ಎನ್‍ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟದಿಂದ ಮುಖ್ಯಮಂತ್ರಿಗೆ ಮನವಿ
ಮೈಸೂರು

ಎನ್‍ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟದಿಂದ ಮುಖ್ಯಮಂತ್ರಿಗೆ ಮನವಿ

September 1, 2021

ಮೈಸೂರು, ಆ.31(ಎಂಕೆ)- ಮೈಸೂ ರಿನ ಐತಿಹಾಸಿಕ ಮಹಾರಾಣಿ (ಎನ್‍ಟಿಎಂ) ಸರ್ಕಾರಿ ಮಾದರಿ ಶಾಲೆ ಉಳಿಸುವಂತೆ ಒತ್ತಾಯಿಸಿ ಎನ್‍ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಭೇಟಿ ಮಾಡಿದ ಒಕ್ಕೂಟದ ಸದಸ್ಯರು 150 ವರ್ಷ ಗಳ ಇತಿಹಾಸವುಳ್ಳ ಶಾಲೆಯೇ ಸ್ಮಾರಕ. ಈ ಶಾಲೆಯನ್ನು ಕೆಡವಿ ಇದೇ ಜಾಗದಲ್ಲಿ ಮತ್ತೊಂದು ಸ್ಮಾರಕ ಕಟ್ಟಿದರೆ ಒಂದು ಸ್ಮಾರಕವನ್ನು ಕೆಡವಿ ಮತ್ತೊಂದು ಸ್ಮಾರಕವನ್ನು ಕಟ್ಟಿದ್ದಂತಾಗುತ್ತದೆ. ಆದ್ದ ರಿಂದ ಸರ್ಕಾರ ಮಾದರಿ ಶಾಲೆಯನ್ನು ಕೆಡವಲು ಅವಕಾಶ ನೀಡಬಾರದು ಎಂದು ಕೋರಿದರು.

ಸರ್ಕಾರಿ ಶಾಲೆ ಜಾಗದಲ್ಲಿ ವಿವೇಕಾ ನಂದರ ಸ್ಮಾರಕ ನಿರ್ಮಾಣಕ್ಕೆ ರಾಮಕೃಷ್ಣ ಆಶ್ರಮ ಮುಂದಾಗಿರುವುದು ಸರ್ಕಾರಿ ಶಾಲೆಯನ್ನು ಮುಚ್ಚಬಾರದೆಂಬ ಸರ್ಕಾ ರದ ನಿರ್ಧಾರಕ್ಕೆ ವಿರುದ್ಧವಾಗಿದೆ. ಆದ್ದ ರಿಂದ ರಾಜ್ಯ ಸರ್ಕಾರ ಈ ಹಿಂದೆ ನೀಡಿದ್ದ ಆದೇಶವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು.

ಮನವಿಗೆ ಪ್ರತಿಕ್ರಿಯಿಸಿದ ಸಿಎಂ ಬಸವ ರಾಜ ಬೊಮ್ಮಾಯಿ, ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಒಕ್ಕೂಟದ ಸದಸ್ಯ ರೊಬ್ಬರು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು. ಈ ವೇಳೆ ಎನ್‍ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟದ ಪ. ಮಲ್ಲೇಶ್, ಸ.ರ.ಸುದರ್ಶನ್, ಬರಗೂರು ರಾಮಚಂದ್ರಪ್ಪ, ವಸುಂಧರ ಭೂಪತಿ ಇನ್ನಿತರರು ಉಪಸ್ಥಿತರಿದ್ದರು.

Translate »