ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಜನ್ಮದಿನಾಚರಣೆ: 59 ಯೂನಿಟ್ ರಕ್ತ ಸಂಗ್ರಹ
ಮೈಸೂರು

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಜನ್ಮದಿನಾಚರಣೆ: 59 ಯೂನಿಟ್ ರಕ್ತ ಸಂಗ್ರಹ

May 16, 2020

ಮೈಸೂರು, ಮೇ 15(ಆರ್‍ಕೆಬಿ)- ಕೆಪಿ ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜನ್ಮ ದಿನದ ಅಂಗವಾಗಿ `ಡಿಕೆಶಿ ಅಭಿಮಾನಿ ಬಳಗ’ ದಿಂದ ಶುಕ್ರವಾರ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 59 ಮಂದಿ ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಹೆಚ್. ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಲಾಕ್‍ಡೌನ್ ಸಂದರ್ಭದಲ್ಲಿ ರಕ್ತ ಸಂಗ್ರಹ ವಾಗದ ಕಾರಣ ರಕ್ತನಿಧಿ ಬ್ಯಾಂಕ್‍ನಲ್ಲಿ ರಕ್ತದ ಕೊರತೆ ಇತ್ತು. ಇದನ್ನು ಮನ ಗಂಡೇ ರಕ್ತದಾನ ಶಿಬಿರ ಆಯೋಜಿಸ ಲಾಗಿತ್ತು. ಕೊರೊನಾ ಸಂದರ್ಭದಲ್ಲಿ ರಕ್ತ ನೀಡಿದರೆ ಕೊರೊನಾ ವೈರಸ್ ಹರಡು ತ್ತದೆ ಆತಂಕ ಬೇಡ. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮದೊಂದಿಗೇ ರಕ್ತ ಸಂಗ್ರಹಿಸಲಾಗುತ್ತದೆ ಎಂದರು.

ಬಳಗದ ಅಧ್ಯಕ್ಷ ಶ್ರೀನಾಥ್‍ಬಾಬು ಮಾತ ನಾಡಿ, ರಕ್ತದ ಕೊರತೆಯಿಂದಾಗಿ ಯಾರ ಜೀವಕ್ಕೂ ಹಾನಿಯಾಗಬಾರದು ಎಂಬ ಕಾರಣದಿಂದ ರಕ್ತದಾನ ಶಿಬಿರ ಆಯೋಜಿ ಸಿದ್ದು, ರಾಜ್ಯದಲ್ಲಿ ಒಟ್ಟು 5 ಸಾವಿರ ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.

ಸುಯೋಗ್ ಆಸ್ಪತ್ರೆಯ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ಕೊರೊನಾ ವೈರಸ್ ರಕ್ತದ ಮೂಲಕ ಹರಡುವುದಿಲ್ಲ ಎಂಬ ವರದಿಯಿದೆ. ರಕ್ತ ಮತ್ತೊಬ್ಬರಿಗೆ ಕೊಟ್ಟಾಗ ಕೊರೊನಾ ಹರಡಿದ ಬಗ್ಗೆ ಈವರೆಗೆ ಎಲ್ಲಿಯೂ ಮಾಹಿತಿ ಇಲ್ಲ. ಹಾಗಿದ್ದೂ ರಕ್ತ ದಾನ ಮೊದಲು ಪ್ರತಿ ದಾನಿಯ ಆರೋಗ್ಯ ಮಾಹಿತಿ ಕಲೆ ಹಾಕಿ, ಡಿಜಿಟಲ್ ಥರ್ಮಾಮೀಟರ್ ಮೂಲಕ ದೇಹದ ತಾಪಮಾನ ಅಳೆಯಲಾಗುತ್ತದೆ. ವೈದ್ಯರು, ತಜ್ಞರು ಪ್ರತಿಯೊಬ್ಬ ದಾನಿಯಲ್ಲೂ ಆರೋಗ್ಯ ಸಮಸ್ಯೆ ಇಲ್ಲ ಎಂಬುದನ್ನು ಖಚಿತಪಡಿಸಿ ಕೊಂಡ ನಂತರವಷ್ಟೇ ರಕ್ತ ಪಡೆಯಲಾಗು ತ್ತದೆ. ಸರ್ಕಾರದ ಆದೇಶದಂತೆ ಎಲ್ಲಾ ಪರೀಕ್ಷೆ ನಡೆಸಿದ ಬಳಿಕವಷ್ಟೇ ಬಳಕೆಗೆ ನೀಡಲಾಗುತ್ತದೆ ಎಂದು ಹೇಳಿದರು.

ಎಂಎಲ್‍ಸಿ ಆರ್.ಧರ್ಮಸೇನ ಮಾತ ನಾಡಿ, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವ ಕುಮಾರ್ ಸೂಚನೆ ಮೇರೆಗೆ ಕೊರೊನಾ ಸಂಕಷ್ಟದಲ್ಲಿರುವ ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ರಕ್ತ ಸಂಗ್ರಹಿದ್ದು, ಡಿಕೆಶಿ ಜನ್ಮದಿನ ವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದರು. ಈ ಸಂದರ್ಭ ಮಾಜಿ ಶಾಸಕ ವಾಸು, ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮಹಿಳಾ ವಿಭಾಗದ ಮೈಸೂರು ಅಧ್ಯಕ್ಷೆ ಪುಷ್ಪ ಲತಾ, ಕೆ.ಆರ್.ಆಸ್ಪತ್ರೆ ರಕ್ತ ನಿಧಿ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್, ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ದಕ್ಷಿಣಾಮೂರ್ತಿ, ಮಾಜಿ ಉಪಮೇಯರ್ ಪುಷ್ಪವಲ್ಲಿ, ಎನ್‍ಎಸ್‍ಯುಐ ರಾಜ್ಯಾಧ್ಯಕ್ಷ ನಾಗೇಶ್ ಕರಿಯಪ್ಪ ಇನ್ನಿತರÀರಿದ್ದರು.

Translate »