ಲಸಿಕೆ ಪಡೆಯುವವರಲ್ಲಿ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳೇ ಅತೀ ಹೆಚ್ಚು
ಮೈಸೂರು

ಲಸಿಕೆ ಪಡೆಯುವವರಲ್ಲಿ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳೇ ಅತೀ ಹೆಚ್ಚು

January 29, 2021

ಬೆಂಗಳೂರು, ಜ.28-ರಾಜ್ಯದಲ್ಲಿ ಕೊರೊನಾ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ದೊರೆತು 11 ದಿನಗಳಾಗಿದ್ದು ಜಿಲ್ಲಾ ಕೇಂದ್ರಗಳಲ್ಲಿ ಲಸಿಕೆ ಪಡೆಯು ವವರ ಸಂಖ್ಯೆ ಶೇ.100 ಕ್ಕಿಂತ ಕಡಿಮೆ ಇದೆ. ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಲಸಿಕೆ ಪಡೆಯಲು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಿದ್ದರೆ ಸರ್ಕಾರಿ ಆಸ್ಪತ್ರೆ ಗಳಿಂದ ಕೆಲವೇ ಕೆಲವು ಮಂದಿಯಷ್ಟೇ ಲಸಿಕೆ ಪಡೆಯುವುದಕ್ಕೆ ಮುಂದಾಗುತ್ತಿದ್ದಾರೆ. ಕೆಲವು ಸರ್ಕಾರಿ ಆಸ್ಪತ್ರೆಗಳ ಅಧಿಕಾರಿಗಳ ಪ್ರಕಾರ ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿ ಗಳಲ್ಲಿ ಹಲವರಿಗೆ ಲಸಿಕೆ ಕುರಿತು ಇರುವ ಭಯ, ಆತಂಕಗಳು ಅವರನ್ನು ಲಸಿಕೆ ಪಡೆ ಯುವುದಕ್ಕೆ ಹಿಂದೇಟು ಹಾಕುವಂತೆ ಮಾಡುತ್ತಿದೆ. ಆದರೆ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗಳಲ್ಲಿ ಅಂತಹ ಭಯ ಇಲ್ಲದೇ ಇರುವ ಕಾರಣ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಬಿಬಿಎಂಪಿ ಅಂಕಿ-ಅಂಶಗಳ ಪ್ರಕಾರ ಜ.19ರಿಂದ 27ವರೆಗೆ 27, 7,736 ಮಂದಿ ಸರ್ಕಾರಿ ಫಲಾನುಭವಿಗಳು ಲಸಿಕೆ ಪಡೆದಿದ್ದರೆ ಖಾಸಗಿ ಕ್ಷೇತ್ರದಲ್ಲಿ ಒಟ್ಟಾರೆ 34,707 ಮಂದಿ ಲಸಿಕೆ ಪಡೆದಿದ್ದಾರೆ. ಸರ್ಕಾರಿ ವೈದ್ಯಕೀಯ ಸಿಬ್ಬಂದಿ ಪ್ರಕಾರ ಈ ವಿಭಾಗದ ಸಿಬ್ಬಂದಿ ಪೈಕಿ ಯುವ ನರ್ಸ್‍ಗಳು ಹಾಗೂ ವಿದ್ಯಾರ್ಥಿಗಳೆ ಹೆಚ್ಚಿನ ಸಂಖ್ಯೆ ಯಲ್ಲಿದ್ದು, ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಮನೆಯಲ್ಲಿ ಅನುಮತಿ ನೀಡದೇ ಇರುವುದು, ಸಾಮಾಜಿಕ ಜಾಲತಾಣಗಳಲ್ಲಿ ಲಸಿಕೆ ಬಗ್ಗೆ ತಪ್ಪು ಮಾಹಿತಿ ಬರುತ್ತಿರುವುದು ಹಾಗೂ ಪರಿ ಣಾಮ ಕಾರಿತ್ವದ ಬಗ್ಗೆ ಅನುಮಾನಗಳಿ ರುವುದು ಸರ್ಕಾರಿ ವಿಭಾಗದಲ್ಲಿನ ಸಿಬ್ಬಂದಿ ಲಸಿಕೆ ತೆಗೆದು ಕೊಳ್ಳುವುದರಿಂದ ದೂರ ಉಳಿಯುವಂತೆ ಮಾಡಿದೆ ಎನ್ನುತ್ತಾರೆ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ (ಆರ್ ಜಿಐಸಿಡಿ)ಯ ನಿರ್ದೇಶಕ ಡಾ. ಸಿ ನಾಗರಾಜ್ ಹೇಳಿದ್ದು ಲಸಿಕೆ ಕುರಿತ ಆತಂಕ ಇನ್ನೂ ಇದೆ ಎಂದು ಹೇಳಿದ್ದಾರೆ. ಈ ವೇಳೆಗೆ ಶೇ.70 ಮಂದಿಗೆ ಲಸಿಕೆ ನೀಡುವುದು ನಮ್ಮ ಗುರಿಯಾಗಿತ್ತು. ಆದರೆ ಶೇ.56 ಮಂದಿ ಫಲಾನುಭವಿಗಳಿಗೆ ಅಷ್ಟೇ ಲಸಿಕೆ ನೀಡಲಾಗಿದೆ. ಇದು ಇನ್ನೂ ಉತ್ತಮಗೊಳ್ಳುತ್ತದೆ ಎಂಬ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಕೆ.ಸಿ ಜನರಲ್ ಆಸ್ಪತ್ರೆಯಲ್ಲಿಯೂ ಶೇ.53ರಷ್ಟು ಸಿಬ್ಬಂದಿಗೆ ಮಾತ್ರವಷ್ಟೇ ಲಸಿಕೆ ನೀಡಲಾಗಿದೆ. ಲಸಿಕೆ ಪಡೆಯುವುದು ಕಡ್ಡಾಯವಲ್ಲದ ಕಾರಣ ಯಾರಿಗೂ ಒತ್ತಾಯ ಮಾಡುವಂತಿಲ್ಲ ಎಂದು ಅಧಿಕಾರಿಗಳು ಹೇಳಿ ದ್ದಾರೆ. ಹೆಚ್ಚಿನ ಮಂದಿ ಲಸಿಕೆ ಪಡೆಯದೇ ಇರುವುದಕ್ಕೆ ಕೋವಿನ್ ಪೆÇೀರ್ಟಲ್‍ನಲ್ಲಿರುವ ತಾಂತ್ರಿಕ ದೋಷವೂ ಕಾರಣ ಎನ್ನಲಾಗಿದೆ.

 

 

Translate »