ಮದುವೆ, ವಿಶೇಷ ಕಾರ್ಯಕ್ರಮಕ್ಕೆ 50 ಜನ ಮೀರುವಂತಿಲ್ಲ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟ
ಮೈಸೂರು

ಮದುವೆ, ವಿಶೇಷ ಕಾರ್ಯಕ್ರಮಕ್ಕೆ 50 ಜನ ಮೀರುವಂತಿಲ್ಲ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟ

May 16, 2020

ಬೆಂಗಳೂರು: ಮದುವೆ ಹಾಗೂ ವಿಶೇಷ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟವಾಗಿದ್ದು, ಅಗತ್ಯ ಅನುಮತಿ ಪಡೆಯಬೇಕು.

ಸ್ಥಳೀಯ ಸಂಸ್ಥೆ ಸಂಸ್ಥೆಗಳಿಂದ ಅನುಮತಿ ಪಡೆಯಬೇಕು, ಮದುವೆಗೆ ಕನಿಷ್ಠ 50 ಜನರಿಗೆ ಮಾತ್ರ ಅವಕಾಶ ನೀಡಿ ಅನುಮತಿ ನೀಡಲಾಗಿದೆ. ಕಾರ್ಯಕ್ರಮಗಳು ನಡೆಯುವ ಸ್ಥಳದಲ್ಲಿ ಪ್ರಾಕೃತಿಕ ಗಾಳಿ ಬೆಳಕು ಇರಬೇಕು. ಹವಾನಿಯಂತ್ರಿತ (ಎ.ಸಿ.) ವ್ಯವಸ್ಥೆ ಇರಬಾರದು. ಕಂಟೈನ್ಮೆಂಟ್ ಝೋನ್‍ಗಳ ಅತಿಥಿಗಳಿಗೆ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಾರ್ಗ ಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಗರ್ಭಿಣಿ ಮಹಿಳೆಯರು, 65 ವರ್ಷದ ಮೇಲ್ಪಟ್ಟ ಹಾಗೂ 10 ವರ್ಷದ ಮಕ್ಕಳು ಮದುವೆ ಹಾಗೂ ವಿಶೇಷ ಕಾರ್ಯಕ್ರಮಕ್ಕೆ ಬರುವಂತಿಲ್ಲ. ಕಾರ್ಯ ಕ್ರಮ ನಡೆಯುವ ಸ್ಥಳದಲ್ಲಿ ಸ್ಯಾನಿಟೈಸರ್ ಇತರ ವ್ಯವಸ್ಥೆ ಮಾಡಿರಬೇಕು. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ. ಕಾರ್ಯಕ್ರಮ ಅಥವಾ ಮದುವೆಗೆ ಬರುವ ವ್ಯಕ್ತಿಗಳ ತಪಾಸಣೆ ಸಂದರ್ಭದಲ್ಲಿ 37.5 ಸೆಲ್ಸಿಯಸ್, ಅಥವಾ 99.5 ಫ್ಯಾರನ್ ಹೀಟ್ ತಾಪಮಾನ ಹೊಂದಿದ್ದರೆ ಅಂತಹವರನ್ನು ವೈದ್ಯಕೀಯ ಪರೀಕ್ಷೆಗೆ ಸೂಚಿಸಬೇಕು. ಕಾರ್ಯಕ್ರಮಕ್ಕೆ ಬರುವ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಹ್ಯಾಂಡ್ ವಾಶ್‍ಗೆ ಸೋಪು ಮತ್ತು ಅಗತ್ಯ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗುಟ್ಕಾ, ಪಾನ್ ಮಸಾಲ, ಮದ್ಯ, ತಂಬಾಕು ಬಳಸಲು ಅವಕಾಶವಿಲ್ಲ. ಕಾರ್ಯಕ್ರಮದ ಸ್ಥಳವು ಸ್ವಚ್ಛತೆ ಮತ್ತು ನೈರ್ಮಲ್ಯದಿಂದ ಕೂಡಿರಬೇಕು. ಸಾರ್ವಜನಿಕ ಸ್ಥಳದಲ್ಲಿ ಉಗುಳುವು ದನ್ನು ನಿಷೇಧಿಸಲಾಗಿದೆ. ಕಾರ್ಯಕ್ರಮಕ್ಕೆ ನೋಡಲ್ ವ್ಯಕ್ತಿಯನ್ನು ನೇಮಿಸಿರಬೇಕು.

ಕಾರ್ಯಕ್ರಮಕ್ಕೆ ಹಾಜರಾಗುವವರ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆ ಮಾಹಿತಿ ಪಡೆಯ ಬೇಕು. ಆರೋಗ್ಯ ಸೇತು ಆ್ಯಪ್ ಡೌನ್‍ಡೋಲ್ ಮಾಡಿಕೊಂಡು ಅಳವಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Translate »