ಮೈಸೂರು ಜಿಲ್ಲೆಯಲ್ಲಿ ಮತ್ತೆ ಸೋಂಕು ಹೆಚ್ಚಳ: ಮಂಗಳವಾರ 127 ಮಂದಿಗೆ ಕೊರೊನಾ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಮತ್ತೆ ಸೋಂಕು ಹೆಚ್ಚಳ: ಮಂಗಳವಾರ 127 ಮಂದಿಗೆ ಕೊರೊನಾ

September 1, 2021

ಮೈಸೂರು, ಆ.31(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಮಂಗಳವಾರ ಗಣನೀಯ ಹೆಚ್ಚಳವಾಗಿದೆ.
ಜಿಲ್ಲೆಯಲ್ಲಿ ಮಂಗಳವಾರ 3,714 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 127 ಜನರಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಅಂದರೆ ಪಾಸಿಟಿವಿಟಿ ಪ್ರಮಾಣ ಶೇ.3.4ರಷ್ಟಿದೆ. ಇತ್ತೀಚಿನ ದಿನಗಳಲ್ಲಿ ಶೇ.1ರ ಆಸುಪಾಸಿನಲ್ಲಿದ್ದ ಪಾಸಿಟಿವಿಟಿ ಪ್ರಮಾಣ ಇಂದು ದಿಢೀರ್ ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,76,079ಕ್ಕೆ ಏರಿಕೆಯಾಗಿದೆ. ಗುಣ ಮುಖರಾಗಿ ಮಂಗಳವಾರ ಡಿಸ್ಚಾರ್ಜ್ ಆದ 78 ಮಂದಿ ಸೇರಿ ಈವರೆಗೆ ಒಟ್ಟು 1,72,696 ಸೋಂಕಿತರು ಗುಣಮುಖರಾಗಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕಿನ 42 ವರ್ಷದ ಸೋಂಕಿತ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಮೈಸೂರು ನಗರದ 71 ವರ್ಷದ ವೃದ್ಧೆ ನಿನ್ನೆ, 75 ಹಾಗೂ 78 ವರ್ಷದ ವೃದ್ಧೆ ಮೊನ್ನೆ(ಆ.29) ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 2,362ಕ್ಕೆ ಹೆಚ್ಚಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,021ಕ್ಕೆ ಏರಿಕೆಯಾಗಿದೆ.

ರಾಜ್ಯದ ವರದಿ: ಬೆಂಗಳೂರು ನಗರ 287, ದಕ್ಷಿಣಕನ್ನಡ 224, ಉಡುಪಿ 150, ಮೈಸೂರು 127, ಕೊಡಗು 89, ಹಾಸನ 56, ಕೋಲಾರ 55, ಉತ್ತರಕನ್ನಡ 41, ಶಿವಮೊಗ್ಗ 36, ತುಮಕೂರು 30, ಚಿಕ್ಕಮಗಳೂರು 25, ಬೆಂಗಳೂರು ಗ್ರಾಮಾಂತರ 18, ಬೆಳಗಾವಿ 17, ಮಂಡ್ಯ 11, ದಾವಣಗೆರೆ 10, ಧಾರವಾಡ 9, ಚಿತ್ರದುರ್ಗ 8, ರಾಮನಗರ 6, ಚಾಮರಾಜನಗರ 5, ವಿಜಯಪುರ 4, ಕಲಬುರಗಿ 3, ಚಿಕ್ಕಬಳ್ಳಾಪುರ 2, ಗದಗ, ಹಾವೇರಿ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ತಲಾ 1 ಸೇರಿದಂತೆ ರಾಜ್ಯದಲ್ಲಿ ಮಂಗಳವಾರ 1,217 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಬಾಗಲಕೋಟೆ, ಬಳ್ಳಾರಿ, ಬೀದರ್ ಹಾಗೂ ರಾಯಚೂರು ಜಿಲ್ಲೆಗಳಲ್ಲಿಂದು ಒಂದೂ ಪ್ರಕರಣ ವರದಿಯಾಗಿಲ್ಲ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,49,445ಕ್ಕೆ ಏರಿಕೆಯಾಗಿದೆ. ಗುಣಮುಖರಾಗಿ ಇಂದು ಡಿಸ್ಚಾರ್ಜ್ ಆದ 1,198 ಮಂದಿ ಸೇರಿ ಈವರೆಗೆ ಒಟ್ಟು 28,93,715 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು 25 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 37,318ಕ್ಕೆ ಹೆಚ್ಚಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 18,386ಕ್ಕೆ ಇಳಿಕೆಯಾಗಿದೆ.

Translate »