ಮೈಸೂರಲ್ಲಿ ನಿರಾತಂಕವಾಗಿ ನಡೆದ ಕೆಪಿಎಸ್‍ಸಿ-ಎಫ್‍ಡಿಎ ಸ್ಪರ್ಧಾತ್ಮಕ ಪರೀಕ್ಷೆ
ಮೈಸೂರು

ಮೈಸೂರಲ್ಲಿ ನಿರಾತಂಕವಾಗಿ ನಡೆದ ಕೆಪಿಎಸ್‍ಸಿ-ಎಫ್‍ಡಿಎ ಸ್ಪರ್ಧಾತ್ಮಕ ಪರೀಕ್ಷೆ

March 1, 2021

ಮೈಸೂರು,ಫೆ.28(ಆರ್‍ಕೆಬಿ)-ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1114 ಸಹಾಯಕ/ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾನುವಾರ ಮೈಸೂರಿನ 49 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ನಿರಾತಂಕವಾಗಿ ನಡೆಯಿತು.

ಬೆಳಗ್ಗೆ 10ರಿಂದ 11.30ವರೆಗೆ ಮೊದಲ ಪತ್ರಿಕೆ, ಮಧ್ಯಾಹ್ನ 2ರಿಂದ 3.30ರವರೆಗೆ 2ನೇ ಪತ್ರಿಕೆ ನಡೆಯಿತು. ಒಟ್ಟಾರೆ ಮೈಸೂರಿನಲ್ಲಿ ಜಿಲ್ಲೆಯ 20,322 ಮಂದಿ ಹೆಸರು ದಾಖಲಿಸಿ ಕೊಂಡಿದ್ದರು. ಈ ಪೈಕಿ ಬೆಳಗಿನ ಮೊದಲ ಪತ್ರಿಕೆಯಲ್ಲಿ 13,720 ಅಭ್ಯರ್ಥಿಗಳು ಪರೀಕ್ಷೆ ಬರೆದರೆ, 6,602 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ಮಧ್ಯಾಹ್ನದ ಪತ್ರಿಕೆಯಲ್ಲಿ 13,615 ಅಭ್ಯರ್ಥಿಗಳು ಪರೀಕ್ಷೆ ಬರೆದರೆ, 6717 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ಕಳೆದ ಜ.24 ರಂದು ನಡೆಯಬೇಕಿದ್ದ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಫೆ.28ಕ್ಕೆ ಮುಂದೂಡ ಲ್ಪಟ್ಟಿತ್ತು. ಮೈಸೂರಿನ ಪಡುವಾರಹಳ್ಳಿಯ ಮಹಾರಾಣಿ ಕಾಲೇಜು, ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿ ರುವ ವಿದ್ಯಾವರ್ಧಕ ಕಾಲೇಜು ಸೇರಿದಂತೆ ಒಟ್ಟು 49 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದವು. ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ ಕೊಠಡಿಗೆ 24 ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಕೋವಿಡ್ ಲಕ್ಷಣ ಕಂಡು ಬರುವ ಅಭ್ಯರ್ಥಿಗಳಿಗೆಂದೇ ಪ್ರತಿ ಕೇಂದ್ರದಲ್ಲೂ 24 ಅಭ್ಯರ್ಥಿಗಳ ಪ್ರತ್ಯೇಕ ಐಸೋಲೇಷನ್ ಕೊಠಡಿ ತೆರೆಯಲಾಗಿತ್ತು. ಕೋವಿಡ್-19 ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಮೊದಲು ಅಭ್ಯರ್ಥಿಗಳನ್ನು ಥÀರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಿ, ನಂತರ ಪ್ರವೇಶ ನೀಡಲಾಯಿತು.

 

 

Translate »