಪ್ ಸಿಂಹ ಸ್ಥಳ ಪರಿಶೀಲಿಸಿದರು.

ಈ ಸಂದರ್ಭ ‘ಮೈಸೂರು ಮಿತ್ರ’ ನೊಂ ದಿಗೆ ಮಾತನಾಡಿದ ಪ್ರತಾಪ್ ಸಿಂಹ, ಮೈಸೂರಿನ ಅರಮನೆ ಆವರಣದಲ್ಲಿ ನಡೆ ಯುವ ಸಾಮೂಹಿಕ ಯೋಗ ಪ್ರದರ್ಶನ ದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗ ವಹಿಸುತ್ತಿರುವುದರಿಂದ ವೇದಿಕೆ ಸಿದ್ಧಪಡಿ ಸುವುದು, ಯೋಗ ಮ್ಯಾಟ್, ಧ್ವನಿ ವರ್ಧಕ ಸೇರಿದಂತೆ ಎಲ್ಲಾ ಸಿದ್ಧತಾ ಕಾರ್ಯ ಗಳನ್ನೂ ಕೇಂದ್ರ ಸರ್ಕಾರವೇ ನಿರ್ವಹಿ ಸುತ್ತದೆ. ರಾಜ್ಯ ಸರ್ಕಾರದ್ದು ಕೇವಲ ಪೋಷಕ ಪಾತ್ರವಷ್ಟೆ ಎಂದರು.

ಕಾರ್ಯಕ್ರಮಕ್ಕೆ ಜಿಲ್ಲಾಡಳಿತ, ಪಾಲಿಕೆ ಹಾಗೂ ರಾಜ್ಯ ಸರ್ಕಾರವು ಸಹಕಾರ ನೀಡ ಲಿದೆಯಷ್ಟೆ. ಅದನ್ನು ಹೊರತುಪಡಿಸಿ ಅರ ಮನೆ ಹೊರಗೆ, ಫುಟ್‍ಪಾತ್, ರಸ್ತೆ, ಕಲ್ಲಿನ ಬ್ಯಾರಿಕೇಡ್, ರಾಜಮಾರ್ಗ ಹಾಗೂ ಪ್ರಧಾನ ಮಂತ್ರಿಗಳು ಸಾಗುವ ರಸ್ತೆಗಳ ರಿಪೇರಿ ಕಾಮ ಗಾರಿಗಳನ್ನು ರಾಜ್ಯ ಸರ್ಕಾರದ ಅನು ದಾನ ದಲ್ಲಿ ಕೈಗೊಳ್ಳಬೇಕಿರುವುದರಿಂದ ತಾವು ಶೀಘ್ರ ಸಿಎಂ ಭೇಟಿ ಮಾಡಿ ಅನುದಾನ ಬಿಡು ಗಡೆ ಮಾಡುವಂತೆ ಕೋರುತ್ತೇನೆ ಎಂದರು.

ಈಗಾಗಲೇ ರಿಂಗ್ ರಸ್ತೆ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಅದೇ ರೀತಿ ನಂಜನ ಗೂಡು ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆ, ಗದ್ದಿಗೆ ರಸ್ತೆ ಹಾಗೂ ಹುಣಸೂರು ರಸ್ತೆಗಳ ರಿಪೇರಿ ಮಾಡಲು ಚುನಾವಣಾ ನೀತಿ ಸಂಹಿತೆಯಿಂದ ವಿನಾಯಿತಿ ನೀಡುವಂತೆ ಪಾಲಿಕೆಯಿಂದ ಸರ್ಕಾರಕ್ಕೆ ಪತ್ರ ಮುಖೇನ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಅರಮನೆ ಸುತ್ತಲಿನ ರಸ್ತೆ, ಫುಟ್‍ಪಾತ್ ರಿಪೇರಿ, ಪ್ರಮುಖ ರಸ್ತೆಗಳ ಕಾಮಗಾರಿಗೆ ಟೆಂಡರ್ ಕರೆಯಬೇಕಾಗಿರುವುದರಿಂದ ಸರ್ಕಾರದ ಅನುಮತಿಗಾಗಿ ಪತ್ರ ಬರೆಯ ಲಾಗಿದೆ. ಚುನಾವಣಾ ನೀತಿ ಸಂಹಿತೆಯಿಂದ ವಿನಾಯಿತಿ ಸಿಗುತ್ತಿದ್ದಂತೆಯೇ ಪ್ರಕ್ರಿಯೆ ಆರಂಭಿಸುವುದಾಗಿ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ ತಿಳಿಸಿದ್ದಾರೆ.

Translate »