ಕೆ.ಆರ್.ಆಸ್ಪತ್ರೆ ಕಾಂಪೌಂಡ್ ಎತ್ತರಿಸುವ ಕಾಮಗಾರಿ ಆರಂಭ
ಮೈಸೂರು

ಕೆ.ಆರ್.ಆಸ್ಪತ್ರೆ ಕಾಂಪೌಂಡ್ ಎತ್ತರಿಸುವ ಕಾಮಗಾರಿ ಆರಂಭ

September 16, 2021

ಮೈಸೂರು,ಸೆ.15(ಆರ್‍ಕೆ)-ರೋಗಿಗಳು, ಸಾರ್ವ ಜನಿಕರು, ವೈದ್ಯರು ಹಾಗೂ ಸಿಬ್ಬಂದಿಯ ಸುರಕ್ಷತೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆ ಕಾಂಪೌಂಡ್ ಎತ್ತರಿಸಲಾಗು ತ್ತಿದ್ದು, ಪಾರಂಪರಿಕ ವಿನ್ಯಾಸಕ್ಕೆ ಧಕ್ಕೆಯಾಗದಂತೆ ಗ್ರಿಲ್ ಅಳವಡಿಸುವ ಕಾಮಗಾರಿ ಆರಂಭವಾಗಿದೆ.

ಪ್ರಸ್ತುತ ಕಾಂಪೌಂಡ್ ಗ್ರಿಲ್ 3 ಅಡಿ ಮಾತ್ರ ಇದ್ದು, ಖದೀಮರು ಅಲ್ಲಲ್ಲಿ ಗ್ರಿಲ್ ಕತ್ತರಿಸಿ ಹೊತ್ತೊಯ್ದಿರು ವುದರಿಂದ ಯಾರು ಬೇಕಾದರೂ ಎಲ್ಲೆಂದರಲ್ಲಿ ನುಸು ಳಲು ಅವಕಾಶವಾಗಿತ್ತು. ಅದರಿಂದ ಕಳ್ಳತನಗಳಾಗು ತ್ತಿದ್ದವು. ಹಾಗಾಗಿ ಆಸ್ಪತ್ರೆ ಭದ್ರತೆ ದೃಷ್ಟಿಯಿಂದ ಕಾಂಪೌಂಡ್ ಎತ್ತರಿಸಬೇಕೆಂದು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಮತ್ತು ನಿರ್ದೇಶಕ ಡಾ.ಸಿ.ಪಿ.ನಂಜರಾಜ್ ವೈದ್ಯಕೀಯ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ ಕರ್ನಾಟಕ ಆರೋಗ್ಯ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಗ್ರಿಲ್ ಅಳವಡಿಸು ತ್ತಿದ್ದು, ತಿಂಗಳೊಳಗಾಗಿ ಪೂರ್ಣಗೊಳಿಸುವುದಾಗಿ ಕೆಹೆಚ್‍ಆರ್‍ಡಿಪಿ ಇಂಜಿನಿಯರ್ ದೊರೆಸ್ವಾಮಿ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.
ಕೆ.ಆರ್.ಆಸ್ಪತ್ರೆ ಸುತ್ತ 1,200 ಮೀ. ಉದ್ದ ಕಾಂಪೌಂಡ್ ಇದ್ದು, ಜೆಕೆ ಮೈದಾನದ ಕಡೆ, ಧನ್ವಂತರಿ ರಸ್ತೆಯ ಕೆಲವೆಡೆ ಎತ್ತರದ ಗೋಡೆ ನಿರ್ಮಿಸಿದೆ. ಸಯ್ಯಾ ಜಿರಾವ್ ರಸ್ತೆ ಮತ್ತು ಇರ್ವಿನ್ ರಸ್ತೆ ಕಡೆಯ 800 ಮೀ. ಉದ್ದ ಕಾಂಪೌಂಡ್ ನಿರ್ಮಿಸಿ ಗ್ರಿಲ್ ಮತ್ತು ಅಗತ್ಯ ವಿದ್ದೆಡೆ ಗೇಟ್ ಅಳವಡಿಸುವ ಕಾಮಗಾರಿಯನ್ನು 30 ಲಕ್ಷ ರೂ. ವೆಚ್ಚದಲ್ಲಿ ಮಾಡಲಾಗುತ್ತಿದೆ ಎಂದರು.

ಕೆ.ಆರ್.ಆಸ್ಪತ್ರೆ ಭದ್ರತೆ ದೃಷ್ಟಿಯಿಂದ ಕೆಲವು ಗೇಟ್‍ಗಳನ್ನು ಬಂದ್ ಮಾಡಿ ಒಳ ಹೋಗಲು ಮತ್ತು ಹೊರ ಬರಲು ಪ್ರತ್ಯೇಕ ದ್ವಾರ ಮಾಡಲು ಚಿಂತಿಸ ಲಾಗಿದೆ. ಕಾಂಪೌಂಡ್ ಎತ್ತರಿಸುವ ಕಾಮಗಾರಿ ಮುಗಿದ ನಂತರ ಗೇಟ್ ಅಳವಡಿಕೆ ಬಗ್ಗೆ ಪೊಲೀಸ್ ಅಧಿಕಾರಿ ಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಎಂಎಂಸಿ-ಆರ್‍ಐ ಮೂಲಗಳು ತಿಳಿಸಿವೆ.

Translate »