ಕೊಡವ ಸಮಾಜದಿಂದ ಕಾರ್ಯಪ್ಪ ಪುತ್ಥಳಿಗೆ ಗೌರವ
ಮೈಸೂರು

ಕೊಡವ ಸಮಾಜದಿಂದ ಕಾರ್ಯಪ್ಪ ಪುತ್ಥಳಿಗೆ ಗೌರವ

January 29, 2021

ಮೈಸೂರು, ಜ.28(ಆರ್‍ಕೆಬಿ)-ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 122ನೇ ಜನ್ಮದಿನಾಚರಣೆ ಅಂಗವಾಗಿ ಮೈಸೂರಿನ ಕೊಡವ ಸಮಾಜ ಮತ್ತು ವಿಜಯನಗರದ ಕೊಡವ ಸಮಾಜ ಸ್ಪೋಟ್ರ್ಸ್ ಕ್ಲಬ್ ವತಿ ಯಿಂದ ಮೈಸೂರಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ (ಮೆಟ್ರೊ ಪೋಲ್ ವೃತ್ತ) ಅವರ ಪುತ್ಥಳಿಗೆ ಮಾಲಾ ರ್ಪಣೆ ಮಾಡಿ, ಗೌರವ ಸಲ್ಲಿಸಲಾಯಿತು. ಕೊಡವ ಸಮಾಜದ ಅಧ್ಯಕ್ಷ ಕೆ.ಎಂ.ಬೆಳ್ಳಿ ಯಪ್ಪ ಅವರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿ ಕೆ.ಎಂ. ಕಾರ್ಯಪ್ಪನವರ ದೇಶಭಕ್ತಿ ಮತ್ತು ಸೇವೆ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಎಂ.ಯು.ಸುಬ್ಬಯ್ಯ, ಉಪಾ ಧ್ಯಕ್ಷ ಎಂ.ಎಂ.ಪೊನ್ನಪ್ಪ, ಕಾರ್ಯದರ್ಶಿ ಎಂ.ಎಂ.ಪೊನ್ನಪ್ಪ, ಖಜಾಂಚಿ ಎಂ.ಡಿ.ಜೀವನ್, ಜಂಟಿ ಕಾರ್ಯದರ್ಶಿ ವಿಮಲಾ ಪೂಣಚ್ಚ, ಕೊಡವ ಸಮಾಜ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಎಂ.ಪಿ.ನಾಣಯ್ಯ, ಉಪಾಧ್ಯಕ್ಷ ಕೆ.ಡಿ.ಮುತ್ತಪ್ಪ, ಸಂಸ್ಥಾಪಕ ನಾಯಕಂಡ ತಿಮ್ಮಯ್ಯ, ಪ್ರವೀಣ್ ಚಂಗಪ್ಪ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಕೆ.ಎ.ಗೀತಾ ಇನ್ನಿತರರು ಉಪಸ್ಥಿತರಿದ್ದರು.

 

 

Translate »