ಶಾರ್ಟ್ ಸಕ್ರ್ಯೂಟ್: 50ಕ್ಕೂ   ಹೆಚ್ಚು ಬೌನ್ಸ್ ಸ್ಕೂಟರ್ ಭಸ್ಮ  
ಹಾಸನ

ಶಾರ್ಟ್ ಸಕ್ರ್ಯೂಟ್: 50ಕ್ಕೂ  ಹೆಚ್ಚು ಬೌನ್ಸ್ ಸ್ಕೂಟರ್ ಭಸ್ಮ  

January 29, 2021

ಹಾಸನ, ಜ.28- ಶಾರ್ಟ್ ಸಕ್ರ್ಯೂಟ್ ಸಂಭವಿಸಿ, ಬೌನ್ಸ್ ಸ್ಕೂಟರ್ ನಿಲ್ಲಿಸಿದ್ದ ಕಟ್ಟಡಕ್ಕೆ ಬೆಂಕಿ ಬಿದ್ದ ಪರಿಣಾಮ ಸುಮಾರು 50ಕ್ಕೂ ಹೆಚ್ಚು ಸ್ಕೂಟರ್‍ಗಳು ಭಸ್ಮ ವಾಗಿರುವ ಘಟನೆ ನಗರದ ರಿಂಗ್ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಇಂದು ಬೆಳಗ್ಗೆ ಕಟ್ಟಡದಲ್ಲಿ ಸ್ಕೂಟರ್‍ಗಳನ್ನು ನಿಲ್ಲಿಸಿದ್ದ ಮಳಿಗೆ ಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಗ್ನಿ ಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಬೆಂಕಿ ತೀವ್ರ ವಾಗಿ ವ್ಯಾಪಿಸಿ, ಕಟ್ಟಡದ ಒಳಗಿದ್ದ ಸ್ಕೂಟರ್‍ಗಳು ಸಂಪೂರ್ಣ ಬೆಂಕಿಗಾಹುತಿ ಯಾಗಿವೆ. ಜೊತೆಗೆ ಬ್ಯಾಟರಿಗಳು ಸಹ ಸ್ಫೋಟಗೊಂಡಿವೆ. ಸ್ಥಳೀಯರು ಕಟ್ಟಡದ ಹೊರಗೆ ನಿಲ್ಲಿಸಿದ್ದ ಸ್ಕೂಟರ್‍ಗಳನ್ನು ಹಾನಿಯಾಗದಂತೆ ದೂರ ನಿಲ್ಲಿಸಿ ಮಾನವೀಯತೆ ಮೆರೆದರು.

ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಅಲ್ಲದೇ ಇದೇ ಕಟ್ಟಡದಲ್ಲಿನ 3 ಮಳಿಗೆಗಳಲ್ಲಿದ್ದ ವಸ್ತುಗಳನ್ನು ಬೇರೆಡೆಗೆ ಸಾಗಿಸಲಾಯಿತು. ಬೆಂಕಿ ರಭಸಕ್ಕೆ ಕಟ್ಟಡ ಬಿರುಕು ಬಿಟ್ಟಿದ್ದು, ಕುಸಿದು ಬೀಳುವ ಆತಂಕ ಎದುರಾಗಿದೆ.

ಬೌನ್ಸ್ ಸ್ಕೂಟರ್‍ಗಳನ್ನು ನಿಲ್ಲಿಸಿದ್ದ ಕೆಳಮಹಡಿಯಲ್ಲಿ ಟೆಕ್ನಿಷಿಯನ್ ಕೆಲಸ ಮಾಡುತ್ತಿದ್ದ. ಈ ವೇಳೆ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಆತ ಹೊರಗೆ ಓಡಿ ಬಂದಿದ್ದಾನೆ. ನಂತರ ಎಲ್ಲಾ ಸ್ಕೂಟರ್‍ಗಳಿಗೂ ಬೆಂಕಿ ವ್ಯಾಪಿಸಿ ಸುಟ್ಟು ಹೋಗಿವೆ. ಈ ಘಟನೆಯಿಂದ ಅಂದಾಜು 15 ಲಕ್ಷಕ್ಕೂ ಹೆಚ್ಚು ನಷ್ವವಾಗಿದೆ ಎಂದು ಮಾಲೀಕ ಜಗದೀಶ್ ತಿಳಿಸಿದ್ದಾರೆ. ಈ ಸಂಬಂಧ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.

 

 

 

Translate »