ದೇಶ ಕಟ್ಟುವ ಜವಾಬ್ದಾರಿ ನಿಭಾಯಿಸಬೇಕು ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್
ಮೈಸೂರು

ದೇಶ ಕಟ್ಟುವ ಜವಾಬ್ದಾರಿ ನಿಭಾಯಿಸಬೇಕು ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್

November 18, 2021

ಮೈಸೂರು,ನ.17(ಪಿಎಂ)-ದೇಶವನ್ನು ಛಿದ್ರಗೊಳಿಸುವ, ಮನುಷ್ಯ ಮನುಷ್ಯರ ನಡುವೆ ಗೋಡೆ ಕಟ್ಟುವ ಶಕ್ತಿಗಳು ಜಾಗೃತ ವಾಗಿರುವ ಈ ದಿನಗಳಲ್ಲಿ ಯುವ ಜನತೆ ದೇಶ ಕಟ್ಟುವ ಜವಾಬ್ದಾರಿ ನಿಭಾಯಿಸ ಬೇಕಿದೆ ಎಂದು ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ಮೇಲ್ನೋಟಕ್ಕೆ ಕಾಣದೇ ಇದ್ದರೂ ದೇಶ ಕಟ್ಟುವ ಕೆಲಸವನ್ನು ಇಂತಹ ಯುವ ಜನೋತ್ಸವ ಮಾಡುತ್ತವೆ. ಸಾಮೂ ಹಿಕವಾಗಿ ಬೆಳೆಯಲು ಇಂತಹ ಉತ್ಸವ ಮುಖ್ಯ. ಇದು ಸೋದರತ್ವ, ಸಮಾನತೆ, ಸಾಮರಸ್ಯ ಬೆಳೆಸಲಿದೆ. ಅಂದರೆ ವೈವಿ ಧ್ಯತೆಯಲ್ಲಿ ಒಟ್ಟಿಗೆ ದೇಶ ಕಟ್ಟಲು ಉತ್ಸವಗಳು ಅಗತ್ಯ ಎಂದರು.
ಜ್ಞಾನ, ತಿಳಿವಳಿಕೆ, ಪ್ರೀತಿ, ವಿಶ್ವಾಸ ಇಂತಹ ಉತ್ಸವದಲ್ಲಿ ದೊರೆಯಲ್ಲಿದ್ದು, ಇಂತಹ ಮಾನವೀಯ ಮೌಲ್ಯಗಳನ್ನು ಅಳೆಯಲು ಸಾಧ್ಯವಿಲ್ಲ. 12ನೇ ಶತಮಾನ ದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಆದ ಸಾಮಾಜಿಕ ಕ್ರಾಂತಿ ಬಗ್ಗೆ ತಿಳಿದುಕೊಳ್ಳ ಬೇಕು. ನಮ್ಮ ಕಲೆ-ಸಂಸ್ಕøತಿ, ಭಾಷೆ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಕನ್ನಡದಲ್ಲಿ ಅಭಿವ್ಯಕ್ತಿಗೊಳ್ಳುವ ಎಲ್ಲದರ ಬಗ್ಗೆ ಆಸಕ್ತಿ ಹೊಂದಬೇಕು. ಪ್ರತಿಯೊಂದು ಈ ಭೂಮಿಯ ಮೇಲೆ ಪರಸ್ಪರ ಅವಲಂಬನೆ ಹೊಂದಿವೆ ಎಂಬುದನ್ನು ಅರಿತುಕೊಳ್ಳ ಬೇಕು ಎಂದು ಹೇಳಿದರು.

ಆರೋಪಗಳ ಪಟ್ಟಿಯನ್ನು ಪಕ್ಕಕ್ಕೆ ಇಟ್ಟು ನಾನೇನು ಮಾಡಬಲ್ಲೆ ಎಂದು ಆಲೋಚಿ ಸೋಣ. ನನ್ನ ಹಳ್ಳಿ, ಕುಟುಂಬಕ್ಕೆ ಏನು ಮಾಡಬಲ್ಲೇ ಎಂದು ಕಟ್ಟುವ ಚಿಂತನೆ ಯಲ್ಲಿ ಮುಂದುವರೆಯೋಣ ಎಂದು ಕಿವಿಮಾತು ಹೇಳಿದರು.

ಭಾರತದಲ್ಲಿ 6 ಲಕ್ಷಕ್ಕೂ ಹೆಚ್ಚು ಹಳ್ಳಿ ಗಳಿದ್ದು, ಆ ಪೈಕಿ ರಾಜ್ಯದಲ್ಲಿ 27 ಸಾವಿ ರಕ್ಕೂ ಹೆಚ್ಚು ಹಳ್ಳಿಗಳಿವೆ. ದುರಂತವೆಂದರೆ ಹಳ್ಳಿಗಳನ್ನು ಇಂದು ಪಕ್ಷ ಪದ್ಧತಿ ನಾಶ ಮಾಡು ತ್ತಿವೆ. ಹಳ್ಳಿ ಜನ ಕ್ರಿಯಾಶೀಲರಾಗುವುದು ಚುನಾವಣೆ ಬಂದಾಗ ಮಾತ್ರ ಎನ್ನುವಂತಾ ಗಿದೆ. ನಗರೀಕರಣದ ದಾಳಿಯಿಂದ ಅವರು ತಮ್ಮ ಬುದ್ಧಿವಂತಿಕೆ, ಭೂಮಿ, ಮಣ್ಣು, ಕೌಶಲ್ಯದಿಂದ ನಿಧಾನವಾಗಿ ಹಿಂದೆ ಸರಿಯುತ್ತಿದ್ದಾರೆ. ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುವುದೇ ಏಕೈಕ ಪರಿಹಾರ ಎಂಬ ನಂಬಿಕೆ ಬಹುತೇಕರಲ್ಲಿ ಹೆಚ್ಚಾಗುತ್ತಿದೆ. ಇಸ್ರೇಲ್ ದೇಶಕ್ಕೆ ರೈತರೊಂದಿಗೆ ಭೇಟಿ ನೀಡಿದ್ದೆ. ನೀರೇ ಇಲ್ಲದ ಮರುಭೂಮಿಯಲ್ಲಿ ಪುಷ್ಪೋದ್ಯಮದಲ್ಲಿ ಅಲ್ಲಿ ಪ್ರಗತಿ ಸಾಧಿಸ ಲಾಗಿದೆ. ಹಾಲೆಂಡ್ ದೇಶದಲ್ಲಿ ತುಲಿಪ್ ಎಂಬ ಹೂವಿನ ಬೆಳೆ ಆ ದೇಶದ ಆದಾಯದ ಪ್ರಮುಖ ಮೂಲವಾಗಿದೆ ಎಂದು ವಿವರಿಸಿದರು.

Translate »