ಕೆಆರ್‍ಎಸ್, ಕಬಿನಿಜಲಾಶಯಕ್ಕೆ ಸಿಎಂ ಬೊಮ್ಮಾಯಿ ಬಾಗಿನ ಸಮರ್ಪಣೆ
ಮೈಸೂರು

ಕೆಆರ್‍ಎಸ್, ಕಬಿನಿಜಲಾಶಯಕ್ಕೆ ಸಿಎಂ ಬೊಮ್ಮಾಯಿ ಬಾಗಿನ ಸಮರ್ಪಣೆ

July 21, 2022

ಮೈಸೂರು/ಶ್ರೀರಂಗಪಟ್ಟಣ, ಜು.20 (ಆರ್‍ಕೆಬಿ)- ಅವಧಿಗೆ ಮೊದಲೇ ತುಂಬಿ ತುಳುಕುತ್ತಿರುವ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕಬಿನಿ ಹಾಗೂ ಶ್ರೀರಂಗ ಪಟ್ಟಣ ತಾಲೂಕಿನ ಕೆಆರ್‍ಎಸ್ ಜಲಾ ಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಬಾಗಿನ ಸಮರ್ಪಿಸಿದರು.
ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್ ನಲ್ಲಿ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಪತ್ನಿ ಚೆನ್ನಮ್ಮ ಅವರೊಂದಿಗೆ ಚಾಮುಂಡಿಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಹೆಲಿಕಾಪ್ಟರ್ ನಲ್ಲಿ ಕಬಿನಿ ಜಲಾಶಯ, ನಂತರ ಕೆಆರ್‍ಎಸ್ ಜಲಾಶಯಕ್ಕೆ ಆಗಮಿಸಿ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ
ಪೂಜೆ ಸಲ್ಲಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಅವರು, ರಾಜ್ಯ ಮತ್ತು ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿ, ಸಾಂಪ್ರದಾಯಿಕವಾಗಿ ಸೀರೆ, ಕುಪ್ಪಸ, ಹೂವು, ಹಣ್ಣು, ಬಳೆ, ಅರಶಿನ-ಕುಂಕುಮ ಮತ್ತು ಅಕ್ಕಿಯನ್ನು ಒಳಗೊಂಡಿದ್ದ ಬಾಗಿನವನ್ನು ಎರಡೂ ಜಲಾಶಯಗಳಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಹಕಾರ ಸಚಿವÀ ಎಸ್.ಟಿ ಸೋಮಶೇಖರ್, ರೇಷ್ಮೆ, ಯುವಜನ ಸಬಲೀಕರಣ ಕ್ರೀಡಾ ಸಚಿವÀ ಡಾ.ಕೆ.ಸಿ.ನಾರಾಯಣ ಗೌಡ, ಶಾಸಕರಾದ ಅನಿಲ್ ಚಿಕ್ಕಮಾದು, ಹರ್ಷವರ್ದನ, ಎಂ.ಶ್ರೀನಿವಾಸ್, ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಕೆ.ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಎಲ್.ನಾಗೇಂದ್ರ, ವಿಧಾನಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಮೈಸೂರಿನ ಹಂಗಾಮಿ ಮೇಯರ್ ಸುನಂದ ಪಾಲನೇತ್ರ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು ಸಿದ್ದಲಿಂಗಸ್ವಾಮಿ, ವಸತಿವಿಹಾರ ಧಾಮಗಳ ಮಾಜಿ ಅಧ್ಯಕ್ಷ ಎಂ.ಅಪ್ಪಣ್ಣ, ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಕೃಷ್ಣರಾಜಸಾಗರ ಗ್ರಾಪಂ ಅಧ್ಯಕ್ಷ ಕೆ.ನರಸಿಂಹ, ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವತಿ ಇನ್ನಿತರರು ಉಪಸ್ಥಿತರಿದ್ದರು. ಸಾಮಾನ್ಯವಾಗಿ ಜುಲೈ ಅಂತ್ಯದಲ್ಲಿ ತುಂಬುತ್ತಿದ್ದ ಕಬಿನಿ ಜಲಾಶಯ, ಈ ಬಾರಿ ಬೇಗ ಭರ್ತಿಯಾಗಿದೆ. ಅದೇ ರೀತಿ ಕೆಆರ್‍ಎಸ್ ಜಲಾಶಯವೂ ಬೇಗನೇ ಭರ್ತಿಯಾಗಿದೆ. ಈ ಜಲಾಶಯಗಳ ಕಪಿಲ, ಕಾವೇರಿ ನದಿಗಳು ತಿ.ನರಸೀಪುರದಲ್ಲಿ ಸಂಗಮಗೊಂಡು ಮುಂದೆ ಹರಿಯಲಿವೆ.

Translate »