ಜೆಡಿಎಸ್, ಬಿಜೆಪಿ ಮೈತ್ರಿಗೆ ಪಿಎಲ್‍ಡಿ ಬ್ಯಾಂಕ್ ಅಧಿಕಾರ ಅಧ್ಯಕ್ಷರಾಗಿ ದಾಸೇಗೌಡ, ಉಪಾಧ್ಯಕ್ಷರಾಗಿ ಪುಟ್ಟರಾಜು ಆಯ್ಕೆ
ಮೈಸೂರು

ಜೆಡಿಎಸ್, ಬಿಜೆಪಿ ಮೈತ್ರಿಗೆ ಪಿಎಲ್‍ಡಿ ಬ್ಯಾಂಕ್ ಅಧಿಕಾರ ಅಧ್ಯಕ್ಷರಾಗಿ ದಾಸೇಗೌಡ, ಉಪಾಧ್ಯಕ್ಷರಾಗಿ ಪುಟ್ಟರಾಜು ಆಯ್ಕೆ

January 29, 2021

ಹೆಚ್.ಡಿ.ಕೋಟೆ, ಜ.28 (ಮಂಜು)- ತಾಲೂಕಿನ ಪಿಎಲ್‍ಡಿ ಬ್ಯಾಂಕ್ ಅಧಿಕಾರ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಗೆ ಒಲಿದಿದ್ದು, ಅಧ್ಯಕ್ಷರಾಗಿ ಜೆಡಿಎಸ್‍ನ ಚಿಕ್ಕಕೆರೆಯೂರು ದಾಸೇಗೌಡ, ಉಪಾಧ್ಯಕ್ಷರಾಗಿ ಬಿಜೆಪಿಯ ಜಕ್ಕಳ್ಳಿ ಪುಟ್ಟರಾಜು ಆಯ್ಕೆಯಾಗಿದ್ದಾರೆ.

ಬ್ಯಾಂಕ್ ಆವರಣದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನ ದಾಸೇಗೌಡ ಮತ್ತು ಕಾಂಗ್ರೆಸ್‍ನ ಗುರು ಮೂರ್ತಿ ನಾಮಪತ್ರ ಸಲ್ಲಿಸಿದರು. ಉಪಾ ಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಪುಟ್ಟರಾಜು ಮತ್ತು ಕಾಂಗ್ರೆಸ್‍ನ ನಾಗರಾಜು ನಾಮಪತ್ರ ಸಲ್ಲಿಸಿದರು.

ಚುನಾವಣೆಯಲ್ಲಿ ಮೊದಲೇ ಮೈತ್ರಿ ಮಾಡಿಕೊಂಡಂತೆ ಜೆಡಿಎಸ್‍ನ 6 ಮತ್ತು ಬಿಜೆಪಿಯ ಇಬ್ಬರು ಸೇರಿದಂತೆ 8 ಮಂದಿ ನಿರ್ದೇಶಕರು ಹಾಗೂ ಕಾಂಗ್ರೆಸ್‍ನ ಓರ್ವ ನಿರ್ದೇಶಕರ ಸಹಾಯದೊಂದಿಗೆ ತಲಾ 9 ಮತ ಪಡೆದು ಅಧ್ಯಕ್ಷರಾಗಿ ದಾಸೇಗೌಡ ಹಾಗೂ ಉಪಾಧ್ಯಕ್ಷರಾಗಿ ಪುಟ್ಟರಾಜು ಉಪಾ ಧ್ಯಕ್ಷರಾಗಿ ಚುನಾಯಿತರಾದರು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಪ್ರತಿಸ್ಪರ್ಧಿಗಳಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ಗುರುಸ್ವಾಮಿ, ನಾಗ ರಾಜು 7 ಮತಗಳನ್ನು ಪಡೆದು ಪರಾಭವ ಗೊಂಡರು. ಈ ವೇಳೆ ಚುನಾವಣಾಧಿ ಕಾರಿಗಳಾಗಿ ಭರತ್ ಕುಮಾರ್ ಕಾರ್ಯ ನಿರ್ವಹಿಸಿದರು. ಸಹಾಯಕ ಚುನಾವಣಾ ಧಿಕಾರಿಗಳಾಗಿ ಜಯಮ್ಮ, ನಾರಾಯಣ್, ಭಾರತಿ, ರಾಜು ಕಾರ್ಯ ನಿರ್ವಹಿಸಿ ದರು. ಚುನಾವಣೆಯಲ್ಲಿ ಸದಸ್ಯರಾದ ಶಂಕರ ಲಿಂಗೇಗೌಡ, ಶುಭಮಂಗಳ, ಮಲ್ಲಿ ಕಾರ್ಜುನ್, ಎಂ.ಡಿ.ಮಂಚಯ್ಯ, ಚಂದ್ರು, ಸಿದ್ದಪ್ಪ, ರಾಮಚಂದ್ರ, ನಾಗರಾಜು ಸೇರಿ ದಂತೆ ಇನ್ನಿತರರಿದ್ದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಜೆಡಿಎಸ್ ಅಧ್ಯಕ್ಷ ರಾಜೇಂದ್ರ, ಬಿಜೆಪಿ ಅಧ್ಯಕ್ಷ ಗುರುಸ್ವಾಮಿ, ಮುಖಂಡರಾದ ನರ ಸಿಂಹೇಗೌಡ, ಉಮೇಶ್, ರಾಮಚಂದ್ರು, ಹಲಗೇಗೌಡ, ಯೋಗ, ಹರೀಶ್‍ಗೌಡ, ಶ್ರೀನಿ ವಾಸ್, ಶಿವಪ್ಪ ಗೋಪಾಲಯ್ಯ ಇದ್ದರು.

 

Translate »