ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪಂಡರಿ ಭಜನೆ, ವಿಶೇಷ ಪೂಜೆ
ಮೈಸೂರು

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪಂಡರಿ ಭಜನೆ, ವಿಶೇಷ ಪೂಜೆ

September 1, 2021

ಮೈಸೂರು, ಆ.31 (ಆರ್‍ಕೆಬಿ)- ಶ್ರೀಕೃಷ್ಣ ಜಯಂತಿ ಅಂಗ ವಾಗಿ ಮೈಸೂರಿನ ಕಬೀರ್ ರಸ್ತೆಯಲ್ಲಿರುವ ಪಾಂಡುರಂಗ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ಎರಡು ದಿನಗಳ ಕೃಷ್ಣ ಜನ್ಮಾಷ್ಟಮಿ ಅಚರಣೆ ಮಂಗಳವಾರ ವಿಶೇಷ ಪೂಜೆಯೊಂದಿಗೆ ಪೂರ್ಣಗೊಂಡಿತು. ಸೋಮವಾರ ರಾತ್ರಿ ಮತ್ತು ಮಂಗಳ ವಾರ ಬೆಳಿಗ್ಗೆ ಭಾವಸಾರ್ ಕ್ಷತ್ರಿಯ ಭಜನಾ ಮಂಡಳಿ ಅಧ್ಯಕ್ಷ ವೆಂಕಟೇಶ್‍ರಾವ್ ಪತಂಗೆ ನೇತೃತ್ವದಲ್ಲಿ ಸಾಂಪ್ರದಾಯಿಕ ಪಂಡರಿ ಭಜನೆ ನೆರವೇರಿತು. ನೂರಾರು ಮಂದಿ ವಿಶೇಷ ಪೂಜೆ ಸಂದರ್ಭದಲ್ಲಿ ಹಾಜರಿದ್ದು, ಪಾಂಡುರಂಗ ವಿಠಲ ಸ್ವಾಮಿಗೆ ಭಕ್ತಿ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮುಖಂಡರಾದ ರಮೇಶ್ ನಾಜರೆ, ಅಶೋಕ್ ನಾಜರೆ, ಚೈತನ್ಯಕುಮಾರ್ ಹಿರಾಸ್ಕರ್, ಮಂಡಳಿ ಕಾರ್ಯದರ್ಶಿ ರಾಕೇಶ್ ನಾಯಕ್, ಉಪಾಧ್ಯಕ್ಷ ಸುಭಾಷ್ ಪತಂಗೆ, ಪದಾಧಿಕಾರಿಗಳಾದ ನಾಗರಾಜ ಪತಂಗೆ, ಶಶಿಕುಮಾರ್ ಮಹೇಂದ್ರಕರ್, ಬಾಲಾಜಿ ರಾವ್ ತೇಲ್ಕರ್ ಇನ್ನಿತರರು ಉಪಸ್ಥಿತರಿದ್ದರು.

Translate »