ಪುರಸಭೆ ಕಾಂಗ್ರೆಸ್ ಏಜೆಂಟರ ಕಚೇರಿ ಎಂಬುದು ಸತ್ಯಕ್ಕೆ ದೂರ
ಮೈಸೂರು

ಪುರಸಭೆ ಕಾಂಗ್ರೆಸ್ ಏಜೆಂಟರ ಕಚೇರಿ ಎಂಬುದು ಸತ್ಯಕ್ಕೆ ದೂರ

January 29, 2021

ತಿ.ನರಸೀಪುರ, ಜ.28(ಎಸ್‍ಕೆ)- ಬಿಜೆಪಿ ಸದಸ್ಯರೊಬ್ಬರು ಪುರಸಭೆ ಕಾಂಗ್ರೆಸ್ ಏಜೆಂ ಟರ ಕಚೇರಿಯಾಗಿದೆ ಎಂದು ಆರೋಪಿ ಸಿರುವುದು ಸತ್ಯಕ್ಕೆ ದೂರವಾಗಿದ್ದು, ತಾವಾ ಡಿರುವ ಮಾತನ್ನು ಅವರು ವಾಪಸ್ ಪಡೆಯ ಬೇಕು ಎಂದು ಪುರಸಭಾಧ್ಯಕ್ಷ ಹೆಳವರ ಹುಂಡಿ ಸೋಮು ಒತ್ತಾಯಿಸಿದರು.

ಪಟ್ಟಣದ ಪುರಸಭೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ರಮೇಶ್ ಅರ್ಜುನ್ ಸದಸ್ಯರಲ್ಲದ ಕೆಲ ಕಾಂಗ್ರೆಸ್ ಕಾರ್ಯಕರ್ತರು ಅಧ್ಯಕ್ಷರ ಕೊಠಡಿಯಲ್ಲಿ ಕುಳಿತುಕೊಳ್ಳುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ಪುರಸಭೆ ಕಾಂಗ್ರೆಸ್ ಪಕ್ಷದ ಏಜೆಂ ಟರ ಕಚೇರಿಯಾಗಿದೆ ಎಂದು ಆರೋಪಿ ಸಿದ್ದ ಹಿನ್ನೆಲೆಯಲ್ಲಿ ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಪುರಸಭೆ ಕಾಂಗ್ರೆಸ್ ಸದಸ್ಯರು ಹಾಗೂ ಅಧ್ಯಕ್ಷ ಸೋಮು ಸುದ್ದಿಗೋಷ್ಠಿ ನಡೆಸಿ ಈ ಸಂಬಂಧ ಸ್ಪಷ್ಟನೆ ನೀಡಿದರು.

ಸದಸ್ಯರೊಬ್ಬರು ಮಾಡಿರುವ ಆರೋಪ ದಲ್ಲಿ ಯಾವುದೇ ಹುರುಳಿಲ್ಲ. ನಾನು ಚುನಾ ವಣೆಯಲ್ಲಿ ಸ್ಪರ್ಧಿಸಿ ಅಧ್ಯಕ್ಷನಾಗುವ ತನಕ ಮಾತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ. ಇದೀಗ ಎಲ್ಲಾ 23 ಮಂದಿ ಸದಸ್ಯರಿಗೂ ಅಧ್ಯಕ್ಷ ನಾಗಿದ್ದು, ಪಕ್ಷ ಭೇದಕ್ಕೆ ಇಲ್ಲಿ ಅವಕಾಶವಿಲ್ಲ. ಪುರಸಭೆಗೆ ಕೇವಲ ಕಾಂಗ್ರೆಸ್ ಪಕ್ಷದವರು ಮಾತ್ರ ಬರುವುದಿಲ್ಲ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ಕಾಂಗ್ರೆಸ್‍ನೊಂದಿಗೆ ಗುರ್ತಿಸಿಕೊಂಡಿರುವ ಸಾರ್ವಜನಿಕರು ಸಹ ಬರುತ್ತಾರೆ. ನಾವು ಆಗ ಪಕ್ಷಭೇದ ಮಾಡಲು ಬರುವುದಿಲ್ಲ. ಬಿಜೆಪಿ ಸದಸ್ಯರು ಹೇಳಿರು ವಂತೆ ಪುರಸಭೆ ಕಚೇರಿ ಕಾಂಗ್ರೆಸ್ ಪಕ್ಷದ ಏಜೆಂಟರ ಕಚೇರಿಯಲ್ಲ. ಸದಸ್ಯರ ಅರ್ಥ ಇಲ್ಲದ ಹೇಳಿಕೆಯಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಇಂತಹ ಕಪೆÇೀಲ ಕಲ್ಪಿತ ಹೇಳಿಕೆಗಳನ್ನು ನೀಡಿ ಕಾಲಾ ಹರಣ ಮಾಡುವ ಬದಲು ಸದಸ್ಯರು ಪಟ್ಟ ಣದ ಅಭಿವೃದ್ಧಿಗೆ ಸಹಕಾರ ನೀಡಲಿ ಎಂದರು.

ಉಪಾಧ್ಯಕ್ಷೆ ಪ್ರೇಮಾ ಮಾತನಾಡಿ, ಪುರ ಸಭೆ ಸಾರ್ವಜನಿಕರ ಸಮಸ್ಯೆ ನಿವಾರಣೆ ಹಾಗೂ ಪಟ್ಟಣದ ಅಭಿವೃದ್ಧಿಗಾಗಿ ಇರುವ ಕಚೇರಿ. ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ರುವ ನಾವು ಪುರಸಭೆಗೆ ಬರುವ ಎಲ್ಲಾ ಪಕ್ಷದವರೊಂದಿಗೆ ಸೌಜನ್ಯದಿಂದ ವರ್ತಿಸ ಬೇಕಾಗುತ್ತದೆ. ಸಾಮಾನ್ಯ ಸಭೆಯಲ್ಲಿ ಸದಸ್ಯ ರೊಬ್ಬರು ಟೇಬಲ್ ಹಾರಿ ಬಂದು ಪ್ರತಿಭಟಿ ಸುವ ಪ್ರಮೇಯವೇ ಇರಲಿಲ್ಲ ಎಂದು ಸದಸ್ಯ ಮಂಜುನಾಥ್ ಸಾಮಾನ್ಯ ಸಭೆಯಲ್ಲಿ ಪ್ರತಿ ಭಟಿಸಿದ ರೀತಿಗೆ ಅಸಮಾಧಾನ ವ್ಯಕ್ತಪ ಡಿಸಿದರು. ಸದಸ್ಯ ಟಿ.ಎಂ.ನಂಜುಂಡ ಸ್ವಾಮಿ ಮಾತನಾಡಿ, ಸದಸ್ಯರಾದ ಮದನ್ ರಾಜ್ ಹಾಗೂ ಸದಸ್ಯ ರಮೇಶ್ ಅರ್ಜುನ್ ಆರೋಪ ಖಂಡಿಸಿದರಲ್ಲದೇ ಕ್ಷುಲ್ಲಕ ಕಾರಣಕ್ಕಾಗಿ ಸಾಮಾನ್ಯ ಸಭೆ ಗಳನ್ನು ಮುಂದೂಡುವ ಹುನ್ನಾರ ನಡೆ ಸದೇ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಅಧ್ಯಕ್ಷರೊಂದಿಗೆ ಕೈ ಜೋಡಿಸಲಿ ಎಂದು ಸಲಹೆ ನೀಡಿದರು. ಗೋಷ್ಠಿಯಲ್ಲಿ ಸದಸ್ಯ ರಾದ ನಾಗರಾಜು, ಮಂಜು, ನಾಗರತ್ನ, ಮಾದೇಶ್, ಸಿ.ಪ್ರಕಾಶ್ ಹಾಜರಿದ್ದರು.

 

Translate »