ನಾನು ಶಾಸಕ, ಸಚಿವನಾಗಲು ಕಾರಣರಾದ ದಿ.ಎಸ್.ನಂಜಪ್ಪನವರನ್ನು ಎಂದಿಗೂ ಮರೆಯಲ್ಲ: ಸಾರಾ
ಮೈಸೂರು

ನಾನು ಶಾಸಕ, ಸಚಿವನಾಗಲು ಕಾರಣರಾದ ದಿ.ಎಸ್.ನಂಜಪ್ಪನವರನ್ನು ಎಂದಿಗೂ ಮರೆಯಲ್ಲ: ಸಾರಾ

January 29, 2021

ಕೆ.ಆರ್.ನಗರ, ಜ.28(ಕೆಟಿಆರ್)- ನನಗೆ ಜೆಡಿಎಸ್‍ನಿಂದ ಟಿಕೆಟ್ ಕೊಟ್ಟು ಆಶೀರ್ವದಿಸಿ ತಾಲೂಕಿನಲ್ಲಿ 3 ಬಾರಿ ಶಾಸಕನಾಗಲು, ಸಚಿವ ನಾಗಲು ಕಾರಣರಾದ ಮಾಜಿ ಸಚಿವ ದಿ.ಎಸ್. ನಂಜಪ್ಪನವರನ್ನು ಹಾಗೂ ಅವರ ಕುಟುಂಬ ವನ್ನು ಎಂದಿಗೂ ಮರೆಯುವುದಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು.

ನಗರದ ಹೆಚ್.ಡಿ.ದೇವೇಗೌಡ ಸಮು ದಾಯ ಭವನದಲ್ಲಿ ಗುರುವಾರ ನಡೆದ ಎಸ್.ನಂಜಪ್ಪನವರ ಪುಣ್ಯಸ್ಮರಣೆ ಸಮಾ ರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ನನ್ನ ರಾಜ ಕೀಯ ಬೆಳವಣಿಗೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣನವರ ಸಾಕಷ್ಟು ಕೊಡುಗೆ ಇದೆ. ಹೆಚ್.ಡಿ.ದೇವೇಗೌಡರು ನನ್ನ ಆರಾಧ್ಯ ದೇವರು. ಆದರೆ ನಾನು ತಾಲೂಕಿನಲ್ಲಿ ಶಾಸಕನಾಗಿ, ಸಚಿವ ನಾಗಲೂ ಕಾರಣರಾದ ನಂಜಪ್ಪನವರನ್ನು ಕೊನೆ ಉಸಿರು ಇರುವವರೆಗೂ ಮರೆಯಲ್ಲ ಎಂದರು. ಬದುಕಿದ್ದರೆ ಎಲ್ಲಾ ವರ್ಗ, ಜಾತಿ, ಧರ್ಮದೊಂದಿಗೆ ಬದುಕಿದ ನಂಜಪ್ಪನವ ರಂತೆ ಬದಕುವ ಆಸೆ ನನ್ನದು ಎಂದರು.

ನಾನು ನಮ್ಮ ಪಕ್ಷದ ವರಿಷ್ಠರ ಬಳಿ ಸಜ್ಜನ, ಮಿತಭಾಷಿ ಉತ್ತಮ ವ್ಯಕ್ತಿತ್ವದ ಸೋದರನಂತಿರುವ ಬಸಂತ್ ನಂಜಪ್ಪ ನವರನ್ನು ಮುಂದಿನ ದಿನದಲ್ಲಿ ಶಿಕ್ಷಕರ ಅಥವಾ ಪದವೀಧರ ಕ್ಷೇತ್ರದಿಂದ ಆಯ್ಕೆ ಮಾಡಬೇಕೆಂದು ಪ್ರಸ್ತಾಪಿಸಿದ್ದೇನೆ. ಅದಕ್ಕೆ ಒಪ್ಪಿಗೆಯೂ ಸಿಕ್ಕಿದೆ. ಅವಕಾಶ ಹೊಂದಾ ಣಿಕೆ ಆದರೆ ಮುಂದಿನ ದಿನಗಳಲ್ಲಿ ಬಸಂತ್ ಎಂಎಲ್‍ಸಿಯಾಗಲು ಅವಕಾಶವಿದ್ದು, ಇದ ಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವು ದಾಗಿ ತಿಳಿಸಿದರು. ಇದೇ ಸಂದರ್ಭ ಬಹ ಳಷ್ಟು ಮಂದಿ ನಂಜಪ್ಪನವರ ಒಡನಾಟದ ಬಗ್ಗೆ ಮಾತನಾಡಿದರು. ಈ ವೇಳೆ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಎ.ಟಿ.ಸೋಮ ಶೇಖರ್, ನಿವೃತ್ತ ಉಪನ್ಯಾಸಕ ಕೆ.ಆರ್. ಲಕ್ಕೇಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಅಣ್ಣೇಗೌಡ, ವೈ.ಆರ್.ಪ್ರಕಾಶ್, ಹೆಚ್.ಪಿ. ಶಿವಣ್ಣ, ಖಜಾಂಚಿ ನಾರಾಯಣ, ಕೆ.ಎಲ್. ರಮೇಶ್, ಕೆ.ಎಲ್.ಜಗದೀಶ್, ನವನಗರ ಬ್ಯಾಂಕ್ ವ್ಯವಸ್ಥಾಪಕ ಸುರೇಶ್ ಮತ್ತು ಕೇಶವ, ಬಸಂತ್, ಲಲಿತಮ್ಮ, ದಿನೇಶ್, ವಿಜಯ ಕುಮಾರ್, ತಿಮ್ಮಶೆಟ್ಟಿ, ರಾಜಶೇಖರ, ಮಂಜು, ಕೃಷ್ಣಶೆಟ್ಟಿ, ರೂಪ, ರಶ್ಮಿ ಇನ್ನಿತರರಿದ್ದರು.

 

Translate »