ಗಿರಾಕಿಗಳಿಲ್ಲದೇ ಸೊರಗಿದ ಪಾನ್ ಬ್ರೋಕರ್‍ಗಳು
ಮೈಸೂರು

ಗಿರಾಕಿಗಳಿಲ್ಲದೇ ಸೊರಗಿದ ಪಾನ್ ಬ್ರೋಕರ್‍ಗಳು

May 16, 2020

ಮೈಸೂರು, ಮೇ 15 (ಆರ್‍ಕೆ)- ಕೋವಿಡ್-19, ಲಾಕ್‍ಡೌನ್‍ನಿಂದಾಗಿ ಕಳೆದೆರಡು ತಿಂಗಳಿಂದ ಮೈಸೂರಿನ ಗಿರವಿ ಅಂಗಡಿ ಮಾಲೀಕರು ವಹಿವಾಟಿಲ್ಲದೆ ಸೊರಗಿದ್ದಾರೆ ಎಂದು ಮೈಸೂರು ಜಿಲ್ಲಾ ಪಾನ್ ಬ್ರೋಕರ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಸಿಂಗ್ ತಿಳಿಸಿ ದ್ದಾರೆ. ಲಾಕ್‍ಡೌನ್ ಸಡಿಲಗೊಂಡು ಗುರುವಾರ ದಿಂದ ಅಂಗಡಿ ತೆರೆಯಲು ಅವಕಾಶ ನೀಡಿದ ಮೇಲೂ ಯಾರೂ ಗಿರಾಕಿಗಳೇ ಗಿರವಿ ಅಂಗಡಿ ಗಳತ್ತ ಬಾರದಿರುವುದು ಮತ್ತಷ್ಟು ಆತಂಕ ಉಂಟು ಮಾಡಿದೆ. ಮೈಸೂರು ನಗರ ಸೇರಿದಂತೆ ಜಿಲ್ಲೆ ಯಾದ್ಯಂತ 600 ಪಾನ್ ಬ್ರೋಕರ್ ಅಂಗಡಿಗಳು ತೆರೆದಿವೆಯಾದರೂ, ಆಭರಣ ಗಿರವಿ ಇಡಲು ಜನರೇ ಬಾರದಿದ್ದರೆ ವಹಿವಾಟು ನಡೆಯುವುದಾದರೂ ಹೇಗೆ? ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ನಾವು ಬಡ್ಡಿಗೆ ಅಲ್ಲಿ ಇಲ್ಲಿ ಹಣ ತಂದು ವಹಿವಾಟು ನಡೆಸುತ್ತೇವೆ. ಕಳೆದೆರಡು ತಿಂಗಳಿಂದ ಅಂಗಡಿಗಳನ್ನು ಬಂದ್ ಮಾಡಿ ಮನೆಯಲ್ಲಿದ್ದೆವು. ಈಗ ಅಂಗಡಿ ತೆರೆದಿದ್ದಾಗ್ಯೂ ಜನರೇ ಬಾರದ ಕಾರಣ ಈ ವೃತ್ತಿನಿರತರು ಪರದಾಡುವಂತಾಗಿರುವುದರಿಂದ ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್‍ನಲ್ಲಿ ನೆರವು ನೀಡಿದರೆ ತಕ್ಕಮಟ್ಟಿಗೆ ಪಾನ್ ಬ್ರೋಕರ್‍ಗಳು ಚೇತರಿಸಿಕೊಳ್ಳಬಹುದು ಎಂದು ಚಂದ್ರಸಿಂಗ್ ನುಡಿದರು.

Translate »