ಕೆ.ಆರ್.ಪೇಟೆ: ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ
ಮಂಡ್ಯ

ಕೆ.ಆರ್.ಪೇಟೆ: ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ

November 18, 2021

ಕೆ.ಆರ್.ಪೇಟೆ, ನ.17- ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರು ಹಾಗೂ ಆರೋಗ್ಯ ಸಿಬ್ಬಂ ದಿಯ ಮೇಲೆ ಮಂಗಳವಾರ ರಾತ್ರಿ ಮಾರ ಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆ ದಿದ್ದು, ಪರಾರಿಯಾಗುತ್ತಿದ್ದ ನಾಲ್ವರು ಆರೋಪಿ ಗಳನ್ನು ಸಿನಿಮೀಯ ರೀತಿ ಬೆನ್ನಟ್ಟಿ ಬಂಧಿಸು ವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಟ್ಟಣದ ವಿವಿಧ ಬಡಾವಣೆಯ ನಿವಾಸಿ ಗಳಾದ ಪರಮೇಶ್(22), ಕೆ.ಆರ್.ವಿನೋದ್ (23), ಕೆ.ಎಸ್.ದರ್ಶನ್(21), ವಿಜಯ್ ಅಲಿ ಯಾಸ್ ಪ್ರೇಮ್(22) ಬಂಧಿತ ಆರೋಪಿಗಳು.

ಘಟನೆಯ ವಿವರ: ಆರೋಪಿಗಳು ಮಂಗಳ ವಾರ ಮಧ್ಯರಾತ್ರಿ ಸುಮಾರು 1.30 ಗಂಟೆ ವೇಳೆಗೆ ಯುವತಿಯೋರ್ವಳನ್ನು ಕರೆದು ಕೊಂಡು ಬಂದು ಈಕೆ ಅಸ್ವಸ್ಥಗೊಂಡಿದ್ದಾಳೆ, ಕೂಡಲೇ ಚಿಕಿತ್ಸೆ ನೀಡುವಂತೆ ಹೇಳಿದ್ದಾರೆ. ಆಗ ಕರ್ತವ್ಯದಲ್ಲಿದ್ದ ಡಾ.ಶ್ರೀಕಾಂತ್ ಅವರು ಯುವತಿಗೆ ಸೂಕ್ತ ಚಿಕಿತ್ಸೆ ನೀಡಿ ಯಾವುದೇ ತೊಂದರೆ ಇಲ್ಲ, ಕರೆದುಕೊಂಡು ಹೋಗ ಬಹುದು ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಸ್ಟಾಫ್ ನರ್ಸ್ ರಂಗನಾಥ್ ಅವರು ಬಿ.ಪಿ ಚೆಕ್ ಮಾಡಿ ವೈದ್ಯರು ಹೇಳಿದ ಇಂಜ ಕ್ಷನ್ ನೀಡಿ, ಇಂಜಕ್ಷನ್ ಗ್ಲೂಕೋಸ್ ಬಾಟಲ್ ಹಾಕಿ ಆರೈಕೆ ಮಾಡಿದ್ದಾರೆ. ಚಿಕಿತ್ಸೆ ನೀಡಿದ ನಂತರ ಆರೋಪಿಗಳು ಬಿಪಿ ಚೆಕ್ ಮಾಡಿದ ನರ್ಸ್ ರಂಗನಾಥ್ ಅವರನ್ನು ಯುವತಿ ಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಿಯಾ ಎಂದು ಆರೋಪಿಸಿ ಏಕಾಏಕಿ ಮಾರ ಣಾಂತಿಕವಾಗಿ ಹಲ್ಲೆ ನಡೆಸಿದ್ದಲ್ಲದೆ, ನಂತರ ಆಸ್ಪತ್ರೆಯ ಹೊರಗಡೆ ಎಳೆದುಕೊಂಡು ಹೋಗಿ ಮರದ ಕಟ್ಟಿಗೆಯಿಂದ ಮನ ಬಂದಂತೆ ಥಳಿಸಿದ್ದಾರೆ. ಈ ವೇಳೆ ನರ್ಸ್ ರಂಗನಾಥ್ ಅವರ ಸಹಾಯಕ್ಕೆ ಬಂದ ಡಾ. ಶ್ರೀಕಾಂತ್ ಅವರ ಮೇಲೂ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ.

ಕೂಡಲೇ ಸ್ಥಳದಲ್ಲಿದ್ದ ಇತರ ಸಿಬ್ಬಂದಿ ಪೆÇಲೀಸರಿಗೆ ಕರೆ ಮಾಡಿದಾಗ ಸ್ಥಳಕ್ಕೆ ಬಂದ ಪೆÇಲೀಸರು ಸ್ಟಾಫ್ ನರ್ಸ್ ರಂಗನಾಥ್ ಮತ್ತು ವೈದ್ಯರನ್ನು ರಕ್ಷಿಸಿದ್ದಾರೆ. ಈ ವೇಳೆ ಹಲ್ಲೆ ಮಾಡಿ ಪರಾರಿಯಾಗುತ್ತಿದ್ದ ನಾಲ್ವರೂ ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿ ದ್ದಾರೆ. ಇಂದು ಬೆಳಗ್ಗೆ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸ ಲಾಗಿ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು.

ಸಾರ್ವಜನಿಕರ ಪ್ರತಿಭಟನೆ: ಕರ್ತವ್ಯ ನಿರತ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ಕಿಡಿಗೇಡಿ ಯುವಕರು ಹಲ್ಲೆ ನಡೆಸಿದ ವಿಚಾರ ತಾಲೂಕಿನಾದ್ಯಂತ ಹಬ್ಬಿದಾಗ ಕನ್ನಡ ಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಆಸ್ಪತ್ರೆಗೆ ಆಗಮಿಸಿ ಹಲ್ಲೆ ನಡೆಸಿರುವ ಕಿಡಿ ಗೇಡಿ ಯುವಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಆಸ್ಪತ್ರೆಯ ಆವರಣ ದಲ್ಲಿ ಹೊರ ಪೊಲೀಸ್ ಠಾಣೆಯನ್ನು ತೆರೆಯಬೇಕು. ವೈದ್ಯಕೀಯ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಆರಂಭಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಕಾಯಿ ಮಂಜೇಗೌಡ, ಸಾಧುಗೋನಹಳ್ಳಿ ಲೋಕಿ, ದಯಾನಂದ್, ಯೋಗೇಶ್, ದಿಲೀಪ್, ಎ.ಸಿ.ಕಾಂತರಾಜು, ಸಮೀರ್, ಮೆಡಿಕಲ್ ಕಾಂತರಾಜು ಸೇರಿದಂತೆ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.

ಡಿಹೆಚ್‍ಓ ಭೇಟಿ: ಆರೋಗ್ಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸು ತ್ತಿರುವ ಸುದ್ದಿ ತಿಳಿದ ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ಧನಂಜಯ್ ಅವರು ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂಧನ್, ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರವಿ ಅವರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ಸಿಬ್ಬಂದಿ ಗಳು ಹಾಗೂ ಸಾರ್ವಜನಿಕರೊಂದಿಗೆ ಮಾತನಾಡಿ, ಈ ಬಗ್ಗೆ ಸೂಕ್ತ ಕ್ರಮ ಕೈ ಗೊಂಡು ಈ ರೀತಿ ಘಟನೆ ನಡೆಯದಂತೆ ಎಚ್ಚರ ವಹಿಸುವುದಾಗಿ ಸಮಾಧಾನಪಡಿಸಿ ದರು. ಅಲ್ಲದೆ ವೃತ್ತ ನಿರೀಕ್ಷಕ ದೀಪಕ್ ಅವರು ಆಸ್ಪತ್ರೆಯಲ್ಲಿ ಪೊಲೀಸ್ ಚೌಕಿ ಆರಂಭಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

Translate »