ಗ್ರಾಮ, ಕೃಷಿ ಉಳಿಯದೇ ದೇಶ ಉಳಿಯದು;  ಯುವ ಜನತೆ ಗ್ರಾಮಮುಖಿಗಳಾಗಬೇಕು
ಮೈಸೂರು

ಗ್ರಾಮ, ಕೃಷಿ ಉಳಿಯದೇ ದೇಶ ಉಳಿಯದು; ಯುವ ಜನತೆ ಗ್ರಾಮಮುಖಿಗಳಾಗಬೇಕು

November 18, 2021

ಮೈಸೂರು,ನ.17(ಪಿಎಂ)-ಭಾರತವೆಂಬ ಬೃಹತ್ ವೃಕ್ಷಕ್ಕೆ ಹಳ್ಳಿಗಳೇ ತಾಯಿ ಬೇರು. ಹಳ್ಳಿಗಳು ಮತ್ತು ಕೃಷಿ ಸಂಸ್ಕøತಿ ಇಲ್ಲದೇ ದೇಶ ಉಳಿಯಲು ಸಾಧ್ಯವಿಲ್ಲ. ಇದನ್ನು ಅರಿತು ನಮ್ಮ ಯುವ ಜನತೆ ಗ್ರಾಮಮುಖಿ ಗಳಾಗಬೇಕು ಎಂದು ಸಾಹಿತಿಯೂ ಆದ ಖ್ಯಾತ ಚಲನಚಿತ್ರ ನಿರ್ದೇಶಕ ಡಾ.ನಾಗತಿ ಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಮೈಸೂರಿನ ಮುಕ್ತ ಗಂಗೋತ್ರಿಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಬಾಗಲ ಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ 3 ದಿನಗಳ ಕಾಲ ಹಮ್ಮಿಕೊಂಡಿರುವ ವಿವಿ ವ್ಯಾಪ್ತಿಯ ಅಂತರ ಕಾಲೇಜುಗಳ 12ನೇ ಯುವ ಜನೋತ್ಸವ `ಉದ್ಯಾನ ಯುವ ಕಲರವ’ಕ್ಕೆ ಡೊಳ್ಳು ಬಾರಿಸುವ ಮೂಲಕ ಬುಧವಾರ ಚಾಲನೆ ನೀಡಿ, ಅವರು ಮಾತನಾಡಿದರು.

ಇತ್ತೀಚೆಗೆ ನಿಧನರಾದ ಖ್ಯಾತ ನಾಯಕ ನಟ ಪುನೀತ್ ರಾಜ್‍ಕುಮಾರ್ ಸ್ಮರಣೆ ಯೊಂದಿಗೆ ಭಾಷಣ ಆರಂಭಿಸಿದ ಅವರು, ತೋಟಗಾರಿಕೆ ಕಾರ್ಯ ಕ್ಷೇತ್ರ ಹಸಿರು, ರೈತರಿಗೆ ಸಂಬಂಧಿಸಿದ ಕಾರಣ ಇದು ಅತೀ ಮುಖ್ಯವಾದುದು. ಇದರಲ್ಲಿ ನೆಲಮುಖಿ ಮತ್ತು ದೇಸಿಯ ಚಿಂತನೆಗಳಿವೆ. ಆದರೆ ಈ ಕ್ಷೇತ್ರದ ಸಾಧನೆ, ಸಂಶೋಧನೆ ಬಗ್ಗೆ ಪ್ರಚಾರ ನೀಡಿ ಪ್ರಶಂಸೆ ವ್ಯಕ್ತಪಡಿಸುವಲ್ಲಿ ನಿರ್ಲಕ್ಷ್ಯವಿದ್ದು, ಇದು ದುರಂತ. ಆದರೆ ಬೇರೆ ಉತ್ಪನ್ನಗಳನ್ನು ವಿಜೃಂಭಿಸಲಾಗು ತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಪಂಚದಲ್ಲಿ 1.8 ಬಿಲಿಯನ್ ಯುವ ಜನತೆ ಇದ್ದು, ಈ ಪೈಕಿ ಭಾರತದಲ್ಲಿ 356 ಮಿಲಿ ಯನ್ ಯುವ ಜನರಿದ್ದಾರೆ. ಇದರಲ್ಲಿ ಶೇ.68 ರಷ್ಟು ಯುವ ಜನತೆ ಗ್ರಾಮೀಣ ಪ್ರದೇಶ ದವರು. ಈ ಗ್ರಾಮೀಣ ಪ್ರತಿಭೆಗಳಲ್ಲಿ ಹಲ ವರು ನಿರುದ್ಯೋಗ ಸಮಸ್ಯೆ ಎದುರಿಸು ತ್ತಿದ್ದಾರೆ. ತೋಟಗಾರಿಕೆ ಕ್ಷೇತ್ರ ನಿರುದ್ಯೋಗ ಸಮಸ್ಯೆ ನಿವಾರಿಸಿರುವುದಕ್ಕೆ ಅನೇಕ ನಿದ ಶರ್ನಗಳು ನಮ್ಮ ಮುಂದಿವೆ. ಇದನ್ನು ಯುವ ಸಮುದಾಯ ಗಮನಿಸಬೇಕು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಒಟ್ಟಾರೆ 200ಕ್ಕೂ ಹೆಚ್ಚು ಯೋಜನೆಗಳಿವೆ. ದುರದೃಷ್ಟವಶಾತ್ ಇದರಲ್ಲಿ ಶೇ.15ರಷ್ಟು ಪ್ರಯೋಜನ ಹಳ್ಳಿಗಳಿಗೆ ತಲುಪುವುದಿಲ್ಲ. ಮಧ್ಯವರ್ತಿಗಳ ಹಾವಳಿ, ಹಲವು ರಾಜ ಕಾರಣಿಗಳ ಆಲಸ್ಯ ಇದಕ್ಕೆ ಕಾರಣ. ಪ್ರಸ್ತುತ ಭಾರತ ಅಥವಾ ಕರ್ನಾಟಕ ಉನ್ನತ ಬದ ಲಾವಣೆ ಕಾಣಬೇಕಾದರೆ ಯುವ ಜನತೆ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕ ವಾಗಿ ನಿಭಾಯಿಸಬೇಕಿದೆ. ಇಲ್ಲಿ 200ಕ್ಕೂ ಯುವಜನತೆ ಸೇರಿದ್ದು, ತಾವು ಸಾಧ್ಯ ವಾದಷ್ಟು ಗ್ರಾಮಮುಖಿಗಳಾಗಿ ಎಂದು ಕಿವಿಮಾತು ಹೇಳಿದರು.

ಇಂತಹ ಯುವಜನೋತ್ಸವ ಪರಸ್ಪರ ಅರಿತುಕೊಳ್ಳಲು ಸಹಕಾರಿ. ಇಂತಹ ವೇದಿಕೆ ಯಲ್ಲಿ ಪ್ರಶಸ್ತಿ ಪಡೆಯುವುದು ಮುಖ್ಯವಲ್ಲ. ಬದಲಿಗೆ ಭಾಗವಹಿಸುವಿಕೆ ಮುಖ್ಯ. ಇಂತಹ ಯುವ ಜನೋತ್ಸವ ಮೂಲಕ ವಿವಿಧ ಪ್ರತಿಭೆ ಮತ್ತು ದನಿಗಳು ಸಂಯೋಜಿಸ ಲಿದೆ. ಇಂತಹ ಉತ್ಸವಗಳಲ್ಲಿ ಭಾಗವಹಿ ಸದೇ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದರೆ ಸಮಾಜ ಮತ್ತು ದೇಶ ಅರಿಯಲಾಗದು ಎಂದು ಹೇಳಿದರು.
ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾ ಶಂಕರ್ ಮಾತನಾಡಿ, ಭಾರತ ಪ್ರಗತಿಯತ್ತ ದಾಪುಗಾಲು ಇಡುತ್ತಿದೆ. ಇಡೀ ವಿಶ್ವ ಇಂದು ಭಾರತದತ್ತ ನೋಡುತ್ತಿದೆ. ಭಾರತದ ಆರ್ಥಿಕತೆಗೆ ಭವ್ಯ ಭವಿಷ್ಯವಿದ್ದು, ವರ್ಷ ದಲ್ಲಿ ದೇಶ ಆರ್ಥಿಕ ಸುಸ್ಥಿರತೆ ಸಾಧಿಸಲಿದೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದಲ್ಲಿ ಶೇ.40ರಷ್ಟು ನೌಕರರು ಭಾರತದವರಾಗಿದ್ದು, ಹೀಗೆ ವಲಸೆ ಹೋಗುವುದು ನಿಂತರೆ ದೇಶಕ್ಕೆ ಉಜ್ವಲ ಭವಿಷ್ಯವಿದೆ. ಇದನ್ನು ಯುವ ಜನತೆ ಅರಿಯಬೇಕು ಎಂದು ಹೇಳಿದರು.

ತೋಟಗಾರಿಕೆ ವಿವಿ ಕುಲಪತಿ ಡಾ. ಕೆ.ಎಂ.ಇಂದಿರೇಶ್ ವಿದೇಶದಲ್ಲಿರುವ ಕಾರಣ ಆನ್‍ಲೈನ್‍ನಲ್ಲಿ ಉತ್ಸವಕ್ಕೆ ಶುಭ ಕೋರಿ ದರು. ಪ್ರಭಾರ ಕುಲಪತಿ ಡಾ.ಎಂ.ಎಸ್. ಕುಲಕರ್ಣಿ, ಕುಲಸಚಿವ ಡಾ.ಟಿ.ಬಿ. ಅಳ್ಳೊಳ್ಳಿ, ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ.ಎಂ.ಶಿವಮೂರ್ತಿ, ಬಿ.ಸುಮಿತ್ರಾದೇವಿ, ಡಾ.ಬಿ.ಜಿ.ಪ್ರಕಾಶ್, ಡೀನ್ ಡಾ.ವಿಷ್ಣುವರ್ಧನ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Translate »