ಡಿ.23ರಂದು ಕೆ.ಎಸ್.ಪುಟ್ಟಣ್ಣಯ್ಯ ಹುಟ್ಟುಹಬ್ಬ, ಪ್ರತಿಮೆ ಅನಾವರಣ
ಮೈಸೂರು

ಡಿ.23ರಂದು ಕೆ.ಎಸ್.ಪುಟ್ಟಣ್ಣಯ್ಯ ಹುಟ್ಟುಹಬ್ಬ, ಪ್ರತಿಮೆ ಅನಾವರಣ

December 20, 2018

ಮೈಸೂರು: ವಿಶ್ವ ರೈತ ದಿನಾಚರಣೆ ಹಾಗೂ ರೈತ ಹೋರಾಟಗಾರ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ 70ನೇ ಹುಟ್ಟುಹಬ್ಬದ ಪ್ರಯುಕ್ತ ಡಿ.23ರಂದು ಬೆಳಿಗ್ಗೆ 11 ಗಂಟೆಗೆ ಪಾಂಡವಪುರ ತಾಲೂಕಿನ ಎಣ್ಣೆಹೊಳೆ ಕೊಪ್ಪಲು ಗ್ರಾಮದಲ್ಲಿ ದಿ. ಪುಟ್ಟಣ್ಣಯ್ಯ ಪುತ್ಥಳಿ ಅನಾವರಣ ಹಾಗೂ ಪ್ರಶಸ್ತಿ ಪ್ರದಾನ ಸಮಾ ರಂಭ ಹಮ್ಮಿಕೊಂಡಿರುವುದಾಗಿ ಕೆ.ಎಸ್.ಪುಟ್ಟಣ್ಣಯ್ಯ ಅಭಿ ಮಾನಿ ಬಳಗದ ವೈ.ಪಿ.ಮಂಜುನಾಥ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೃಷ್ಣಶಿಲೆಯಲ್ಲಿ ಮೂಡಿರುವ ಪುಟ್ಟಣ್ಣಯ್ಯರ ಪುತ್ಥಳಿ ಯನ್ನು ಗ್ರಾಮದ ಶಾಲಾ ಕಟ್ಟಡದ ಮುಂದೆ ಅನಾವರಣಗೊಳಿಸಲಾಗುವುದು ಎಂದರು. ಅದಕ್ಕೂ ಮುನ್ನ ಬೆಳಿಗ್ಗೆ 10.30ಕ್ಕೆ ಕ್ಯಾತನಹಳ್ಳಿಯಲ್ಲಿ ಪುಟ್ಟಣ್ಣಯ್ಯರ ಸಮಾಧಿಗೆ ಗೌರವ ಸಲ್ಲಿಸಲಾಗುವುದು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆ ಸ್ವಾಮಿ ಪ್ರತಿಮೆ ಅನಾವರಣ ಮಾಡುವರು. ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಯೋಗೇಂದ್ರ ಯಾದವ್ ಕಾಯಕ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.

ರೈತ ಸಾರಥಿ ಪುಟ್ಟಣ್ಣಯ್ಯ ಅಭಿಮಾನಿ ಬಳಗ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದೆ. ರೈತ ಮುಖಂಡ ವೈ.ಜಿ.ಬಾಲ ಕೃಷ್ಣೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ ಅಪ್ಪನ ಕುರಿತು ಮಾತನಾಡು ವರು. ಹಿರಿಯ ಸಾಹಿತಿ ದೇವನೂರು ಮಹದೇವ, ಗುರುಪ್ರಸಾದ್ ಕೆರೆಗೂಡು, ಡಾ. ಪಿ.ವಾಸು, ಅಮ್ಜದ್ ಪಾಷಾ, ನರಸಿಂಹಮೂರ್ತಿ, ಪುಟ್ಟಣ್ಣಯ್ಯರ ಪುತ್ರಿಯರಾದ ಸ್ಮಿತಾ, ಅಕ್ಷತಾ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಣ್ಣೆಹೊಳೆ ಕೊಪ್ಪಲಿನ ರಘು, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಕೆನ್ನಾಳು ನಾಗರಾಜು, ಕೆಂಪುರಾಜು, ಹೊಸೂರು ಕುಮಾರ್, ಹೊಸಕೋಟೆ ಬಸವರಾಜ್ ಉಪಸ್ಥಿತರಿದ್ದರು.

Translate »