ರಫೇಲ್ ವಿಚಾರದಲ್ಲಿ ಕೋರ್ಟ್‍ಗೆ ಕೇಂದ್ರದಿಂದ ಸುಳ್ಳು ಮಾಹಿತಿ ಕೇಂದ್ರ ಮಾಜಿ ಸಚಿವ ಎಂ.ಎಂ. ಪಲ್ಲಂರಾಜು ಆರೋಪ
ಮೈಸೂರು

ರಫೇಲ್ ವಿಚಾರದಲ್ಲಿ ಕೋರ್ಟ್‍ಗೆ ಕೇಂದ್ರದಿಂದ ಸುಳ್ಳು ಮಾಹಿತಿ ಕೇಂದ್ರ ಮಾಜಿ ಸಚಿವ ಎಂ.ಎಂ. ಪಲ್ಲಂರಾಜು ಆರೋಪ

December 20, 2018

ಮೈಸೂರು: ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ತಪ್ಪು ಮಾಹಿತಿ ನೀಡಿದ್ದು, ದೇಶದ ಜನತೆಯನ್ನು ದಿಕ್ಕು ತಪ್ಪಿಸುವ ಸಂಚು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸತ್ಯಾಸತ್ಯತೆ ಕಂಡು ಹಿಡಿಯಲು ಜಂಟಿ ಸದನ ಸಮಿತಿ ರಚಿಸಬೇಕು ಎಂದು ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಘಟಕದ ವಕ್ತಾರ ಎಂ.ಎಂ. ಪಲ್ಲಂರಾಜು ಒತ್ತಾಯಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಸುಳ್ಳು ಮಾಹಿತಿಯುಳ್ಳ ಅಫಿಡವಿಟ್ ಸಲ್ಲಿಸಿದೆ. ವಿಮಾನಗಳ ಬೆಲೆಯನ್ನು ಪರಿಶೀಲಿಸಿದ್ದೇವೆ ಎಂದು ಹೇಳಿ ಸುಳ್ಳು ಮಾಹಿತಿ ನೀಡಲಾ ಗಿದೆ. ಕೇಂದ್ರ ಸರ್ಕಾರ ರಫೇಲ್ ಯುದ್ಧ ವಿಮಾನ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್‍ನಿಂದ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಸುಳ್ಳು ಹೇಳುತ್ತಿದೆ. ಸಂವಿಧಾನಾತ್ಮಕವಾಗಿ ಈ ವಿಚಾರ ನನಗೆ ಸಂಬಂಧಪಟ್ಟದ್ದಲ್ಲ ಎಂದು ಕೋರ್ಟ್ ತಿಳಿಸಿದೆ. ಕಾಂಗ್ರೆಸ್ ಈ ವಿಚಾರ ವನ್ನು ಮೊದಲೇ ತಿಳಿಸಿತ್ತು. ಆದರೆ ಕೇಂದ್ರ ಸರ್ಕಾರ ಈ ವಿಚಾರವನ್ನು ಮರೆಮಾಚಿ, ದೇಶದ ಜನರಿಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದರು.

ಈ ಹಿಂದಿನ ಕಾಂಗ್ರೆಸ್ ಸÀರ್ಕಾರ ಒಂದು ರಫೇಲ್ ವಿಮಾನಕ್ಕೆ 526 ಕೋಟಿ ರೂ. ದರ ನಿಗದಿ ಮಾಡಿತ್ತು. ಆದರೆ ಇದೀಗ ಅದೇ ವಿಮಾನಕ್ಕೆ 1620 ಕೋಟಿ ರೂ. ನಿಗದಿ ಮಾಡಿದೆ. ಅಲ್ಲದೆ 126 ವಿಮಾನಗಳಿಗೆ ಒಪ್ಪಂದವಾಗಿದ್ದನ್ನು ಕೇವಲ 36 ವಿಮಾನಗಳಿಗೆ ಇಳಿಸಿದೆ. ಈ ಮಾಹಿತಿಗಳನ್ನು ಸ್ಪಷ್ಟವಾಗಿ ನೀಡಿಲ್ಲ. ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದು, ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಅದನ್ನು ಒಪ್ಪಿಸಲಾಗಿದೆ ಎಂಬುದಾಗಿ ಸುಳ್ಳು ಹೇಳಿದೆ. ಈ ಮೂಲಕ ನ್ಯಾಯಾಲಯವನ್ನೇ ದಿಕ್ಕು ತಪ್ಪಿಸಲು ಮುಂದಾಗಿದೆ ಎಂದು ದೂರಿದರು.

ಹಗರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳುವ ಕೇಂದ್ರ ಸÀರ್ಕಾರ, ಜಂಟಿ ಸಂಸ ದೀಯ ಸಮಿತಿ (ಜೆಪಿಸಿ) ರಚಿಸಿ ವಿಚಾರಣೆಗೆ ಒಪ್ಪಿಸಲಿ. ಯುದ್ಧ ವಿಮಾನ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಸುಮಾರು 30 ಸಾವಿರ ಕೋಟಿ ಲೂಟಿ ಮಾಡಿದೆ. ಭದ್ರತೆ ವಿಚಾರ ಮುಂದಿಟ್ಟುಕೊಂಡು ಯುದ್ಧ ವಿಮಾನದ ಬೆಲೆಯನ್ನು ಬಹಿರಂಗಪಡಿಸಲು ಕೇಂದ್ರ ಸರಕಾರ ಹಿಂದೇಟು ಹಾಕುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿ¯್ಲÁ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ವಕ್ತಾರರಾದ ಹೆಚ್.ಎ.ವೆಂಕಟೇಶ್, ಎಂ.ಲಕ್ಷ್ಮಣ್, ಮುಖಂಡರಾದ ಬಸವ ರಾಜ ನಾಯಕ್, ಅಬು ಮೊಹಮ್ಮದ್, ಶಿವಪ್ರಸಾದ್, ಈಶ್ವರ್ ಚಕ್ಕಡಿ ಇದ್ದರು.

Translate »